ಲೋಕದರ್ಶನವರದಿ
ಶಿಗ್ಗಾವಿ : ಸಮಾಜದಲ್ಲಿ ಸಮಾನತೆಯ ಅಕ್ಷರ ಸಂಸ್ಕೃತಿ ಕಟ್ಟಬೇಕಾಗಿದೆ. ಪ್ರಗತಿಪರ ವಿಚಾರಗಳ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ನಮ್ಮಿಂದಾಗಬೇಕಾಗಿದೆ. ಹೊಸ ತಲ್ಲಣಗಳಿಗೆ ಚಳವಳಿಯೋಪಾದಿಯ ಸಾಮಾಜಿಕ ನೆಲೆಗಟ್ಟು ಇಂದಿನ ಕವಿಗಳಲ್ಲಿ ಇರಬೇಕು ಎಂದು ಸ್ಥಳೀಯ ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಎಂದು ಹೇಳಿದರು.
ಪಟ್ಟಣದ ಸರಕಾರಿ ಪ.ಪೂ ಕಾಲೇಜಿನಲ್ಲಿ, ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆ, ರಾಣೆಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆಗಳ ಆಶ್ರಯದಲ್ಲಿ ನಡೆದ ಕಾವ್ಯಾವಲೋಕನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೊಸ ಮಾಧ್ಯಮಗಳ ಚಲಾವಣೆಯಿಂದಾಗಿ, ಎಲ್ಲವನ್ನೂ ಬಿಡುಬೀಸಾಗಿ ಪ್ರಕಟಿಸುವ ಸ್ವಾತಂತ್ರ್ಯದಿಂದಾಗಿ ತಾನೂ ಸಾಗುವ ದಾರಿ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಕವಿಗಳಿಗೆ ಲಭ್ಯವಾಗುತ್ತಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ವ್ಯಂಗ್ಯಚಿತ್ರಕಾರ ನಾಮದೇವ ಕಾಗದಗಾರ, ಈ ವರ್ತಮಾನದ ಸಂದರ್ಭದಲ್ಲಿ ಸಮಾನತೆಯ ಸಮಾಜವನ್ನು ಕಟ್ಟುವ ಉದ್ದೇಶದಿಂದ ಇಂದಿನ ಕವಿಗಳು, ಸಾಹಿತಿಗಳು ಆಲೋಚನೆಗಳನ್ನು ರೂಪಿಸಬೇಕಾಗಿದೆ. ಈ ಕಾಲದ ಪಂಚಭೂತಗಳಾದ ಮೊಬೈಲ್, ಮಾಧ್ಯಮ, ಮುಖವಾಡ, ಜಾಹಿರಾತು, ಅಧಿಕಾರ ಇವೆಲ್ಲವೂ ಬದುಕಿನ ಅರ್ಥವನ್ನು ಅನರ್ಥಗೊಳಿಸಿವೆ. ಬದುಕಿನ ಜೀವಮಿಡಿತಗಳ ಸದ್ದು, ನಿಮ್ಮ ತುಡಿವ ಮನಸ್ಸನ್ನು ಸ್ಪಶರ್ಿಸಿದರೆ, ಕವಿತೆಯ ಕಸಬು ಸಾರ್ಥಕವಾಗುತ್ತದೆ, ನಾವೀಗ ಸಂಘರ್ಷದ ಬದುಕಿನಲ್ಲಿ ಬಾಳುತ್ತಿದ್ದೇವೆ. ಪ್ರಾಯೋಚಿತ ಕೋಮುವಾದ, ಜಾಗತೀಕರಣ, ಪ್ರಾದೇಶಿಕತೆ, ಭಯೋತ್ಪಾದನೆಗಳು ನಮ್ಮ ನೆಲದಲ್ಲಿ ಸಮಸ್ಯೆಗಳಾಗಿ ಬೆಳೆದು ನಮ್ಮ ಬುಡವನ್ನೇ ಅಲ್ಲಾಡಿಸುವಷ್ಟು ಶಕ್ತವಾಗಿವೆ, ಅಕ್ಷರಗಳಿಂದ ಏನೆಲ್ಲವನ್ನು ಸಾಧಿಸಬಹುದು, ಈ ಕನ್ನಡ ಸಾಹಿತ್ಯವನ್ನು ಪ್ರಗತಿಪರ ಹಾದಿಯಲ್ಲಿ ಮುನ್ನೆಡೆಸುವ ಶಕ್ತಿ ಇಂದಿನ ಯುವ ಕವಿಮನಸ್ಸುಗಳಿಂದ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿಯವರ 'ಬಟ್ಟೆಯೆಂಬದು ಬೆಂಕಿಯ ಹಾಗೆ' ಹಾಗೂ ಬಿ.ಪೀರ್ ಬಾಷಾ ಅವರ 'ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ' ಸಂಕಲನಗಳಲ್ಲಿಯ ಆಯ್ದ ಕವಿತೆಗಳನ್ನು ಸರಕಾರಿ.ಪ.ಪೂ.ಕಾಲೇಜಿನ 25 ವಿದ್ಯಾಥರ್ಿಗಳು ಕಾವ್ಯವಾಚನ ಮಾಡಿದರು.
ಈ ಸಂದರ್ಭದಲ್ಲಿ ಎಂ.ಆರ್. ಚೂರಿಯವರು ಬಿ.ಪೀರ್ ಬಾಷಾ ಅವರ 'ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ' ಕಾವ್ಯ ಸಂಕಲನಗಳನ್ನು ಪರಿಚಯಿಸುತ್ತಾ ಕಾಲ ಅವನಿಗೆ ದ್ವೇಷದ ಜೇಬು ಕೊಟ್ಟಿದೆ, ಅವನ ಖಚರ್ಿಗೆ ಪ್ರೀತಿಯನ್ನು ಜೇಬಿನಲ್ಲಿ ತುಂಬಿ ಬರೋಣ.
ಎಂದು ಹೇಳುತ್ತಾ ವರ್ತಮಾನದ ಸಂದರ್ಭದಲ್ಲಿ ಧಮರ್ಾಂಧತೆ, ಜಾತಿಯತೆ, ಭಯೊತ್ಪಾದನೆಯ ತಲ್ಲಣಗಳಿಗೆ ಪೀರ್ ಬಾಷಾ ಅವರ ಕಾವ್ಯ ಮುಖಾಮುಖಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.
ಉಪನ್ಯಾಸಕರುಗಳಾದ ರಂಜಾನ್ ಕಿಲ್ಲೇದಾರ ರವರು ಬಸವರಾಜ ಸೂಳಿಬಾವಿಯವರ 'ಬಟ್ಟೆಯೆಂಬದು ಬೆಂಕಿಯ ಹಾಗೆ' ಎಂಬ ಕಾವ್ಯವನ್ನು ಪರಿಚಯಿಸುತ್ತಾ ವರ್ತಮಾನದ ತಲ್ಲಣಗಳು ವ್ಯಕ್ತಿಗಳನ್ನು ಮತ್ತು ಸಮಾಜವನ್ನು ಹೇಗೆ ವಿಂಗಡಿಸುತ್ತಿವೆ ಅದಕ್ಕೆ ಬಸು ಅವರ ಕಾವ್ಯ ಉತ್ತರವಾಗಿ ನಮಗೆ ಕಂಡು ಬರುತ್ತದೆ. ಕಾವ್ಯವನ್ನು ವಿಮಶರ್ಿಸುವ ಚಚರ್ಿಸುವ ಹೊಸ ಓದು ಸಂಕುಚಿತವಾಗುತ್ತಿವೆ. ಇದೊಂದು ಸಂಕಷ್ಠದ ಕಾಲ.. ಇಂತಹ ಸಂದರ್ಭದಲ್ಲೂ ಕಾವ್ಯದ ಪರಿಭಾಷೆ, ನುಡಿಗಟ್ಟು, ಕಾವ್ಯದ ಸಂದರ್ಭವನ್ನೂ, ಲೋಕದ ದೃಷ್ಟಿಯನ್ನೂ, ಸಾಮಾಜಿಕ ಬದ್ಧತೆಯನ್ನೂ ನಿರ್ವಹಿಸಬಲ್ಲೆ ಎಂಬ ನಂಬಿಕೆ ಕವಿಗೆ ಇರಬೇಕಾದ್ದು ಮುಖ್ಯ. ತನ್ನ ಕಾವ್ಯದ ನುಡಿಗಟ್ಟನ್ನು ಪಡೆಯುವ ಗಂಭೀರ ಪ್ರಯತ್ನದ ಪ್ರಯೋಗಗಳಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಲತಾ ಜಿ ನಿಡಗುಂದಿ, ಫಕ್ಕಿರಜ್ಜ ನಾ ಯಲಿಗಾರ, ಸಮಾಜ ಸೇವಕ ಕರಿಯಪ್ಪ ಎನ್ ಶಿರಹಟ್ಟಿ, ಕವಿತಾ ನವಲಗುಂದ, ಎಸ್. ಎನ್. ಮುಗಳಿ. ರಂಜಾನ್ ಕಿಲ್ಲೇದಾರ, ಎಂ.ಆರ್. ಚೂರಿ, ಆರ್.ಎನ್.ಭೂಸಣಗೌಡ್ರ ಹಾಗೂ ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು.
ಕವಿ ರಂಜಾನ್ ಕಿಲ್ಲೇದಾರ ಕಾರ್ಯಕ್ರಮವನ್ನು ಸಂಯೋಜಿಸಿದರು. ರೂಪಾ ಮೇಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಸ್ವಾಗತಿಸಿದರು. ನಿವೇದಿತಾ ಕಡಳ್ಳಿ ಪ್ರಾಥರ್ಿಸಿದರು.
ನಾಗರತ್ನಾ ಅಣ್ಣಿಗೇರಿ, ವಿಶಾಲಾಕ್ಷಿ ಡಾವಣಗೆರೆ, ಅಶ್ವಿನಿ ಪಾಟೀಲ್, ಅಮರ್ಿತಾ ಪಟ್ಟಣಶೆಟ್ಟಿ ,ಲಕ್ಷ್ಮೀ ಮೆಣಸಿನಕಾಯಿ, ಸಂಗೀತಾ ದೈವಜ್ಞ, ಮೇಘಾ ಹುಚ್ಛಮ್ಮನವರ, ಅಪೂರ್ವ ಮನಕಟ್ಟಿ, ಹೇಮಾ ದೊಡ್ಡಮನಿ, ಹೇಮಾವತಿ ಹಡಪದ, ಶಾಂತಾ ಹೊಂಬಳಿ ಹಾಗೂ ಅಕ್ಷತಾ ಪೋಲಿಸ್ ಗೌಡ್ರ ಕಾವ್ಯ ವಾಚಿಸಿದರು.