ಪ್ರತಿವಾರ ನಾನು ಅಂಕಣ ಬರೆಯಬೇಕು ಎಂದು ಕುಳಿತುಕೊಂಡರೆ ಏನೋ ಒಂದು ತರಹದ ಉತ್ಸಾಹ ಕಟ್ಟೆಯೊಡೆದು ಧುಮ್ಮಿಕ್ಕುತ್ತಿತ್ತು. ಶಬ್ದಗಳು ಸರಾಗವಾಗಿ ಹರಿದು ಲೇಖನದ ರೂಪ ಪಡೆದುಕೊಳ್ಳುತ್ತಿದ್ದವು. ಯಾವತ್ತೂ ಬರವಣಿಗೆ ಎನ್ನುವುದು ಕಬ್ಬಿಣದ ಕಡಲೆ ಎಂದು ನನಗೆ ಅನ್ನಿಸಲೇ ಇಲ್ಲ. ಅಂಕಣಗಳಿಗಾಗಿ ನೂರಾರು ಲೇಖನಗಳನ್ನು ಗೀಚಿದ್ದರು ಕೂಡ ಯಾವತ್ತೂ ಈ ಬಾರಿ ಆದಂತಹ ವೇದನೆ ಆಗಿರಲಿಲ್ಲ. ಸತ್ಯ ಹೇಳಬೇಕೆಂದರೆ ಈ ಲೇಖನವನ್ನು ಬರೆದು ಮುಗಿಸುವುದರೊಳಗೆ ನಾನೇ ಸಂಪೂರ್ಣ ಕಣ್ಣೀರಾಗಿ ಹೋಗಿದ್ದೆ. ಶಬ್ದಗಳೆಲ್ಲ ದುಃಖದಲ್ಲಿ ಅದ್ದಿ ತೆಗೆದ ಪದಗಳಂತೆ ಬಾಸವಾಗುತ್ತಿದ್ದವು. ಮನಸ್ಸಂತೂ ಸೂತಕದ ಮನೆಯಾಗಿತ್ತು. ಪ್ರತಿ ಸಾಲಿನಿಂದ ಸಾಲಿಗೆ ಸಾಗುತ್ತಲಿರುವಂತೆಯೇ ದುಃಖ ಉಮ್ಮಳಿಸಿ ಬರುತ್ತಿತ್ತು. ಹತಾಸೆ ನೋವುಗಳು ಒತ್ತರಿಸಿ ಬರುತ್ತಿದ್ದ ದುಃಖವನ್ನು ಮತ್ತಷ್ಟು ವೇಗವಾಗಿ ಹೋರ ಹಾಕುವುದಕ್ಕೆ ಒತ್ತಡ ಹೇರುತ್ತಿದ್ದವು. ಕೆಲವು ಕ್ಷಣ ಬರೆಯುತ್ತಿರುವಂತೆಯೇ ಈ ಬರವಣಿಗೆ ಬವಣೆ ಸಾಕಪ್ಪ ಸಾಕು ಎನ್ನಿಸುತ್ತಿತ್ತು. ಇದುವರೆಗೂ ತಪ್ಪುಗಳನ್ನು ಎತ್ತಿ ತೋರಿಸುವುದಕ್ಕಾಗಿ ಬರೆದೆ, ಸಾಧನೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಬರೆದೆ, ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಬರೆದೆ, ಸೋಲನ್ನು ಮೀರಿ ಗೆಲ್ಲುವುದು ಹೇಗೆಂದು ಹೇಳುವುದಕ್ಕಾಗಿ ಬರೆದೆ, ಮನಸ್ಸಿಗೆ ಮುದ ನೀಡಿದ ಪುಸ್ತಕಗಳ ಕುರಿತು ಬರೆದೆ, ಮಾನವೀತೆಯನ್ನು ಮೆರೆದವರ ಕುರಿತು ಬರೆದೆ, ದೇಶಪ್ರೇಮದ ಅಲೆಯಲ್ಲಿ ಕೊಚ್ಚಿ ಹೋಗುವ ಮಟ್ಟದಲ್ಲಿ ರಾಶಿ ರಾಶಿಯಾಗಿ ಬರೆದು ಹಾಕಿದೆ. ಆದರೂ ಕೂಡ ಆ ಯಾವ ಬರವಣಿಗೆಗಳು ನನ್ನನ್ನು ಇಷ್ಟು ಕಾಡಿಸಿ, ಪೀಡಿಸಿ, ಜಾಡಿಸಿ ಒದ್ದಿಲ್ಲ. ಮನಸ್ಸಿನ ಆಳಕ್ಕಿಳಿದು ಮನಸ್ಸನ್ನು ಘಾಸಿಗೊಳಿಸಿಲ್ಲ. ಆದರೆ ಈ ಲೇಖನವೇಕೊ ನನ್ನಿಂದ ಬರೆಯಲಾಗುತ್ತಿಲ್ಲ. ಆದರೆ ಏನು ಮಾಡಲಿ ಬರವಣಿಗೆಯಲ್ಲಿ ಹೇಳಿಕೊಳ್ಳದ ಹೊರತು