ವೈರಸ್ ಮುಕ್ತವಾಗಲು ಎಲ್ಲರೂ ನಿಯಮಗಳನ್ನು ಪಾಲಿಸಲೇಬೇಕು: ಜಿಲ್ಲಾಧಿಕಾರಿ

ಲೋಕದರ್ಶನವರದಿ

ರಾಣೇಬೆನ್ನೂರು: ಮೇ.17: ವಿಶ್ವವೂ ಸೇರಿದಂತೆ ಎಲ್ಲ ರಾಷ್ಟ್ರಗಳಲ್ಲಿ ಇಂದು ಕರೋನಾ ವೈರಸ್(ಕೋವಿಡ್-19) ಸೊಂಕು ರೋಗ ಹರಡಿ ಜನಜೀವನದ ಬದುಕು ಅಸ್ತವ್ಯಸ್ಥವಾಗಿದೆ.  ರಾಜ್ಯದಲ್ಲಿ ಕೆಲವು ಜಿಲ್ಲೆಗಳು ಮಾತ್ರ ಕರೋನಾ ವೈರಸ್ ಕಂಡಿದ್ದು, ಕಳೆದವಾರದವರೆಗೂ ಹಾವೇರಿ ಜಿಲ್ಲೆ ಕರೋನಾ ಮುಕ್ತವಾಗಿತ್ತು.  ನಾವೆಲ್ಲರೂ ಸಂತೋಷಪಟ್ಟಿದ್ದೇವು. ಆದರೆ, ಧುತ್ತನೇ ಬಂದೆರಗಿದ 2 ಪಾಸಿಟಿವ್ ಪ್ರಕರಣದಿಂದ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ಹೇಳಿದರು.

ಅವರು ಶನಿವಾರ ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶ್ರೀ ಶರಣ ಬಸವೇಶ್ವರ ಸಂಸ್ಥಾನ ಮಠದಲ್ಲಿ ನಡೆದ ವಾರಿಯರ್ಸ್ಗಳ ಗೌರವ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಶ್ರೀಮಠದ ವತಿಯಿಂದ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಈ ಸೊಂಕು ರೋಗವನ್ನು ನಿನರ್ಾಮ ಮಾಡಲು ಸಮರ್ಥವಾಗಿ ಎದುರಿಸಲು ಆರಂಭದಿಂದಲೂ ಅನೇಕ ರೀತಿಯ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದ್ದರ ಪರಿಣಾಮ ಬಹುತೇಕವಾಗಿ ನಾವೆಲ್ಲರೂ ಕರೋನಾ ಮುಕ್ತವಾಗಿ ಇಂದು ಸುರಕ್ಷಿತವಾಗಿರಲು ಸಾಧ್ಯವಾಗಿದೆ ಎಂದು ಸಕರ್ಾರಗಳ ಕ್ರಮವನ್ನು ಪ್ರಸಂಶಿಸಿದ ಅವರು ಪ್ರತಿಯೊಬ್ಬ ನಾಗರೀಕರು ಸಕರ್ಾರ ಜಾರಿಗೆ ತಂದ ಕಾನೂನನ್ನು ಕಡ್ಡಾಯಾಗಿ ಪಾಲಿಸುವುದರ ಮೂಲಕ ನಮ್ಮನ್ನು  ಮತ್ತು ನಮ್ಮ ಕುಟುಂಬವನ್ನು ಸುರಕ್ಷಿತವಾಗಿರಲು ಮುಂದಾಗಬೇಕು ಎಂದು ಗ್ರಾಮೀಣ ನಾಗರೀಕರಿಗೆ ಕರೆ ನೀಡಿದರು.

