ಅಥಣಿ 18: ಕನರ್ಾಟಕದಲ್ಲಿ ಕನ್ನಡ ಅಳಿವಿನಂಚಿನಲ್ಲಿದ್ದು ಆ ಕುರಿತು ಕನ್ನಡಿಗರೆಲ್ಲರೂ ಚಿಂತನೆ ಮಾಡಿ, ಈ ನೆಲದಲ್ಲಿ ವಾಸಿಸುವ ನಮಗೆ ಬದುಕಿನ ಭಾಷೆಯಾದ ಕನ್ನಡವನ್ನು ಉಳಿಸಿಕೊಂಡು ಹೋಗುವಲ್ಲಿ ಹೆಚ್ಚಿನ ಆಸ್ಥೆ ವಹಿಸುವ ಅಗತ್ಯತೆ ಇದೆ ಎಂದು ಸಮ್ಮೇಳನಾಧ್ಯಕ್ಷ ಕೆ.ಎಲ್ ಕುಂದರಗಿ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಅಥಣಿ ತಾಲೂಕಾ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆ ವಹಿಸಿ ಮೇಳಿನಂತೆ ಮಾತನಾಡಿ, ಕನ್ನಡವನ್ನು ಮೊದಲು ಮಕ್ಕಳಲ್ಲಿ ಬೆಳೆಸಬೇಕು. ಭಾಷಣ ನಿಬಂಧಗಳನ್ನು ಎರ್ಪಡಿಸಿ ಭಾಷಾಭಿಮನಾನ ಬೆಳೆಸಬೇಕು ಎನ್ನುತ್ತ,ಅಥಣಿಯಿಂದ ವಿಜಯಪೂರಕ್ಕೆ ಶೇಡಬಾಳದಿಂದ ರೈಲು ಮಾರ್ಗವಾಗುವ ಅವಶ್ಯಕತೆ ಇದ್ದು,ಅದು ಇತ್ಯರ್ಥಗೊಳ್ಳಿಸುವಲ್ಲಿ ರಾಜಕೀಯ ಧುರೀಣರು ಆಸಕ್ತಿ ತೋರಬೇಕೆಂದರು. ಬೆಳಗಾವಿ ಗಡಿ ವಿಭಜನೆಯ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ಅದರ ತೀಪರ್ು ಹೊರ ಬರುವ ವರೆಗೆ ವಿಭಜನೆ ಮಾಡುವುದು ಸೂಕ್ತವಲ್ಲ ಎಂದರು.
ಸಸಿಗೆ ನೀರೆರೆಯುವ ಮೂಲಕ ಸಮ್ಮೇಳನವನ್ನು ವಿಮೋಚನಾ ಅಧ್ಯಕ್ಷ ಬಿ.ಎಲ್ ಪಾಟೀಲ ಉದ್ಘಾಟಿಸಿ ಮಾತನಾಡಿ, ಕನ್ನಡ ಏನಾದರೂ ಉಳಿದಿದ್ದರೆ ಅದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಉಳಿದಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಸರಕಾರ ಕನ್ನಡ ಉಳಿವಿಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆ ಇದೆ. ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿಬೇಕು ಎಂದರು. ನಿಕಟಪೂರ್ವ ಸವರ್ಾಧ್ಯಕ್ಷೆ ಶಾಲಿನಿತಾಯಿ ದೊಡಮನಿ ಮಾತನಾಡಿದರು.
ಸಾನಿಧ್ಯವನ್ನು ವಹಿಸಿದ್ದ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಜಿಗಳು ಮಾತನಾಡಿ, ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯ ಕಟ್ಟುಪಾಡಿಗೆ ಬಿದ್ದು ಈಡೀ ಆಮಂತ್ರಣ ಪತ್ರಿಕೆ ತುಂಬ ರಾಜಕಾರಣಿಗಳ ಹೆಸರನ್ನು ಹಾಕುತ್ತಾರೆ. ಯಾರೋಬ್ಬರು ಉಪಸ್ಥಿತರಿರುವುದಿಲ್ಲ. ಇದರಿಂದ ಸಾಹಿತಿಗಳನ್ನು ಕಡೆಗಣಿಸಿದಂತಾಗುತ್ತದೆ. ಇದು ನಿಲ್ಲಬೇಕು ಎಂದರು. ಗಚ್ಚಿನಮಠದ ಶಿವಬಸವ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಸಂಪದಾ ಸಂತೋಷ ಸಾವಡಕರು ನಿತ್ಯೋತ್ಸವ ಹಾಡಿಗೆ ಭರತನಾಟ್ಯ ಪ್ರದಶರ್ಿಸಿದರೆ, ಬಿ.ಎಸ್ ಮಠಪತಿ ಕುಂಚ ಬಿಡಿಸಿದರು.
ತಾಲೂಕಾ ಅಧ್ಯಕ್ಷ ಡಾ. ಮಹಾಂತೇಶ ಉಕ್ಕಲಿ ಪ್ರಾಸ್ತಾವಿಕ ಮಾತನಾಡಿದರು. ಗೌರವಾಧ್ಯಕ್ಷ ಡಾ. ಮಲ್ಲಿಕಾಜರ್ುನ ಹಂಜಿ ಸ್ವಾಗತಿಸಿದರು. ಗೌ. ಕಾರ್ಯದಶರ್ಿ ರೋಹಿಣಿ ಯಾದವಾಡ ಸವರ್ಾಧ್ಯಕ್ಷರ ಪರಿಚಯ ಮಾಡಿದರು. ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷ ಅರುಣ ಯಲಗುದ್ರಿ ವಂದಿಸಿದರು.