ನನ್ನ ಬಳಿ ಬೇರೆ ದಾರಿಯೇ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಜಾರುವ ಕಣ್ಣಹನಿಗಳನ್ನು ಒರೆಸಿಕೊಳ್ಳುತ್ತ, ಬಿಟ್ಟು ಬಿಡದೇ ಬೋರ್ಗರೆಯುತ್ತಿರುವ ನಿಟ್ಟುಸಿರನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತ, ಒತ್ತರಿಸಿ ಬರುತ್ತಿದ್ದ ದುಃಖದಿಂದ ತತ್ತರಿಸಿ ಹೋಗುತ್ತಿರುವ ತುಟಿಗಳನ್ನು ಕಚ್ಚಿ ಹಿಡಿಯುತ್ತ ಬರವಣಿಗೆಯನ್ನು ಪೂರ್ಣವಾಗಿಸುವ ಹೊತ್ತಿಗೆ ನಾನು ನಾನಾಗಿರಲಿಲ್ಲ. ಯಾರಿಗೆ ಅನ್ನಬೇಕು? ಯಾರಿಗೇ ಬೈಯ್ಯಬೇಕು? ಇದು ಯಾರ ತಪ್ಪು? ಎನ್ನುವುದರ ಅರಿವೇ ನನಗಾಗಲಿಲ್ಲ. ವಿಧಿಯನ್ನು ದೂಷಿಸಲೇ? ದೇವರನ್ನು ಹಳಿಯಲೇ? ಬದುಕಿನ ಅರ್ಥ ಇಷ್ಟೇ ಎಂದು ತಿಳಿಯಲೇ? ಅನುಭಾವಿಗಳು ಹೇಳಿದ ಬದುಕು ನೀರ ಮೇಲಣ ಗುಳ್ಳೆ ಎನ್ನುವುದನ್ನು ಒಪ್ಪಿಕೊಂಡು ಬಿಡಲೇ? ಹುಟ್ಟು ಸಾವುಗಳ ಆಟದಲ್ಲಿ ಕಟ್ಟ ಕಡೆಗೆ ಗೆಲ್ಲುವುದು ಸಾವೇ ಎನ್ನುವುದನ್ನು ಸುಮ್ಮನೇ ಒಪ್ಪಿಕೊಂಡು ತಣ್ಣಗೆ ಕುಳಿತುಕೊಳ್ಳಲೇ? ಒಂದೂ ತಿಳಿಯಲಿಲ್ಲ. ಇವುಗಳ ಮಧ್ಯದಲ್ಲಿಯೇ ಆ ಒಂದು ಪ್ರಶ್ನೆ ನನ್ನನ್ನು ಅನ್ನಿಲ್ಲದಂತೆ ಕಾಡಿಸಿ ಕಂಗೆಡಿಸಿತು 'ಅಪ್ಪು ಈ ಸಾವು ನ್ಯಾಯವೇ? ಇದಕ್ಕೆ ಉತ್ತರ ಕೊಡಲು ಅಪ್ಪು ಇಲ್ಲ. ಉತ್ತರ ಪಡೆದುಕೊಂಡರು ಏನು ಪ್ರಯೋಜನವಿಲ್ಲ. ಆದರೂ ತನ್ನ ನಗುವಿನಿಂದಲೇ ನಮ್ಮನ್ನು ಕೆಣಕುತ್ತಿದ್ದ ಆ ಮುಗ್ದ ಮಾನವನ ಅಗಲಿಕೆ ಮಾತ್ರ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮೊನ್ನೆ ವಾಟ್ಸ್ನಲ್ಲಿ ಬಂದ ಆ ಒಂದು ಸಂದೇಶವನ್ನು ಓದಿದ ಮೇಲೆ ನಾನು ಮೊಬೈಲ್ ಕೊಂಡಿದ್ದೇ ತಪ್ಪಾಯಿತೇನೋ? ಎನ್ನುವಷ್ಟರ ಮಟ್ಟಿಗೆ ಉದ್ವೇಗ ನನ್ನನ್ನು ಆವರಿಸಿಕೊಂಡು ಬಿಟ್ಟಿತು. ಕನ್ನಡದ ಖ್ಯಾತ ನಟ ಪುನೀತ ಇನ್ನಿಲ್ಲ ಎನ್ನುವ ಸಾಲುಗಳು ನಿಂತ ನೆಲವನ್ನೇ ಬಿರಿದಂತ ಅನುಭವ ನೀಡಿತು. ಒಂದು ಕ್ಷಣ ಮೌನಕ್ಕೆ ಶರಣಾಗಿ ಆ ದಿನಗಳ ನೆನಪು ಮಾಡಿಕೊಂಡಾಗ ಅಪ್ಪುನ ಆ ಮುಗ್ದ ನಗು ನನ್ನ ಕಣ್ಣೆದುರು ಬಂದು ಪದೇ ಪದೇ ಕಾಡಲಾರಭಿಸಿತು. ಅದು 