ಮಠ-ಪೀಠಗಳು, ಸಮಾಜ ಚಿಂತಕರು, ಧಾರ್ಶನಿಕರು, ಸಾಧು-ಸಂತರು, ಈ ನಾಡಿನ ಹರಿಕಾರರು ಅತ್ಯಂತ ಶಾಂತಿ ಮಂತ್ರವನ್ನು ಘೋಷಿಸಿ ಸಮಗ್ರ ಮಾನವ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ತ್ಯಾಗಮಾಡಿದ್ದಾರೆ.  ಅಂತಹ ಪರಂಪರೆಯಲ್ಲಿ ಇಂದಿನ ಕರೋನಾ ಸಂಕಷ್ಠದ ಸಂಕ್ರಮದ ಕಾಲದಲ್ಲಿ ಶ್ರೀಮಠದ ಪೀಠಾಧಿಪತಿಗಳು ಮಾಧ್ಯಮದವರಿಗೆ, ಆಶಾ-ಅಂಗನವಾಡಿ ಕಾರ್ಯಕರ್ತರಿಗೆ ಸಮಾಜ ಚಿಂತಕರಿಗೆ, ದಾನಿಗಳಿಗೆ, ಹೃದಯಸ್ಪಷರ್ಿ ಗೌರವಿಸುತ್ತಿರುವ ಕಾರ್ಯವು ಇಂದಿನ ಯುವ-ಸಮುದಾಯಕ್ಕೆ ಇತಿಹಾಸದ ಪರಿಕಲ್ಪನೆಯನ್ನು ಮೂಡಿಸಿದಂತಾಗಿದೆ.  ಇಂತಹ ಕಾರ್ಯ ಎಲ್ಲ ಮಠ-ಪೀಠಗಳ ಪೀಠಾಧಿಕಾರಿಗಳು, ಧಮರ್ಾಧಿಕಾರಿಗಳು, ನೆರವೇರಿಸುತ್ತಿರುವುದು ಭಾರತದ ಪರಂಪರೆಗೆ ಸಾಕ್ಷಿಯಾಗಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ, ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನಮಠದ ಪೀಠಾಧಿಪತಿ ಶ್ರೀ ಪ್ರಣವಾನಂದರಾಮ ಮಹಾಸ್ವಾಮಿಗಳು ಅವರು ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ, ಉಪ-ವಿಭಾಗಾಧಿಕಾರಿ ದೀಲೀಪ್ ಶಶಿ, ಡಿವೈಎಸ್ಪಿ ಟಿ.ವಿ.ಸುರೇಶ್,  ಶಾಸಕ ಅರುಣಕುಮಾರ ಪೂಜಾರ, ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ರಮೇಶ್ ಗುತ್ತಲ್, ಅನೀಲ್ ಸಿದ್ಧಾಳಿ, ಭೂದಾನಿಗಳಾದ ಮಲ್ಲಿಕಾಜರ್ುನ ಬೆಟ್ಟಪ್ಪ ಸಣ್ಣಬೊಮ್ಮಾಜೀ ಸೇರಿದಂತೆ ಮತ್ತಿತರ ಗಣ್ಯರನ್ನು ದಾನಿಗಳನ್ನು ಸನ್ಮಾನಿಸಿ  ಗೌರವಿಸಿದರು. 

     ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಾದ ಎಸ್.ಜಿ.ಮಹಾನುಭಾವಿಮಠ, ಹಾಲೇಶ್ ಶಿವಪ್ಪನವರ, ಶಿವಕುಮಾರ ಓಲೇಕಾರ, ಮನೋಹರ ಮಲ್ಲಾಡದ, ಬಸವರಾಜ ಸರೂರ, ಶಿವಕುಮಾರ ಜಾದವ, ಕೆ.ಎಸ್.ನಾಗರಾಜ, ಎಂ.ಚಿರಂಜೀವಿ, ಸಂತೋಷ ಮಹಾಂತ್ ಶೆಟ್ಟರ್, ಮಂಜುನಾಥ ಹೊಸಪೇಟೆ, ಮುಕ್ತೇಶ್ ಕೂರಕುಂದಮಠ, ಮಂಜುನಾಥ ಕುಂಬಳೂರ, ಜಿ.ವಿ.ದೀಪಾವಳಿ, ಯಶವಂತ್ ಪಾಸ್ತೆ, ನಾಗರಾಜ ಹಾವನೂರ ಮೊದಲಾದವರನ್ನು ಕಿಟ್ಗಳನ್ನು ವಿತರಿಸಿ ಗೌರವಿಸಲಾಯಿತು.

  ವೇದಿಕೆಯಲ್ಲಿ ಯಲ್ಲಪ್ಪ ಸುವರ್ೆ, ದಯಾಲಾಲ್ ಸಂಘವಿ, ಬಸಪ್ಪ ಸುವರ್ೆ ಸೇರಿದಂತೆ ಮತ್ತಿತರ ಗಣ್ಯರು ಉಪ್ಥಿತರಿದ್ದರು.  ಪತ್ರಕರ್ತ ಕೆ.ಎಸ್.ನಾಗರಾಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಜಾದವ ನಿರೂಪಿಸಿ ವಂದಿಸಿದರು.