ಸರ್ವರೂ ಗುರು ತೋರಿಸಿದ ದಾರಿಯಲ್ಲಿ ಸಾಕ್ಷಾತ್ಕಾರ ಪಡೆದುಕೊಳ್ಳಬೇಕು :ನಾಗರಾಜಾನಂದ
ರಾಣಿಬೆನ್ನೂರ 10: ಕಾರ್ತಿಕೋತ್ಸವವು ಕತ್ತಲೆಯಿಂದ ಬೆಳಕಿನಡೆಗೆ, ಅಜ್ಞಾನದಿಂದ ಸುಜ್ಞಾನದಡೆಗೆ ಸಾಗುವುದೇ ಈ ಉತ್ಸವದ ತಾತ್ಪರ್ಯವಾಗಿದೆ, ಸರ್ವರೂ ಗುರು ತೋರಿಸಿದ ದಾರಿಯಲ್ಲಿ ಸಾಗುವ ಮೂಲಕ ಸಾಕ್ಷಾತ್ಕಾರ ಪಡೆದುಕೊಳ್ಳಬೇಕು ಎಂದು ಗುರು ನಾಗರಾಜಾನಂದ ಸ್ವಾಮಿಜಿ ಹೇಳಿದರು.
ಶನಿವಾರ ಸಂಜೆ ಸುಕ್ಷೇತ್ರ ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ನಡೆದ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂದವಾದ ಪಣತಿಗೆ, ಗುರಿ ಎಂಬ ಬತ್ತಿ ಹಾಕಿ, ಜ್ಞಾನವೆಂಬ ಎಣ್ಣಿ ಹಾಕಿ, ಸುಜ್ಞಾನ ಎಂಬ ಬೆಳಕನ್ನು ಹಚ್ಚಿದಾಗ ಸರ್ವರ ಹೃದಯದಲ್ಲಿ ಅಡಗಿರುವ ಅಜ್ಞಾನವೆಂಬ ಕತ್ತುಲು ತೊಲಗುವುದು. ಅಲ್ಲದೆ ಸಿದ್ಧಾರೂಢ ದರ್ಶನ ಪಡೆದವರಿಗೆ ಮಾತ್ರ ಬೆಳಕು ಕಾಣಲು ಸಾಧ್ಯ ಎಂದು ಶ್ರೀಗಳು ನುಡಿದರು.
ಕರೂರ ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ಧನ ಕಡೂರ, ಶ್ರೀಮಠದ ಟ್ರಸ್ಟ್ ಅಧ್ಯಕ್ಷ ಫಕ್ಕೀರ್ಪ ಗೌಡ್ರ, ಡಾ. ಸುನಿತಾ, ಶಿವಪ್ಪ ಬಣಕಾರ, ಡಾಕೇಶ ಲಮಾಣಿ, ಗುಡ್ಡೇಶ ಹಡೆಯಾಲ, ಗೋಪಾಲ ಕೊಡ್ಲೇರ, ಗುರುಶಾಂತಪ್ಪ ಬಾಗಿಲದವರ ಸೇರಿದಂತೆ ನೂರಾರು ಭಕ್ತರು ಇದ್ದರು.
ಬೆಳಗ್ಗೆ ಶ್ರೀಸದ್ಧಾರೂಢ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ ಮಂಗಳಾರತಿಯೊಂದಿಗೆ ಪೂಜಾ ವಿಧಿ ವಿಧಾನಗಳ ನಡೆದವು. ಸಂಜೆ ಕಾರ್ತಿಕೋತ್ಸವ ನಡೆಯಿತು. ತದನಂತರ ಅನ್ನಸಂತರೆ್ಣ ಜರುಗಿತು.
ಫೋಟೊ:10ಆರ್‌ಎನ್‌ಆರ್09ರಾಣಿಬೆನ್ನೂರ:ತಾಲೂಕಿನ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಕಾರ್ತಿಕೋತ್ಸವಕ್ಕೆ ಗುರು ನಾಗರಾಜಾನಂದ ಸ್ವಾಮಿಜಿ ಚಾಲನೆ ನೀಡಿದರು.
ಫೋಟೊ:10ಆರ್‌ಎನ್‌ಆರ್09ಎರಾಣಿಬೆನ್ನೂರ:ತಾಲೂಕಿನ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಕಾರ್ತಿಕೋತ್ಸವದ ನಂತರ ನಡೆದ ಧರ್ಮಸಭೆಯಲ್ಲಿ ಗುರು ನಾಗರಾಜಾನಂದ ಸ್ವಾಮಿಜಿ ಮಾತನಾಡಿದರು.