2010ನೇ ಸಾಲು, ನಾನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸುವ ಅಂತಿಮ ದಿನಗಳು. ಮಿಡಿಯಾ ವಿಸಿಟ್ಗೆಂದು ಬೆಂಗಳೂರಿಗೆ ತೆರಳಿದಾಗ ಪುನೀತ ಅವರ ಜಾಕಿ ಸಿನೇಮಾ ಅದೇ ತಾನೆ ತೆರೆಗೆ ಬಂದಾಗಿತ್ತು. ಬೆಂಗಳೂರಿನ ಕಂಠೀರವ ಸ್ಟೂಡಿಯೋನಲ್ಲಿ ಪುನೀತ ನಮ್ಮನ್ನು ಭೇಟಿಯಾಗಿ ಮಾತನಾಡಿದಾಗ ನಮಗೆ ಎಲ್ಲಿಲ್ಲದ ಖುಷಿ. ಅದರಲ್ಲೂ ಮುಖದ ಮೇಲಿನ ಆ ನಗುವಿತ್ತಲ್ಲ ಅದು ಇನ್ನೂ ನನ್ನನ್ನು ಬೆಂಬಿಡುತ್ತಿಲ್ಲ. ಉತ್ತರ ಕನರ್ಾಟಕದ ಹುಡುಗರನ್ನು ಕಂಡು ಖುಷಿಯಿಂದ ಕೈ ಕುಲುಕಿ ಚೆನ್ನಾಗಿ ಓದಿರಿ ಎಂದು ಹಾರೈಸಿದ ಆ ಸರಳತೆಯ ಮಾತುಗಳು ಇನ್ನೂ ನಮ್ಮ ಸ್ಮೃತಿ ಪಟಲದಿಂದ ಅಳಿಸಿಲ್ಲ. ಆದರೆ ಅದನ್ನು ಹೇಳಿದ ಅಪ್ಪು ಮಾತ್ರ ನಮ್ಮೊಡನೆ ಇಲ್ಲ. ಆ ನೆನಪುಗಳಾಚೆ ಅವರಿಲ್ಲದ ನೋವು ನನ್ನನ್ನು ಒಂದು ಕ್ಷಣ ಕಣ್ಣಿಂದ ನೀರಿನ ರೂಪದಲ್ಲಿ ಹೊರ ಹರಿದು ಬಂದಿತು. ಬಹುಶಃ ಒಬ್ಬ ಚಲನ ಚಿತ್ರ ನಟನ ಸಾವನ್ನು ಕಂಡು ನನ್ನ ಕಣ್ಣಲ್ಲಿ ನೀರು ಬಂದಿದ್ದು ಇದೇ ಮೊದಲು. ಯಾರ ಸಾವು ನನ್ನನ್ನು ಇಷ್ಟು ಬಾಧಿಸಿರಲಿಲ್ಲ. ಆದರೆ ಇವರ ಸಾವು ಅಷ್ಟು ಸುಲಭವಾಗಿ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಅವರ ಸಾವಿನ ಸುದ್ದಿ ಚಲನಚಿತ್ರಗಳಲ್ಲಿ ಬಂದು ಹೋಗುವ ಒಂದು ಸನ್ನಿವೇಶದಂತೆ ಬಂದು ಹೋಗಿ ಬಿಡಬಾರದೇ ಎನಿಸುತ್ತದೆ. ಆದರೆ ಏನು ಮಾಡುವುದು ಅವರ ಬಾರದ ಲೋಕಕ್ಕೆ ತೆರಳಿದ ಮೇಲೆ ಬಾ ಎಂದು ಬಾಯಿ ಬಡೆದುಕೊಂಡರೆ ಏನು ಪ್ರಯೋಜನ.
ಈ ಜಗತ್ತಿಗೆ ಅದ್ಯಾವ ಗಳಿಗೆಯಲ್ಲಿ ಕೊರೊನಾ ಎನ್ನುವ ಮಹಾ ಮಾರಿ ಒಕ್ಕರಿಸಿತೋ ಅಲ್ಲಿಂದ ಒಂದಲ್ಲ ಒಂದು ಆಘಾತಗಳ ಸುದ್ದಿಗಳನ್ನು ಕೇಳುತ್ತಲೇ ಸಾಗುತ್ತಿದ್ದೇವೆ. ಅದರಲ್ಲೂ ಕನ್ನಡ ಚಿತ್ರ ರಂಗವಂತೂ ಕಣ್ಣಿರಲ್ಲಿ ಕೈ ತೊಳೆಯಿತು. ಲಾಕ್ಡೌನ್ನಿಂದ ಕೆಲಸ ಇಲ್ಲದೇ ಸಿನಿಮಾ ಕಾಮರ್ಿಕರು ಕಂಗಾಲಾದರು. ಅದರ ಮಧ್ಯದಲ್ಲಿ ಚಿರಂಜೀವಿ ಸಜರ್ಾ, ಬುಲೆಟ್ ಪ್ರಕಾಶ, ಸಂಚಾರಿ ವಿಜಯ್ರಂತ ಕಿರಿಯ ವಯಸ್ಸಿನ ನಾಯಕ ನಟರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಅಕ್ಷರಶಃ ಅನಾಥ ಪ್ರಜ್ಞೆಯನ್ನು ಅನುಭವಿಸಿತು. ಈಗ ಪುನೀತ ರಾಜಕುಮಾರ ಸಾವು ಬರಸಿಡಿಲು ಬಂದು ಅಪ್ಪಳಿಸಿದಂತಾಗಿದೆ. ನಮ್ಮ ಚಿತ್ರ ರಂಗ ಇವರನ್ನಷ್ಟೆ ಅಲ್ಲ ಹಾಗೆ ನೋಡಿದರೆ ಇಡೀ ಜಾಗತಿಕ ಚಿತ್ರರಂಗವೇ ಮೆಚ್ಚುವಂತ ಶಂಕರನಾಗ, ಸುನೀಲ್ರಂತ ಮಹಾನ್ ನಟರನ್ನು ಅತೀ ಕಿರಿಯ ವಯಸ್ಸಿನಲ್ಲಿ ಕಳೆದುಕೊಂಡಿತು. ಈಗ ಅದೇ ಮಾರ್ಗದಲ್ಲಿ ಪುನೀತ ರಾಜಕುಮಾರ ಸಾಗಿದ್ದು ನಿಜಕ್ಕೂ ಅಭಿಮಾನಿಗಳಲ್ಲಿ ಮಾತ್ರವಲ್ಲ ಇಡೀ ಕನ್ನಡ ನಾಡೇ ಕಣ್ಣೀರಿಡುವಂತೆ ಮಾಡಿದೆ. ಅವರ ಅಕಾಲಿಕ ಮರಣ ಹೇಗಾಗಿದೆ ಎಂದರೆ ಹೇಳಿ ಹೋಗು ಕಾರಣ ಎಂದು ಕೇಳಬೇಕೆ? ಇಲ್ಲಾ ಬಿಟ್ಟ್ಯಾಕ ಹೋದೆ? ಎಂದು ಪ್ರಶ್ನಿಸಬೇಕೆ ಎನ್ನುವುದೇ ತಿಳಿಯಂದೆ ಮಾಡಿದೆ.
ಈ ಕ್ಷಣ ನನಗೆ ಆ ಒಂದು ಘಟನೆ ನೆನಪಾಗುತ್ತಿದೆ. ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರೆಂದರೆ ರಾಜ್ ದಂಪತಿಳಿಗೆ ಎಲ್ಲಿಲ್ಲದ ಭಕ್ತಿ. ಕಾರಣ ರಾಜಕುಮಾರ ಹಾಗೂ ಪಾರ್ವತಮ್ಮರಿಗೆ ಲಿಂಗದೀಕ್ಷೆಯನ್ನು ನೀಡಿದ್ದೂ ಶಾಂತವೀರ ಪಟ್ಟಾಧ್ಯಕ್ಷರೇ. ಹೀಗಾಗಿಯೇ ಅವರ ಮೇಲೆ ಈ ಮನೆತನಕ್ಕೆ ಎಲ್ಲಿಲ್ಲದ ಒಲವಿತ್ತು. ಹೀಗಿರುವಾಗ ಶಾಂತವೀರ ಪಟ್ಟಾಧ್ಯಕ್ಷರು ಲಿಂಗೈಕ್ಯರಾದಾಗ ಗದುಗಿನ ತೋಂಟದ ಡಾ.ಸಿದ್ಧಲಿಂಗ ಸ್ವಾಮಿಗಳು ಅವರ ಕುರಿತು ಒಂದು ಧ್ವನಿ ಸುರುಳಿ ಮಾಡಬೇಕು ಎಂದು ಹೇಳಿ ತಾವೇ ಹಾಡುಗಳನ್ನು ರಚಸಿ ಧ್ವನಿ ಸುರುಳಿ ನಿಮರ್ಾಣದ ಜವಾಬ್ದಾರಿಯನ್ನು ಪಂಡಿತ ರವೀಂದ್ರ ಹಂದಿಗನೂರ ಅವರಿಗೆ ನೀಡಿದರು. ಅದರಲ್ಲೂ ರಾಜಕುಮಾರ ಅವರೇ ಹಾಡಬೇಕು ಎನ್ನುವ ಉದ್ದೇಶದಿಂದ ಒಂದು ವಿಶೇಷ ಗೀತೆಯನ್ನು ಕೂಡ ರಚನೆ ಮಾಡಿದರು. ಆದರೆ ಗಜಲ್ ಶೈಲಿಯ ಆ ಹಾಡು ರಾಜಣ್ಣನವರು ಹಾಡುವುದಕ್ಕೆ ಕಷ್ಟವಾಗಿ ಅದನ್ನು ರವೀಂದ್ರ ಹಂದಿಗನೂರ ಅವರಿಂದ ಹಾಡಿಸಿದರು. ಆ ಹಾಡು ಇಂದಿಗೂ ಕೇಳುಗನೆದೆಯ ಕದನ್ನು ತೆರೆಯುತ್ತದೆ. ಆ ಹಾಡಿನಲ್ಲಿನ ಪಲ್ಲವಿಗೂ ಪುನೀತ ರಾಜಕುಮಾರ ಅಗಲಿದ ಗಳಿಗೆಗೂ ಹೊಂದಾಣಿಕೆಯಾಗುತ್ತಿರುವುದು ನಿಜಕ್ಕೂ ಖೇದಕರ. ಸಿದ್ಧಲಿಂಗ ಸ್ವಾಮಿಗಳು ರಚಿಸಿದ ಆ ಹಾಡಿನ ಪಲ್ಲವಿಯಲ್ಲಿ "ಹಗಲಿನಲ್ಲಿಯೇ ಸಂಜೆ ಆಯಿತು ತಮವು ಕವಿಯಿತು ಒಮ್ಮೆಲೆ, ಸಿಂದಗಿಯ ಶ್ರೀ ಶಾಂತವೀರರು ಶಿವನ ಸೇರಿದರೇನ್ನಲೆ" ಎಂದಾಗಿತ್ತು. ಆ ಹಾಡನ್ನು ಕೇಳುತ್ತಲಿದ್ದರೇ ಈಗಲೂ ಸಹ ನನ್ನ ಹೃದಯ ಆದ್ರ್ರವಾಗುತ್ತದೆ, ಕಣ್ಣಾಲೆಗಳು ತುಂಬಿ ಬರುತ್ತವೆ, ಮನಸ್ಸು ಹಾಗೇ ಎಲ್ಲೋ ಜಾರಿ ಹೋದ ಅನುಭವವಾಗುತ್ತದೆ. ಹಾಗೇ ಕಾಡುವ ಹಾಡಿನ ಸಾಲುಗಳಂತೆಯೇ ಪುನೀತರ ನಿರ್ಗಮನವೂ ಸಹ ಕನ್ನಡ ಕಲಾ ಪ್ರಪಂಚದಲ್ಲಿ ಹಗಲಿನಲ್ಲಿಯೇ ಸಂಜೆ ಆದ ಅನುಭವ ನೀಡುತ್ತಿದೆ.
ಬಾಲನಟನಾಗಿ ಕನ್ನಡ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದ ಪನೀತ ಎನ್ನುವ ನಗು ಮೊಗದ ಹುಡುಗ ಚಿಕ್ಕವಯಸ್ಸಿನಲ್ಲಿಯೇ ತನ್ನ ಪ್ರತಿಭೆಯ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ. ಬೆಟ್ಟದ ಹೂವು ಚಿತ್ರದಲ್ಲಿ "ಬಿಸಿಲೆ ಇರಲಿ ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆ ಎಂದು ಹಾಡುತ್ತ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕನ್ನಡ ಕೀತರ್ಿಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿದ. ಆ ನಂತರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಅಪ್ಪು ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ ಧೂಳೆಬ್ಬಿಸಿದ. ನೋಡ ನೋಡುತ್ತಿದ್ದಂತೆ ಪವರ್ಸ್ಟಾರ್ ಎನ್ನುವ ಖ್ಯಾತಿಗೆ ಬಾಜನರಾಗಿ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ನೆಲೆಯಾಗಿ ಬಿಟ್ಟ. ಆದರೆ ಇಷ್ಟು ಬೇಗ ಅವರ ಈ ಪ್ರಪಂಚದ ನಂಟನ್ನು ಕಳೆದುಕೊಂಡು ಸಾವನ್ನು ಗಂಟು ಹಾಕಿಕೊಳ್ಳುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅಪ್ಪ ಭಾರತದ ಕಲಾ ಪ್ರಪಂಚಕ್ಕೆ ನೀಡಿದ ಕೊಡುಗೆಯನ್ನು ಮೀರಿಸುವ ಮಟ್ಟದಲ್ಲಿ ಬೆಳೆಯಬಲ್ಲ ಯೋಗ್ಯತೆ ಇರುವ ನಟ ಎಂದು ಅದಾಗಲೇ ಸಿನಿ ಜಗತ್ತು ನಂಬಿತ್ತು. ಅದರಲ್ಲೂ ಅವರು ನೀಡುತ್ತಲಿದ್ದ ವಿಭಿನ್ನ ಚಿತ್ರಗಳು ಅವರಲ್ಲಿ ಅಡಗಿರುವ ಒಂದೊಂದು ಪ್ರತಿಭೆಯನ್ನು ಅನಾವರಣ ಮಾಡುತ್ತಿದ್ದವು. ಯಾವ ಚಿತ್ರವಾಗಲಿ ಸಲೀಸಾಗಿ ನಟಿಸುತ್ತಿದ್ದ ಪುನೀತ ಯಾವುದೇ ಪಾತ್ರವಿದ್ದರೂ ಅದಕ್ಕೆ ನೂರಕ್ಕೆ ನೂರು ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದ್ದರು. ಆ ಕಾರಣದಿಂದಾಗಿಯೇ ಅವರಿಂದು ಇಲ್ಲ ಎನ್ನುವುದನ್ನೇ ಮನಸ್ಸು ಒಪ್ಪಿಕೊಳ್ಳುವುದಕ್ಕೆ ಸಿದ್ಧವಾಗುತ್ತಿಲ್ಲ.
ಪುನೀತ ರಾಜಕುಮಾರ ಅಭಿನಯಿಸಿದ ಒಂದೊಂದು ಚಿತ್ರ ಒಂದೊಂದು ಮೈಲುಗಲ್ಲು ನೆಟ್ಟಿವೆ. 'ಅಪ್ಪು ಚಿತ್ರ ಶತದಿನವನ್ನು ಕಂಡರೆ 'ಅಭಿ ಪ್ರೇಕ್ಷಕರ ಮನವನ್ನು ಗೆದ್ದಿದೆ, 'ಅಜೆಯ್ ಚಿತ್ರ ಹೊಸತನವನ್ನು ಹುಟ್ಟು ಹಾಕಿದರೆ, 'ಆಕಾಶ್ ಚಿತ್ರ ಕನಸುಗಳನ್ನು ಕಟ್ಟಿಕೊಡುತ್ತದೆ. 'ಅರಸು' ಚಿತ್ರದಲ್ಲಿ ಸ್ನೇಹ, ಪ್ರೀತಿಗಳಿಗಿಂತ ವಿಶ್ವಾಸ ದೊಡ್ಡದು ಎಂದು ಹೇಳುವ ಅಪ್ಪು 'ಹುಡುಗರು' ಚಿತ್ರದ ಮೂಲಕ ಗೆಳೆತನ ಅನ್ನುವುದು ಎಷ್ಟು ದೊಡ್ಡದು ಎನ್ನುವುದನ್ನು ತಿಳಿಸಿದ್ದಾರೆ. 'ಯಾರೇ ಕೂಗಾಡಲಿ' ಚಿತ್ರದಲ್ಲಿ ಮನಸ್ಸಿದ್ದರೆ ಮಾರ್ಗ ಎನ್ನುವ ತತ್ವವನ್ನು ಎತ್ತಿ ಹಿಡಿಯುವ ಪುನೀತ ತಂದೆಯ ಬಂಗಾರದ ಮನುಷ್ಯ ಚಿತ್ರದಲ್ಲಿ ಅಪ್ಪ ತೋರಿಸಿದ ಸತ್ಯವನ್ನೇ ಇಲ್ಲಿ ಅನಾವರಣಗೊಳಿಸಿದ್ದಾರೆ. 'ವೀರಕನ್ನಡಿಗ' ಚಿತ್ರದಲ್ಲಿ ಹೊಡೆದಾಟ ಬಡಿದಾಟಗಳ ಮಧ್ಯದಲ್ಲಿ ಕನ್ನಡ ಭಾಷೆಯ ಅಭಿಮಾನವನ್ನು ತಿಳಿಸಿ ಕನ್ನಡಿಗನೆದೆಯಲ್ಲಿ ಕನ್ನಡದ ಕಂಪು ಹರಿಸಿದರೆ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಕೌಟುಂಬಿಕ ಪ್ರೀತಿ ಎಂದರೇನು ಎನ್ನುವುದನ್ನು ತಿಳಿಸಿಕೊಡುತ್ತಾರೆ. 'ಪರಮಾತ್ಮದಲ್ಲಿ ತತ್ವಜ್ಞಾನಿಯಂತೆ ಕಂಡರೆ, 'ಜಾಕಿ'ಯಲ್ಲಿ ಪಕ್ಕ ಲೋಕಲ್ ಬಾಯ್ ಹಾಗೆ ಕಾಣುತ್ತಾರೆ. 