ಎಲ್ಲ ತಾಲೂಕಾ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಜ್ಜುಗೊಳಿಸಿ:ಡಿಸಿ

ಹಾವೇರಿ: ಜು.10: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ತ್ವರಿತವಾಗಿ ತಾಲೂಕಾ ಕೋವಿಡ್ ಕೇರ್ ಸೆಂಟರ್ಗಳನ್ನು ಸುಸಜ್ಜಿತಗೊಳಿಸಿ ಕಾಯರ್ಾರಂಭಗೊಳಿಸುವಂತೆ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

ತಾಲೂಕಾ ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ತಾಲೂಕಾ ಕೋವಿಡ್ ಆಸ್ಪತ್ರೆಯಲ್ಲಿ ಕನಿಷ್ಠ 50 ಬೆಡ್ಗಳ ವ್ಯವಸ್ಥೆ ಇರಬೇಕು. ಕೇಂದ್ರೀಕೃತ ಪ್ರೈಸರೈಸ್ ಆಕ್ಸಿಜನ್ ಸಪ್ಲೈ ವ್ಯವಸ್ಥೆ ಸೇರಿದಂತೆ ಪೂರ್ಣ ಪ್ರಮಾಣದ ಸೌಲಭ್ಯಗಳೊಂದಿಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ವ್ಯವಸ್ಥೆಯಾಗಬೇಕು. ಈಗಾಗಲೇ ಕೆಲ ತಾಲೂಕುಗಳಲ್ಲಿ ಕೋವಿಡ್ ಆಸ್ಪತ್ರೆಗಳು ಕಾಯರ್ಾರಂಭಗೊಳಿಸಿದ್ದು, ಉಳಿದ ತಾಲೂಕುಗಳಲ್ಲೂ ತ್ವರಿತವಾಗಿ ಸಿದ್ಧಗೊಳಿಸಬೇಕು ಹಾಗೆಯೇ ಜಿಲ್ಲಾ ಆಸ್ಪತ್ರೆಯಲ್ಲಿ ಕನಿಷ್ಠ 125 ಹಾಸಿಗೆ ಸೌಲಭ್ಯಗಳಿಗೆ ವಿಸ್ತರಿಸಿ ಕೋವಿಡ್ ಚಿಕಿತ್ಸೆಗೆ ಸಜ್ಜಾಗುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಫಿಜಿಷಿಯನ್ಗಳನ್ನು ತಾಲೂಕಾವಾರು ಉಸ್ತುವಾರಿ ವಹಿಸಬೇಕು. ಹೆಚ್ಚುವರಿ ಫಿಜಿಷಿಯನ್ ತಜ್ಞರ ಅಗತ್ಯವಿದ್ದರೆ ಖಾಸಗಿ ವೈದರ ಸೇವೆ ಪಡೆದು ಬಳಸಿಕೊಳ್ಳಬೇಕು. ಎಲ್ಲ ತಾಲೂಕಾ ಕೋವಿಡ್ ಆಸ್ಪತ್ರೆಗಳಿಗೆ ವೆಂಟಿಲೇಟರ್ಗಳನ್ನು ಒದಗಿಸಬೇಕು. ಹೆಚ್ಚುವರಿಯಾಗಿ ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ಯಾನರ್ ಖರೀದಿಸಿ ಪೂರೈಸುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ವಾರಂಟೈನ್ ಕೇಂದ್ರಗಳಿಗೆ ಅಗತ್ಯ ಮೂಲ ಸೌಕರ್ಯಗಳ ಜೊತೆಗೆ ಹೆಚ್ಚುವರಿ ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಬೇಕು. ಕ್ವಾರಂಟೈನ್ ಕೇಂದ್ರಗಳ ನಿಗಾಕ್ಕೆ ಆಯುವರ್ೇದಿಕ್ ವೈದ್ಯರ ಸೇವೆಯನ್ನು ಬಳಸಿಕೊಳ್ಳಬೇಕು. ಕ್ವಾರಂಟೈನ್ ಕೇಂದ್ರಗಳ ತಪಾಸಣೆಯ ಹೊಣೆಯನ್ನು ಆಯುಷ್ ಇಲಾಖೆಗೆ ವಹಿಸಲು ಸೂಚನೆ ನೀಡಿದರು.

ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪಕರ್ಿತರ ಪೈಕಿ ಸಾರಿ ಹಾಗೂ ಐ.ಎಲ್.ಐ. ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ವ್ಯಕ್ತಿಗಳ ಆದ್ಯತೆಯ ಮೇಲೆ ಗಂಟಲು ದ್ರವ್ಯಗಳನ್ನು ತೆಗೆದು ಕಳುಹಿಸಬೇಕು. ಯಾವುದೇ ರೋಗ ಲಕ್ಷಣ ಇಲ್ಲದವರನ್ನು ಗೃಹ ಪ್ರತ್ಯೇಕತೆಯಲ್ಲಿ ಉಳಿಸಬೇಕು. ಇವರ ಆರೋಗ್ಯ ತಪಾಸಣೆ ಹಾಗೂ ನಿಗಾಕ್ಕೆ ಆಯುಷ್ ತರಬೇತಿ ಪಡೆಯುತ್ತಿರುವ ನಸರ್ಿಂಗ್ ವಿದ್ಯಾಥರ್ಿಗಳು ಹಾಗೂ ಜಿಲ್ಲಾ ಆಸ್ಪತ್ರೆಯ ನಸರ್ಿಂಗ್ ವಿದ್ಯಾಥರ್ಿಗಳನ್ನು ಬಳಸಿಕೊಳ್ಳಬೇಕು. ಸಾಧ್ಯವಾದರೆ ಇವರಿಗೆ ಕೋವಿಡ್ ತಪಾಸಣೆ ಕುರಿತಂತೆ ಅಲ್ಪಾವಧಿ ತರಬೇತಿಯನ್ನು ನೀಡಿ ಸಜ್ಜುಗೊಳಿಸಬೇಕು ಎಂದು ಸೂಚನೆ ನೀಡಿದರು.

ಕೋವಿಡ್ ಸೋಂಕು ಇದ್ದರೂ ರೋಗ ಲಕ್ಷಣ ರಹಿತರು ಮನೆಗಳಲ್ಲೇ ಇದ್ದು ಚಿಕಿತ್ಸೆ ಪಡೆಯಲು ಸಕರ್ಾರ ನಿಯಮ ರೂಪಿಸಿದೆ.  ಮನೆಯಲ್ಲಿ ಪ್ರತ್ಯೇಕ ರೂಂ, ಶೌಚಾಲಯ ವ್ಯವಸ್ಥೆಗಳಿದ್ದರೆ ರೋಗಿಗಳು ಬಯಸಿದರೆ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬಹುದು. ಇವರಿಗೆ ಜಿಲ್ಲಾ ವೈದ್ಯಕೀಯ ತಂಡ ಟೆಲಿಕನ್ಸಟೇಷನ್ ಮೂಲಕ ಚಿಕಿತ್ಸೆ ನೀಡಬಹುದು ಹಾಗೂ ವೈದ್ಯರು ರೌಂಡ್ಸ್ನಿಂದ ಚಿಕಿತ್ಸೆ ನೀಡಬಹುದು. ಇಂತಹ ಸಾಧ್ಯತೆಗಳನ್ನು ಪರಿಶೀಲಿಸಿ ಎಂದು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಮನಿ, ಡಾ.ಪಿ.ಆರ್.ಹಾವನೂರ, ಡಾ.ಪ್ರಭಾಕರ ಕುಂದೂರ ಸೇರಿದಂತೆ ವಿವಿಧ ವೈದ್ಯರು ಉಪಸ್ಥಿತರಿದ್ದರು.