ಪ್ರತಿಯೊಬ್ಬ ನೇಕಾರರು ತರಬೇತಿ ಪಡೆದು ಯೋಜನೆಯ ಲಾಭಪಡೆದುಕೊಳ್ಳಿ: ನಾಯಕ

Every weaver should trained and benefited from the scheme: leader

ರಾಣೆಬೆನ್ನೂರು: ಜ 20 ತಾಲೂಕಿನ ತುಮ್ಮಿಕಟ್ಟಿ ಪಟ್ಟಣದ ನೇಕಾರರು ಹೊಸ ಯುವಕರಿಗೆ ನೇಯ್ಗೆ ತರಬೇತಿ ಕೊಟ್ಟು ಅವರಿಗೆ ರಾಜ್ಯ ಮತ್ತು ಕೇಂದ್ರ  ಸರ್ಕಾರದಿಂದ ಬರುವ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು, ಪ್ರತಿಯೊಬ್ಬ ನೇಕಾರರು ತರಬೇತಿಯನ್ನು ಪಡೆದು  ಯೋಜನೆಯ ಲಾಭವನ್ನು  ಪಡಿಸಿಕೊಳ್ಳಬೇಕು ಎಂದು  ಜವಳಿ ಇಲಾಖೆಯ ಜಿಲ್ಲಾ ನಿರ್ದೇಶಕ ಅಜಿತ ನಾಯಕ ಹೇಳಿದರು.  

ಅವರು ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಂ.3 ನೇಕಾರ ಸಹಕಾರಿ ಸಂಘದ ಆಶ್ರಯದಲ್ಲಿ ಭಾರತ ಸರ್ಕಾರ ನೇಕಾರ ಸೇವಾ ಕೇಂದ್ರ ಬೆಂಗಳೂರು ಘಟಕದಿಂದ ಏರಿ​‍್ಡಸಿದ್ದ ಸಮರ್ಥ ಯೋಜನೆಯಡಿಯಲ್ಲಿ 45 ದಿನಗಳ ಕಾಲ ನೇಕಾರರಿಗೆ ನೇಯ್ಗೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತಾನಾಡಿದರು. ನೇಕಾರರಿಗೆ ಇತ್ತೀಚಿನ ವರ್ಷಗಳಲ್ಲಿ ವೃತ್ತಿಯನ್ನು ಉತ್ತೇಜಿಸಲು ಅನೇಕ ಕ್ರಿಯಾ ಯೋಜನೆಗಳನ್ನು ರೂಪಿಸಿದೆ. ಅದರ ಸದುಪಯೋಗವನ್ನು ವೃತ್ತಿಪರತೆ ಹೊಂದಿರುವವರ ಹಿರಿಯರು ಮತ್ತು ಭವಿಷ್ಯದ ಯುವಕರು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.ಬೆಂಗಳೂರಿನ ನೇಕಾರ ಸೇವಾ ಕೇಂದ್ರದ ತುಳಸಿ ರಾಮನ್ ಮಾತನಾಡಿ, ಪ್ರತಿವರ್ಷ ನೇಕಾರರಿಗೆ ತರಬೇತಿ ಕೊಡಲಾಗುವುದು. ಈಗಾಗಲೆ ರಾಜ್ಯದಲ್ಲಿ ಆರು ಕಡೆ ನೇಕಾರ ಸೇವಾ ಕೇಂದ್ರದಿಂದ ಸಮರ್ಥ ಯೋಜನೆಯಡಿಯಲ್ಲಿ ನೇಕಾರರಿಗೆ 45 ದಿನಗಳ ಕಾಲ ನೇಯ್ದೆ ತರಬೇತಿ ಕೊಟ್ಟು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಯಿಂದ ಪ್ರತಿಯೊಬ್ಬ ನೇಕಾರರು ತರಬೇತಿ ಪಡೆದುಕೊಳ್ಳಬೇಕು. ನಂತರ ಸ್ವಂತ ಕೈಮಗ್ಗ ಹಾಕಿಕೊಂಡು ಬಟ್ಟೆ ನೇಯುವ ಕೆಲಸ ನಿರ್ವಹಿಸಿದರೆ ಬಡತನ ನಿರ್ಮೂಲನೆಯಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೊನ್ನಾಳಿ, ರಾಘು ಗಡ್ಡದ, ಕೃಷ್ಣಪ್ಪ ಹಳ್ಳದಂಡಿ, ವಿಶ್ವನಾಥ ತಡಕನಹಳ್ಳಿ, ವಿಠಲ ವೆಂಕಣ್ಣನವರ, ಹರೀಶ ಹಳ್ಳದಂಡಿ, ಸತೀಶ ವೆಂಕಣ್ಣನವರ, ಶಿವು ಗುರುಂ, ತಿರಕಪ್ಪ ಶೇಷಗಿರಿ, ಶೇಖರ​‍್ಪ ಜೋಗಾರ, ಆಂಜನಪ್ಪ ಬೆಂಕಿ, ಬಸವರಾಜ ಕಠಾರಿ, ಬಸವರಾಜ ಶೇಷಗಿರಿ, ಗಣೇಶ ಶೆಟ್ಟೆಕೇರಿ ಸೇರಿದಂತೆ ಮತ್ತಿತರರು ಇದ್ದರು.