'ಅಣ್ಣಾ ಬಾಂಡ್ ಹಾಗೂ 'ಚಕ್ರವ್ಯೂಹ'ದಲ್ಲಿ ಮಾಸ್ ಲುಕ್ನಲ್ಲಿ ಮಿಂಚಿದರೆ 'ರಾಜ್ಕುಮಾರ' ಚಿತ್ರದಲ್ಲಿ ಕ್ಲಾಸ್ ಲುಕ್ನಲ್ಲಿ ಮಿಂಚುತ್ತಾರೆ. ಅದರಲ್ಲೂ ಆ ಒಂದು ಚಿತ್ರದ ಮೂಲಕ ವಿಕ್ಷಕರ ಎದೆಯಾಳಕ್ಕಿಳಿಯುವ ಪುನೀತ ರಾಜ್ಕುಮಾರ 'ಗೊಂಬೆ ಹೇಳುತೈತೆ' ಹಾಡಿನ ಮೂಲಕ ನಮ್ಮನ್ನು ಕಾಡುತ್ತಾರೆ. ಹೆತ್ತವರಿಗೆ ಮಕ್ಕಳು ನೀಡಬೇಕಾದ ಪ್ರೀತಿಯನ್ನು ನೆನಪಿಸುವ ಆ ಚಿತ್ರವನ್ನು ಕಂಡು ಒಂದು ಕ್ಷಣ ನಮಗೇ ಅರಿವಲ್ಲದಂತೆ ನಮ್ಮ ಕಣ್ಣಾಲೆಯನ್ನು ನಾವೆ ಒರೆಸಿಕೊಂಡಿರುತ್ತೆವೆ. ಅಷ್ಟಕ್ಕೆಲ್ಲ ಕಾರಣವಾಗಿದ್ದು ಅದರಲ್ಲಿ ಪುನೀತ ಅವರ ಮನೋಜ್ಞ ಅಭಿನಯ. ಈಗಲೂ ನನಗೆ ಆ ಚಿತ್ರದ ನೆನಪಾದರೆ ಹೃದಯ ತುಂಬಿ ಬರುತ್ತದೆ. ಹೆಗಲ ಮೇಲೆ ಬಂದು ಕೂರುವ ಪಾರಿವಾಳ ಅಪ್ಪುವನ್ನು ಕಂಡು ಗುಟುರುತ್ತದೆ. ಈ ದೃಶ್ಯವನ್ನು ನೋಡಿದರಂತೂ ಕಸ್ತೂರಿ ನಿವಾಸದ ರಾಜಣ್ಣನ ನೆನಪು ಬರಲೇ ಬೇಕು. ಇನ್ನು 'ಪೃಥ್ವಿ ಚಿತ್ರದಲ್ಲಿ ಅವರು ನಟಿಸಿದ 'ಜಿಲ್ಲಾಧಿಕಾರಿ' ಪಾತ್ರ ಕಂಡಾಗಲಂತೂ ಪ್ರತಿಯೊಬ್ಬ ಜಿಲ್ಲಾಧಿಕಾರಿಯೂ ಇಷ್ಟೇ ಖಡಕ್ ಆಗಿದ್ದರೆ ಈ ದೇಶ ವಿಶ್ವಗುರುವಾಗುತ್ತದೆ ಎನ್ನುವ ಭಾವನೆ ಮೂಡಿದರೆ 'ಯುವರತ್ನ' ಚಿತ್ರ ಶಿಕ್ಷಣ ವ್ಯವಸ್ಥೆಯ ಆಶಯವೇನು ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ. 'ಅಂಜನಿ ಪುತ್ರ 'ರಣವಿಕ್ರಮ' 'ನಮ್ ಬಸವ' 'ನಟ ಸಾರ್ವಭೌಮ' ಚಿತ್ರಗಳಲ್ಲಿ ಹೊಡೆದಾಟ ನಡೆಸುವ ಪುನೀತನನ್ನು ಕಂಡಾಗ 'ಭಕ್ತ ಪ್ರಹ್ಲಾದ' 'ಭಾಗ್ಯವಂತ' 'ಚಲಿಸುವ ಮೋಡಗಳು' ಚಿತ್ರದಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ ಪ್ರೇಕ್ಷಕರನ್ನು ತನ್ನತ್ತ ಆಕಷರ್ಿದ ಆ ಮಗು ಇವನೇನಾ? ಎನ್ನುವ ಅನುಮಾನ ಉಂಟು ಮಾಡುತ್ತದೆ. ಇವೆಲ್ಲ ಒಂದು ತೂಕವಾದರೆ ಕನ್ನಡದ ಕೋಟ್ಯಾಧಿಪತಿಯೇ ಮತ್ತೊಂದು ತೂಕ. ಅದರಲ್ಲಿನ ಅವರ ನಿರರ್ಗಳ ಮಾತುಗಳು ಆ ನಗು ಇಂದು ನೆನಪು ಮಾತ್ರ. ಆದರೆ ಅವರು ನೀಡಿದ ಕಾರ್ಯಕ್ರಮ ಮಾತ್ರ ಅಜರಾಮರ. ಹೀಗೆ ತನ್ನ ವೃತ್ತಿಯುದ್ದಕ್ಕೂ ಸದಾ ಹೊಸತನವನ್ನೇ ನೀಡುತ್ತ ಬಂದ ಪುನೀತ್ ಇನ್ನು ಮುಂದೆ ಇರುವುದಿಲ್ಲ ಎನ್ನುವುದೇ ಅರಗಿಸಿಕೊಳ್ಳಲಾಗದ ಸತ್ಯವಾಗಿ ಎದೆಗೆ ಕೊಳ್ಳಿ ಇಡುತ್ತಿದೆ.
