ಬೈಲಹೊಂಗಲ 03; ಮಹಿಳೆ ಎಷ್ಟೇ ಶಕ್ತಿವಂತಾಳದರೂ ಎಷ್ಟೇ ಮುಂದುವರೆದಿದ್ದರೂ ಮಹಿಳೆಗೆ ಸಿಗಬೇಕಾದ ಸ್ಥಾನ ಮಾನ ಇನ್ನೂ ಸಿಗುತ್ತಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಜಿಪಂ.ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಲಿಂ. ನೀಲಕಂಠ ಮಹಾ ಶಿವಯೋಗೀಶ್ವರರ ಜಾತ್ರಾ ಮಹೋತ್ಸವ, ಲಿಂ ಗಂಗಾಧರ ಸ್ವಾಮೀಜಿಗಳ 10 ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಶನಿವಾರ ಸಂಜೆ ನಡೆದ ಮಹಿಳಾ ಗೋಷ್ಠಿ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ಮಹಿಳೆಯರಿಗೆ ಆಸಕ್ತಿ ಮತ್ತು ಬದುಕುವ ಛಲ ಇದ್ದರೆ ಮಾತ್ರ ಕುಟುಂಬ ನಿರ್ವಹಣೆ ಮತ್ತು ಅಭಿವೃದ್ದಿ ಸಾಧ್ಯವಿದೆ ಎಂದರು. ಹೆಣ್ಣನ್ನು ಕೇವಲ ಭೋಗದ ವಸ್ತು ಆಗಿ ನೋಡಬಾರದು. 12 ನೇ ಶತಮಾಣದಲ್ಲಿ ಬಸವಣ್ಣನವರು ಸ್ತ್ರೀ ಸಮಾಜವನ್ನು ಪ್ರಾತಿನಿಧ್ಯ ನೀಡಿದ್ದನ್ನು ಸ್ಮರಿಸಿದರು. ಸ್ವ ಹೃದಯವಂತಿಕೆ ಬೆಳೆಸಿಕೊಂಡಾಗ ಮಾತ್ರ ಸಮಾಜ ಸುಧಾರಣೆ ಮಾಡಲು ಸಾಧ್ಯ. ಸಮಾಜ ಸುಧಾರಣೆಯಲ್ಲಿ ಮಹಿಳೆಯ ಪಾತ್ರ ಬಹು ಮುಖ್ಯವಾಗಿದೆ ಎಂದರು.
ಧಾರವಾಡ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸೇವಾ ಸಂಸ್ಥೆ ಅಧ್ಯಕ್ಷೆ ಮಂಜುಳಾ ಮುನವಳ್ಳಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಗ್ರಾಪಂ.ತಾಪಂ.ಜಿಪಂ. ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಮಹಿಳೆಯರಿಗೆ ನೀಡುವ ಹುದ್ದೆಗಳು ಹೆಸರಿಗೆ ಮಾತ್ರ. ಅಧಿಕಾರವನ್ನು ಪುರುಷರು ನಿರ್ವಹಿಸುತ್ತಾರೆ. ನಿಮ್ಮ ಹುದ್ದೆಯನ್ನು ಹಕ್ಕನ್ನು ಯಾರಿಗೆ ಬಿಟ್ಟು ಕೊಡಬೇಡಿ, ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಆಗಬೇಕು. ಕೇವಲ ಸಬಲೀಕರಣ ಪುಸ್ತಕದಲ್ಲಿ ಉಳಿಯಬಾರದು. ಮಹಿಳೆ ಶೈಕ್ಷಣಿಕ, ಸಾಮಾಜಿಕ, ಆಥರ್ಿಕವಾಗಿ ಮುಂದುವರೆದಿದ್ದರೂ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯಗಳು, ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿವೆ. ಕುಟುಂಬದಲ್ಲಿ ಅತ್ತೆ ಮತ್ತು ಸೊಸೆ ಮನೆಯ ಎರಡು ಕಣ್ಣುಗಳು, ಸೊಸೆ ಅತ್ತೆಯನ್ನು ತಾಯಿಯಂತೆ ಕಾಣಬೇಕು, ಅತ್ತೆ ಸೊಸೆಯನ್ನು ಮಗಳಂತೆ ಕಂಡಾಗ ಮಾತ್ರ ಕುಟುಂಬಗಳು ಸುಖ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಬೆಳಗಾವಿ ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ.ಗುರುದೇವಿತಾಯಿ ಹುಲ್ಲೇಪನವರಮಠ ಮಾತನಾಡಿ, ಮಹಿಳೆಯರ ಕುರಿತು ಮಾಮರ್ಿಕವಾಗಿ ಮಾತನಾಡಿದರು.
