ದೇಶಾದ್ಯಂತ ಏಳು ಹೈ ಪರ್ಫಾಮೆನ್ಸ್‌ ಹಾಕಿ ಕೇಂದ್ರಗಳ ಸ್ಥಾಪನೆ

ನವದೆಹಲಿ, ಫೆ .6, 2024 ಮತ್ತು 2028ರ ಒಲಿಂಪಿಕ್ಸ್‌ ಕ್ರೀಡಾಕೂಟದ ಎರಡೂ ಆವೃತ್ತಿಗಳಲ್ಲಿ ಸಕರಾತ್ಮಕ ಫಲಿತಾಂಶ ಹೊರತರುವ ದೃಷ್ಠಿಯಿಂದ ದೇಶಾದ್ಯಂತ ಕಿರಿಯ ಮತ್ತು ಉಪ ಕಿರಿಯರ ಹಾಕಿ ಆಟಗಾರರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಹಾಕಿ ಇಂಡಿಯವು  ಹೈ ಫರ್ಫಾಮೆನ್ಸ್‌ ಏಳು ಹಾಕಿ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿದೆ.ಈ ಏಳು ಉನ್ನತ ಸಾಧನೆ ಹೊಂದಿರುವ ಹಾಕಿ ಕೇಂದ್ರಗಳನ್ನು ಖೆಲೋ ಇಂಡಿಯಾ ಯೋಜನೆಯಡಿ ಸ್ಥಾಪಿಸಲಾಗುವುದು ಮತ್ತು ತಜ್ಞರಿಂದ ವೃತ್ತಿಪರ ತರಬೇತಿ, ಕ್ರೀಡಾ ವಿಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುವುದು.

"ದೇಶದ ವಿವಿಧ ವಲಯಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಹಾಕಿ ಕೇಂದ್ರಗಳನ್ನು ಪ್ರಾರಂಭಿಸುವುದರೊಂದಿಗೆ, ಪ್ರತಿಭಾವಂತ ಯುವಕರಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಅದು 2024 ಮತ್ತು 2028 ರ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಯಶಸ್ಸನ್ನು ಸಾಧಿಸಲು ಸಜ್ಜುಗೊಳಿಸುತ್ತದೆ. ಈ ಕೇಂದ್ರಗಳು ಉತ್ತಮವಾಗಿರುತ್ತವೆ. ವೈಜ್ಞಾನಿಕವಾಗಿ ಸುಧಾರಿತ ತರಬೇತಿಯ ಮೇಲೆ ವಿಶೇಷ ಗಮನವನ್ನು ಹೊಂದಿರುವ ವ್ಯವಸ್ಥೆಯು ಯುವ ಕ್ರೀಡಾಪಟುಗಳಿಗೆ ಮಾನಸಿಕ ತರಬೇತಿಯನ್ನೂ ಒಳಗೊಂಡಿರುತ್ತದೆ,''ಎಂದು ಎಸ್‌ಎಐ ಮಹಾನಿರ್ದೇಶಕ ಸಂದೀಪ್ ಪ್ರಧಾನ್ ಹೇಳಿದ್ದಾರೆ.

ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಕಿ ಅಕಾಡೆಮಿ, ಎಸ್‌ಎಐ ಸುಂದರ್‌ಗಢ, ಒಡಿಶಾ, ಎಸ್‌ಎಐ ಯುಡಿಎಂಸಿಸಿ, ಭೋಪಾಲ್, ಮಧ್ಯಪ್ರದೇಶ ಮತ್ತು ಎಸ್‌ಎಐ ಬೆಂಗಳೂರು ಮುಂತಾದ ಕಡೆಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಕೇಂದ್ರಗಳು ಸಕ್ರಿಯವಾಗಲಿದ್ದು, ಉಳಿದ ಮೂರು ಕೇಂದ್ರಗಳನ್ನು ಮುಂದಿನ 12 ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗುವುದು .ಭಾರತದಾದ್ಯಂತ ಅಸ್ತಿತ್ವದಲ್ಲಿರುವ ಎಸ್‌ಎಐ ಕೇಂದ್ರಗಳು ಮತ್ತು ಹಾಕಿ ಅಕಾಡೆಮಿಗಳು ಈ ಹೊಸ ಕೇಂದ್ರಗಳಿಗೆ 'ಫೀಡರ್' ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಪ್ರತಿ ಕೇಂದ್ರದಲ್ಲಿ 72 ಪುರುಷರು ಮತ್ತು 72 ಮಹಿಳಾ ಹಾಕಿ ಆಟಗಾರರನ್ನು ಹೊಂದಿರುತ್ತದೆ. 2024 ಮತ್ತು 2028 ರ ಒಲಿಂಪಿಕ್ಸ್‌ಗಾಗಿ ಈ ಹಾಕಿ ಆಟಗಾರರನ್ನು ನಿರ್ದಿಷ್ಟ ವಯಸ್ಸಿನ ವ್ಯಾಪ್ತಿಯಿಂದ 14 ರಿಂದ 24 ವರ್ಷ ವಯಸ್ಸಿನವರೆಗೆ ಆಯ್ಕೆ ಮಾಡಲಾಗುತ್ತದೆ.

ಆರಂಭಿಕ ಏಳು ಉನ್ನತ ಸಾಧನೆ ಹಾಕಿ ಕೇಂದ್ರಗಳನ್ನು ಈ ಕೆಳಗಿನ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು:

1. ಎಸ್‌ಎಐ ಕೇಂದ್ರ, ಬೆಂಗಳೂರು, ಕರ್ನಾಟಕ (ದಕ್ಷಿಣ ವಲಯ)

2. ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ, ನವದೆಹಲಿ (ಉತ್ತರ ವಲಯ)

3. ಎಸ್‌ಎಐ ಸುಂದರ್‌ಗಢ, ಒಡಿಶಾ (ಪೂರ್ವ ವಲಯ)

4. ಎಸ್‌ಎಐ ಯುಡಿಎಂಸಿಸಿ, ಭೋಪಾಲ್, ಮಧ್ಯಪ್ರದೇಶ (ಕೇಂದ್ರ ವಲಯ)

5. ಎಸ್‌ಎಐ ಎನ್ಎಸ್ ಎನ್‌ಇಸಿ, ಟಕಿಯೆಲ್, ಇಂಫಾಲ್, ಮಣಿಪುರ (ಈಶಾನ್ಯ ವಲಯ)

6. ಬಾಲೆವಾಡಿ ಕ್ರೀಡಾ ಸಂಕೀರ್ಣ, ಪುಣೆ, ಮಹಾರಾಷ್ಟ್ರ (ಪಶ್ಚಿಮ ವಲಯ)

7. ಎಸ್‌ಎಐ ಕೇಂದ್ರ, ರಾಂಚಿ ಮತ್ತು ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋಟರ್ಫ್ ಹಾಕಿ ಕ್ರೀಡಾಂಗಣ (ಪೂರ್ವ ವಲಯ II)

ಹಿರಿಯ ಮತ್ತು ಕಿರಿಯ ರಾಷ್ಟ್ರೀಯ ತಂಡಗಳಿಗೆ ಬೆಂಗಳೂರಿನ ಎಸ್‌ಎಐ ಕೇಂದ್ರವು ಮುಖ್ಯ ತಾಣವಾಗಿ ಉಳಿಯಲಿದೆ.