ಗೊಂಬೆ ಹೇಳುತೈತೆ ಹಾಡಿನ ಸಾಲಿನಲ್ಲಿಯೇ ಹೇಳಿದಂತೆ ಯೋಗವು ಒಮ್ಮೆ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ ಎನ್ನುವ ಮಾತಂತೂ ಸತ್ಯ. ಕಾರಣ ಬೆಳ್ಳಿ ಪರದೆಯ ಮೇಲೆ ಮಿಂಚಿ ಮರೆಯಾದವರು ಸಾಕಷ್ಟು ಜನರಿದ್ದಾರೆ. ಆದರೆ ತೆರೆಯ ಹಿಂದೆ ಅವರು ಮಾಡಿದ ಕಾರ್ಯವನ್ನು ಸ್ಮರಿಸುವಂತೆ ಮಾಡಿದವರು ಕೆಲವೇ ಕೆಲವು ಜನರಿದ್ದಾರೆ. ಅವರ ಸಾಲಿನಲ್ಲಿ ಪುನೀತ ಕೂಡ ನಿಲ್ಲುತ್ತಾರೆ. ನಟನೆಯಿಂದ ಬರುವ ಲಾಭದಲ್ಲಿ ಶಾಲೆಗಳನ್ನು, ಗೋಶಾಲೆಗಳನ್ನು, ವೃದ್ಧಾಶ್ರಮಗಳನ್ನು ತೆರೆದು ನೋವಲ್ಲಿರುವವರಿಗೆ ನೆರವು ನಿಡಿದ್ದಾರೆ. ಹಸಿದವರಿಗೆ ಅನ್ನ ಹಾಕಿದ್ದಾರೆ. ಮಹಿಳೆಯರಿಗೆ ಶಿಕ್ಷಣ ಒದಗಿಸಿದ್ದಾರೆ. ಆದರೆ ತಾನು ಮಾಡುತ್ತಿರುವುದನ್ನು ಎಲ್ಲೂ ಬಹಿರಂಗಪಡಿಸುವುದಕ್ಕೆ ಹೋಗಿಲ್ಲ. ಬಲಗೈಯಿಂದ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದು ಎಂದು ನಮ್ಮ ಜನಪದರು ಹೇಳುತ್ತಿದ್ದ ಮಾತನ್ನು ಇವರು ಶಿರಸಾ ಪಾಲಿಸಿದ್ದಾರೆ. ಆದರೆ ಯೋಗ ಯೋಗ್ಯತೆ ಇಂದ ಬರುತ್ತದೆ ಎನ್ನುವಂತೆ ಇವರ ಅಗಲಿಕೆಯ ನಂತರ ಇವರ ಸಮಾಜಮುಖಿ ಕಾರ್ಯ ಬಹಿರಂಗವಾಗಿ ಅವರ ಯೋಗ್ಯತೆ ಶಿಖರ ಸೂರ್ಯನಂತೆ ಕಂಗೊಳಿಸುತ್ತಿದೆ. ಅಪ್ಪನ ಸಜ್ಜನಿಕೆಯನ್ನೇ ತನ್ನಲ್ಲೂ ಅಳವಡಿಸಿಕೊಂಡಿದ್ದ ಪುನೀತ ರಾಜಕುಮಾರ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳು ಮಾತ್ರ ನಮ್ಮಿಂದ ಮಾಸಿ ಹೋಗುವುದಕ್ಕೆ ಸಾಧ್ಯವಿಲ್ಲ. ಹಾಗೆ ನೋಡಿದರೆ ಇದು ಸಾಯುವ ವಯಸ್ಸಲ್ಲ. ಇನ್ನೂ ಸಾಧಿಸುವ ವಯಸ್ಸು ಆದರೆ ನಾನು ಸಾಧಿಸಿದ್ದು ಇಷ್ಟೇ ಸಾಕು ಎನ್ನುವ ಹಾಗೆ ಎದ್ದು ನಡೆದ ಪುನೀತರ ಈ ನಡೆ ಕನ್ನಡಿಗರಿಗೆ ತುಂಬಲಾರದ ನಷ್ಟ. ಆದರೆ ಏನು ಮಾಡಿದರೂ ಹೋಗಲೇಬೇಕು ಎನ್ನುವುದು ವಾಸ್ತವ ಸತ್ಯ. ಆದರೂ ಇನ್ನೂ ಕೆಲವು ವರ್ಷಗಳ ಕಾಲ ಅವರು ನಮ್ಮೊಂದಿಗಿರಬೇಕಿತ್ತು ಎನಿಸುತ್ತದೆ. ಖಜಚಿಟಟಥಿ ತಿಜ ಟ ಥಿಠಣ ಚಿಠಿಠಿಣ