ಪ್ರತಿಯೊಬ್ಬರೂ ಕ್ರೀಡಾಸ್ಪೂರ್ತಿ ಮೆರೆಯಬೇಕು: ತಾಪಂ ಸದಸ್ಯ ಶರಣಪ್ಪ

ಲೋಕದರ್ಶನ ವರದಿ

ಯಲಬುರ್ಗಾ  25: ಪ್ರತಿಯೊಬ್ಬರೂ ತಮ್ಮ ಶಾರೀರಿಕ ಬಲ ವೃದ್ಧಿಗೆ ಕ್ರೀಡೆ ರಾಮಬಾಣವಾಗಿದೆ ಎಂದು ತಾಪಂ ಸದಸ್ಯ ಶರಣಪ್ಪ ಈಳಿಗೇರ್ ಹೇಳಿದರು.

ತಾಲೂಕಿನ ಬಂಡಿ ಗ್ರಾಮದ ಕನರ್ಾಟಕ ಪಬ್ಲಿಕ್ ಶಾಲೆ ಮತ್ತು ಪ್ರಾಥಮಿಕ, ಪೌಢ ಶಾಲಾ ದೈಹಿಕ ಶಿಕ್ಷಕರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು. 

ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದುರಿಂದ ನಾಯಕತ್ವ ಮತ್ತು ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ಕ್ರೀಡಾಸ್ಪೂರ್ತಿ ಮೆರೆಯಬೇಕು, ಮಕ್ಕಳು ಕಲಿಕೆಯ ಜೊತೆಗೆ ಆಟೋಟಗಳಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ವಿದ್ಯಾಥರ್ಿಗಳು ದುಶ್ಚಟಗಳಿಗೆ ಹೋಗದೇ ಕ್ರೀಡಾಸ್ಪೂತರ್ಿ ಬೆಳೆಸಿಕೊಳ್ಳಬೇಕು ಎಂದರು.

ಮಾಜಿ ಜಿಪಂ ಸದಸ್ಯ ಅಡಿವೆಪ್ಪ ಬಾವಿಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾಥರ್ಿಗಳು ಕೇವಲ ಅಂಕ ಗಳಿಸದೇ ತಮ್ಮ ಸಮಯವನ್ನು ಸೀಮಿತಗೊಳಿಸದೇ ಕ್ರೀಡಯಲ್ಲಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಂದರು. ಅಕ್ಷರ ದಾಸೋಹ ಅಧಿಕಾರಿ ಅಧಿಕಾರಿ ಎಫ್.ಎಂ.ಕಳ್ಳಿ ಮಾತನಾಡಿದರು.

ಜಿಪಂ ಸದಸ್ಯೆ ನೀಲಮ್ಮ ಅಡಿವೆಪ್ಪ ಬಾವಿಮನಿ ಧ್ವಜಾರೋಹಣ ನೆರವೇರಿಸಿದರು. ಸಿಡಿಸಿ ಉಪಾಧ್ಯಕ್ಷ ಕಲ್ಲಪ್ಪ ತೊಂಡಿಹಾಳ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು. ಪ್ರಾಚಾರ್ಯ ಬಿ.ಎಸ್.ಅಸುಂಡಿ ಅಧ್ಯಕ್ಷತೆ ವಹಿಸಿದ್ದರು. 

ದೈಹಿಕ ಶಿಕ್ಷಾಣಾಧಿಕಾರಿ ಶರಣಪ್ಪ ವೀರಾಪೂರ, ಪ್ರಾಚಾರ್ಯರಾದ ಸೋಮನಗೌಡ ಪಾಟೀಲ್, ಟಿ.ಬಸವರಾಜ, ಈಶಪ್ಪ ಮುಗಳಿ, ಸಂಗಮೇಶ ನರೇಗಲ್, ಮುಖಂಡರಾದ ಶಿವಶರಣಪ್ಪ ನೆಲಾಗಣಿ, ದೊಡ್ಡಬಸಪ್ಪ ಭಾವಿಮನಿ, ಬಸವರಾಜ ಕೊತಬಾಳ, ವೀರಣ್ಣ ಸೂಡಿ, ಶಿವಶಂಕರ್ ಲಿಂಗಶೆಟ್ಟರ್, ರುದ್ರಗೌಡ ಸೊಲಬನಗೌಡ, ಶರಣಪ್ಪ ಭದ್ರಗೌಡ್ರ, ಬಸವಲಿಂಗಪ್ಪ ಅರಕೇರಿ, ಇದ್ದರು.