ಮಾಸ್ಕೋ, ಜೂನ್ 8,ನ್ಯೂಜಿಲೆಂಡ್ ನಲ್ಲಿ ಸದ್ಯ ಯಾರೂ ಕೊರೊನಾ ವೈರಾಣು ಸೋಂಕಿನಿಂದ ಬಳಲುತ್ತಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.ಫೆಬ್ರವರಿ 28 ರ ನಂತರ ಇದೇ ಮೊದಲ ಬಾರಿಗೆ ಸೋಂಕಿನ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ. ಆದರೂ ಕೊರೊನಾ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವುದನ್ನು ಮುಂದುವರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಪ್ರಧಾನ ನಿರ್ದೇಶಕ ಡಾ|| ಅಶ್ಲೇ ಬ್ಲೂಮ್ ಫೀಲ್ಸ್ ಹೇಳಿದ್ದಾರೆ.
ಕಳೆದ 48 ಗಂಟೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿರುವವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲವಾಗಿ ಅವರನ್ನು ಗುಣಮುಖರು ಎಂದು ಪರಿಗಣಿಸಿ ಮನೆಗೆ ವಾಪಸ್ ಕಳುಹಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೇ ಕಳೆದ 17 ದಿನಗಳಿಂದ ಕೊರೊನಾ ಸೋಂಕಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದೂ ಸಹ ಸಚಿವಾಲಯದ ಹೇಳಿಕೆ ತಿಳಿಸಿದೆ. ನ್ಯೂಜಿಲೆಂಡ್ ನಲ್ಲಿ ಒಟ್ಟು 1,154 ಕೊರೊನಾ ವೈರಾಣು ಸೋಂಕು ಪ್ರಕರಣಗಳು ದೃಢಪಟ್ಟಿದ್ದು 22 ಜನರು ಸಾವನ್ನಪ್ಪಿದ್ದರು. ಉಳಿದ 1482 ಜನರೂ ಗುಣಮುಖರಾಗಿದ್ದಾರೆ.