ಸರ್ವರಿಗೂ ಸಮಪಾಲು ಸರ್ವರಿಗೂ ಸಮಭಾಳು ಬಜೆಟ್ : ಸಿದ್ದಾರ್ಥಗೌಡ ಪಾಟೀಲ
ಶಿಗ್ಗಾವಿ 27 : ಸರ್ವರಿಗೂ ಸಮಪಾಲು ಸರ್ವರಿಗೂ ಸಮಭಾಳು, ಸರ್ವೇ ಜನ ಸುಖಿ:ನೋ ಭವಂತು ಎಂಬ ಶಾಸ್ತ್ರೋಕಿಯ ಆಧಾರದ ಮೇಲೆ 2025-2026 ನೇ ಸಾಲಿನ ಅಯವಯ್ಯವನ್ನು ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಮಂಡಿಸಿದರು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಳಿಗೆಗಳು 20-25 ಸಾವಿರ ರೂಗಳಿಗೆ ಹರಾಜಾಗಿದ್ದು, ಪುರಸಭೆ ಮಳಿಗೆಗಳು 15 ವರ್ಷದಿಂದ 2- 3 ಸಾವಿರ ಕಾರಣ ಪುನ: ಟೆಂಡರ ಕರೆಯಲು ಪ್ರಸ್ತಾಪಿಸಿ, ಪೌರಕಾರ್ಮಿಕರಿಗೆ ವೇತನ ನೀಡುವ ಆದೇಶ ಬಂದಿದೆ ಅದರ ನಿರ್ವಹಣೆ ದಿನಗಳಲ್ಲಿ ಸಮಸ್ಯೆಯಾಗುವ ಸಂಭವವಿದೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ತ್ಯಾಜ್ಯ ವಸ್ತುಗಳ ನಿರ್ವಹಣೆ ಮಾಡುವ ದುರಸ್ತಿ ಉಪಕರಣದ ಬಗ್ಗೆ ಮುಖ್ಯಾಧಿಕಾರಿ ಮತ್ತು ಇಂಜಿನಿಯರ ವೀಕ್ಷಣೆ ಮಾಡಿ ವರದಿ ನೀಡಬೇಕುಸದಸ್ಯ ಗೌಸಖಾನ ಮುನಶಿ ಅಯವ್ಯಯ ಮಾಡುವಾಗ ವಿಶೇಷ ಅನುಧಾನ, ವೇತನ ಅನುಧಾನ, ಅಂದಾಜು ವೆಚ್ಚ ಪ್ರಗತಿ ಮತ್ತು ಲಾಭಾಂಶದ ಖರ್ಚು ವೆಚ್ಚವನ್ನು ಮಾಡಿ ಮುಂಗಡ ಪತ್ರ ಮಾಡಿರಿಸದಸ್ಯ ಸುಭಾಸ ಚವ್ಹಾಣ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅನೇಕ ಕಾಮಗಾರಿಗಳು ಹಾಗೇ ಉಳಿದಿದ್ದಾವೆ ಅವುಗಳ ಅನುಧಾನ ಕಾರ್ಯರೂಪಕ್ಕೆ ತರಬೇಕು ಸದಸ್ಯ ಪರುಶರಾಮ ಸೊನ್ನದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪಲಾನುಭವಿಗಳಿಗೆ 25 ಸಾವಿರ ಹಣದ ಜೀವ ವಿಮೆ ಬಾಂಡ ನೀಡಿಲ್ಲ ಅನುಧಾನದ ಕೊರತೆಸದಸ್ಯ ಮಂಜುನಾಥ ಬ್ಯಾಹಟ್ಟಿ ಭಜೆಟ್ ನಲ್ಲಿ ಸುಂದರ ನಗರ ಮಾಡಲು ಅನುಧಾನ ಮೀಸಲಿಟ್ಟಿದ್ದು ಆದರೆ ಸ್ವಚ್ಚತೆ ಮಾಡಲು ಪೌರ ಕಾರ್ಮಿಕರು ಆಯ್ದ ಕೆಲವಡೆ ಮಾತ್ರ ಸ್ವಚ್ಚಗೋಳಿಸುತ್ತಿದ್ದಾರೆ ಇನ್ನೂ ಕೆಲವೆಡೆ ಬರುತ್ತಿಲ್ಲಸದಸ್ಯೆ ಸಂಗೀತಾ ವಾಲ್ಮೀಕಿ. ಈ ಮುಂಗಡ ಪತ್ರದಲ್ಲಿ ಏನು ಇಲ್ಲ. ಇದು ನಿರಾಶಾದಾಯಕ ಬಜೆಟ್.
ಇದು ಪ್ರಗತಿದಾಯಕವಲ್ಲಸದಸ್ಯ ದಯಾನಂದ ಅಕ್ಕಿ.್ಷ ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ,ಸ್ಥಾಯಿ ಸಮಿತಿ ಅಧ್ಯಕ್ಷೆ ಅನುರಾಧಾ ಮಾಳವಾದೆ, ಪುರಸಭೆ ಸದಸ್ಯರಾದ ಸುಲೇಮಾನ ತರ್ಲಗಟ್ಟ, ಜಾಫರಖಾನ ಪಠಾಣ,ಮುಸ್ತಾಕ ಅಹ್ಮದ ತಹಶಿಲ್ದಾರ, ಜ್ಯೋತಿ ನಡೂರ,ರೂಪಾ ಬನ್ನಿಕೊಪ್ಪ, , ಶೇಖವ್ವ ಶಿಗ್ಗಾವಿ,ವಸಂತಾ ಬಾಗೂರ, ರೇಖಾ ಕಂಕನವಾಡ, ನಸ್ರೀನಬಾನು ತಿಮ್ಮಾಪೂರ, ಮೆಹಬೂಬಿ ನೀರಲಗಿ, ಸೇರಿದಂತೆ ನಾಮನಿರ್ದೇಶಿತ ಸದಸ್ಯರಾದ ಚಂದ್ರು ಕೊಡ್ಲಿವಾಡ, ಮುನ್ನಾ ಮಾಲ್ದಾರ, ಪರ್ವಿಜ ಮುಲ್ಲಾ, ಸಾಧಿಕ ಮೊಗಲಲ್ಲಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪುರಸಭೆ ಅಧಿಕಾರಿ ಶೈಲಜಾ ಪಾಟೀಲ ಮುಂಗಡ ಪತ್ರ ಕಾರ್ಯಕ್ರಮ ನಿರ್ವಹಿಸಿದರು.