ರಬಕವಿಯ ಪ್ರಭು ದೇವರು ಸಾನಿಧ್ಯ ವಹಿಸಿ ಮಾತನಾಡಿ, ಮಹಿಳೆಯರು ತಮ್ಮ ನಿತ್ಯ ಜೀವನದಲ್ಲಿ ಹೃದಯ ಬಿಚ್ಚಿ ನಕ್ಕು ಜೀವನ ಸಾಗಿಸಿದಾಗ ಮಾತ್ರ ಆರೋಗ್ಯಕರ ವಾತಾವರಣ ನಿಮರ್ಿಸಲು ಸಾಧ್ಯ. ಒತ್ತಡದ ಮಧ್ಯೆ ಜೀವನ ಸಾಗಿಸಿದರೆ ಕಾಯಿಲೆಯಿಂದ ಬಳಲಿ ಆರೋಗ್ಯ ಹಾಳು ಮಾಡಿಕೊಳ್ಳಬೇಕಾಗುತ್ತದೆ. ಅಕ್ಕನ ಬಳಗ ಲಿ.ಗಂಗಾಧರ ಸ್ವಾಮೀಜಿಯವರ ಕಾಲದಿಂದಲೂ ಬಂದಿದೆ ಎಂದರು.
ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ, ಪಿ.ಜಿ.ಹುಣಶ್ಯಾಳದ ನಿಜಗುಣ ದೇವರು ಸಾನಿಧ್ಯ ವಹಿಸಿ ಆಶರ್ೀವಚನ ನೀಡಿದರು.
ವೇದಿಕೆ ಮೇಲೆ ಕಸಾಪ ತಾಲೂಕಾಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ ಹಾಗೂ ಪುರಸಭೆಯ ಎಲ್ಲ ಸದಸ್ಯರು ಇದ್ದರು.
ಗಂಗಾಂಬಿಕಾ ಬಳಗವನ್ನು ಶ್ರೀಗಳು, ಗಣ್ಯಮಾನ್ಯರಿಂದ ಉದ್ಘಾಟಿಸಲಾಯಿತು. ಪುರಸಭೆಯ ಎಲ್ಲ ಸದಸ್ಯರು, ಅತಿಥಿಗಳನ್ನು ಸನ್ಮಾನಿಸಲಾಯಿತು.
ಮಧು ಮೆಟಗುಡ್ಡ, ನಾಗಮ್ಮ ಹೂಲಿ, ಶಾಂತಕ್ಕ ಬಿಳ್ಳೂರ, ಪಾರ್ವತೆವ್ವ ಮೆಟಗುಡ್, ಆಶಾ ಗಚ್ಚಿನಮಠ, ನಂದಕ್ಕ ಮೆಟಗುಡ್ಡ, ಸುಮಿತ್ರಾ ಮುರಗೋಡ, ಲಕ್ಷ್ಮೀ ಮೂಗಡ್ಲಿಮಠ ಸೇರದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ರತ್ನಾ ಬಿಳ್ಳೂರ ಸ್ವಾಗತಿಸಿದರು, ಶೋಭಾ ಛಬ್ಬಿ ನಿರೂಪಿಸಿ, ವಂದಿಸಿದರು.