ವ್ಯಸನ ಮುಕ್ತ ಸಮಾಜ ಕಟ್ಟುವುದು ಅವಶ್ಯ: ಎನ್.ಕೆ. ಮನಗೊಂಡ

ವಿಜಯಪುರ: ಮಾದಕ ವಸ್ತುಗಳಿಂದ ಯುವ ಜನಾಂಗ ದಾರಿ ತಪ್ಪಿದೆ, ಸದೃಡ ಭಾರತ ನಿಮರ್ಾಣದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ ಆದ್ದರಿಂದ ವ್ಯಸನ ಮುಕ್ತ ಸಮಾಜ ಕಟ್ಟುವುದು ಅವಶ್ಯಕವಾಗಿದೆ ಎಂದು ನಿವೃತ್ತ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎನ್.ಕೆ.ಮನಗೊಂಡ  ವಿದ್ಯಾಥರ್ಿಗಳಿಗೆ ತಿಳಿಸಿದರು.

ಇತ್ತೀಚೆಗೆ ನೆಹರು ಯುವ ಕೇಂದ್ರ ವಿಜಯಪುರ, ಬಿ.ಎಲ್.ಡಿ.ಇ ಎ.ಎಸ್.ಪಾಟೀಲ ಕಾರ್ಮಸ್ ಕಾಲೇಜ, ವಿಜಯಪುರ, ಸ್ಪಂದನ ಯುವಕ ಸಂಘ ಹಾಗೂ ಸ್ಪಂದನ ಸ್ವಯಂ ಸೇವಾ ಸಂಸ್ಥೆ, ವಿಜಯಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಾದಕ ವಸ್ತುಗಳ ವ್ಯಸನ ಮುಕ್ತ ಕುರಿತು ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾದಕ ವ್ಯಸನದಿಂದ ಮನಸ್ಸು ಮತ್ತು ದೇಹಗಳು ದುರ್ಬಲವಾಗುತ್ತವೆ, ಇದರಿಂದ ಯುವಕರು ಬೇಗ ತಮ್ಮ ಜೀವನವನ್ನು ಅವನತಿಯನ್ನು ಕಾಣುತ್ತಿದ್ದಾರೆ. ಯುವಕರು ದೇಶದ ಶಕ್ತಿ ಹಾಗಾಗಿ ಮಾದಕ ವಸ್ತುಗಳಿಗೆ ದಾಸರಾಗದೆ, ಉತ್ತಮರಾಗರಿಕರಾಗಿ ಬಾಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎ.ಎಸ್.ಪಾಟೀಲ ಕಾರ್ಮಸ್ ಕಾಲೇಜ ಪ್ರಾಂಶುಪಾಲರಾದ ಡಾ: ಎಚ್.ಎಮ್. ಮುಜಾವರ ಮಾತನಾಡಿ ಮಧ್ಯ, ತಂಬಾಕು, ಡ್ರಗ್ಸಗಳ ಜೊತೆ ಈಗ ಮೊಬೈಲ್  ಇದು ಕೂಡಾ  ಒಂದು ಮಾದಕ ವಸ್ತುವಾಗಿದೆ. ಇಎರ ಅತಿಯಾದ ಬಳಕೆಯಿಂದ ಇಂದು ಯುವ ಜನತೆ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ, ಇದರಿಂದ ಸಮಯ ಮತ್ತು ಆರೋಗ್ಯ ಹಾಳಾಗುತ್ತಿದ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಪ್ರೋ. ವಿ.ಎಸ್. ಬಗಲಿ ಹಾಗೂ ಪ್ರೋ. ಎಸ್ .ಬಿ. ದೇಸಾಯಿ, ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿಯಾದ ರಾಹುಲ್ ಡೋಂಗರೆ, ಯುವ ಮುಖಂಡ ಸುರೇಶ ಬಿಜಾಪೂರ, ಸ್ಪಂದನ ಸಂಸ್ಥೆಯ ಅಧ್ಯಕ್ಷರಾದ ಮಾಹಾದೇವ ದೇವರ ಉಪಸ್ಥಿತರಿದ್ದರು.

ಡಾ: ಅಮೀನುದ್ದಿನ್ ಖಾಜಿ ಅವರು ಉಪನ್ಯಾಸ ನೀಡಿದರು. ಯುವ ನಾಯಕ ಸುರೇಶ ಬಿಜಾಪೂರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಮಾಹಾದೇವ ದೇವರ ಯೋಗ ಗುರು ದತ್ತಾತ್ರಯ ಹಿಪ್ಪರಗಿ ಸೇರಿಂತೆ  ಈ ತರಬೇತಿಯಲ್ಲಿ 100ಕ್ಕು ಹೆಚ್ಚು ಯುವಕರು ಭಾಗವಹಿಸಿದ್ದರು. ಕಾರ್ಯಕ್ರಮದ ರಾಹುಲ್ ಡೊಂಗರೆ ಸ್ವಾಗತಿಸಿ ಪರಿಚಯಿಸಿದರ. ಎಂ ಎಸ್. ದೇವರ ಪ್ರಾಸ್ಥಾವಿಕವಾಗಿ ಮಾತನಾಡಿದರು. ದುಂಡು ಗಣಿ ನಿರೂಪಿಸಿದರು. ಸಂತೊಷ ಬಿರಾದಾರ ವಂದಿಸಿದರು. ನೆರವೆರಿಸಿದರು.