ಪರಿಸರ ಅಸಮತೋಲನದ ಪರಿಣಾಮ ಮಾನವ ಸಂಕಷ್ಟ ಎದುರಿಸುತ್ತಿದ್ದಾನೆ

ಲೋಕದರ್ಶನವರದಿ

ರಾಣೇಬೆನ್ನೂರು: ಜೂ.5: ಜಾಗತಿಕ ತಾಪಮಾನದ ಪರಿಣಾಮ ಇಂದು ಪರಿಸರ ಅಮಸತೋಲನದ ಕಾರಣದಿಂದಾಗಿ ಮಾನವರು ಮತ್ತು ಪ್ರಾಣಿ-ಪಕ್ಷಿಗಳು ಅನೇಕ ರೀತಿಯಲ್ಲಿ ಸಂಕಷ್ಠಗಳನ್ನು ಎದುರಿಸುವಂತಾಗಿದೆ.  ಇದನ್ನು ತಡೆಗಟ್ಟಬೇಕಾದರೆ, ಪರಿಸರ ಸಮತೋಲನಕ್ಕೆ ಸಸಿಗಳನ್ನು ಸಮಾನಾಂತರದಲ್ಲಿ ನೆಡುವುದರ ಮೂಲಕ ಶುದ್ಧ ಮತ್ತು ಸ್ವಚ್ಛತೆ ಹಾಗೂ ಹಸಿರು ವಾತಾವರಣ ನಿಮರ್ಿಸುವುದೊಂದೆ ಪಯರ್ಾಯ ಮಾರ್ಗವಾಗಿದೆ ಎಂದು ಆರೇಮಲ್ಲಾಪುರ ಗ್ರಾಮದ ಶ್ರೀ ಶರಣ ಬಸವೇಶ್ವರ ಮಹಾಸಂಸ್ಥಾನಮಠದ ಪೀಠಾದಿಪತಿ ಡಾ|| ಪ್ರಣವಾನಂದರಾಮ ಮಹಾಸ್ವಾಮಿಗಳು ನುಡಿದರು.

ಅವರು ಶುಕ್ರವಾರ ತಾಲೂಕಿನ ಆರೇಮಲ್ಲಾಪುರ ಗ್ರಾಮದ ಸಕರ್ಾರಿ ಆಸ್ಪತ್ರೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗ್ರಾಮದ ಅನೇಕ ನಾಗರೀಕರೊಂದಿಗೆ ನೂರಾರು ಸಸಿಗಳನ್ನು ನೆಡುವುದರ ಮೂಲಕ ಆಚರಿಸಿದರು. 

 ಗ್ರಾಮಗಳು ಸುಂದರವಾಗಿದ್ದರೇ, ಅಲ್ಲಿನ ಪರಿಸರ ಸುಂದರವಾಗಿರಲು ಸಾಧ್ಯ.  ಪರಿಸರದ ಬಗ್ಗೆ ಪ್ರತಿಯೊಬ್ಬರೂ ಅತ್ಯಂತ ಕಾಳಜಿ ವಹಿಸಿ ಇಂದು ನೆಟ್ಟಿರುವ ಸಸಿಗಳನ್ನು ಪರಿಪೂರ್ಣವಾಗಿ ಬೆಳೆಸುವ ನಿಟ್ಟಿನಲ್ಲಿ ನಾಗರೀಕರು ಜವಾಬ್ದಾರಿ ಹೊತ್ತು ತಮ್ಮ ಮಕ್ಕಳಂತೆ ಸಾಕಿ ಬೆಳೆಸಲು ಮುಂದಾಗಬೇಕು.  ಅದು ಭವಿಷ್ಯದಲ್ಲಿ ತಮ್ಮ ರಕ್ಷಣೆಗೆ ನಿಲ್ಲುವುದರ ಜೊತೆಗೆ ಸುತ್ತಮುತ್ತಲ ವಾತಾವರಣದ ಶುದ್ಧಗೊಳಿಸುತ್ತದೆ ಎಂದರು.       ತಾಪಂ ಸದಸ್ಯ ರಾಜು ಸುವರ್ೆ, ಆಸ್ಪತ್ರೆ ವೈದ್ಯ ಡಾ|| ಕಾಂತೇಶ್, ಪಿಡಿಓ ಜೆ.ಬಿ.ಹರಿಜನ್, ನಿವೃತ್ತ ಪಿಎಸ್ಐ ಬಸಪ್ಪ ಸುವರ್ೆ, ಯಲ್ಲಪ್ಪ ಸುವರ್ೆ, ಪ್ರಭು ಮುದಿಗೌಡ್ರ, ಮಂಜುನಾಥ ವಡ್ಡರ, ಗಾಳೆಪ್ಪ ಮರಿಯಮ್ಮನವರ, ನಿಂಗಪ್ಪ ಹಲವಾಗಲ, ಮಾಲತೇಶ್ ಸುವರ್ೆ, ಬಸವಂತಪ್ಪ ಕೊಪ್ಪದ, ಶಿವು ಸಣ್ಣಬೊಮ್ಮಾಜಿ, ನಾಗರಾಜ ನಾಗರಜ್ಜಿ, ಕರಿಯಪ್ಪ ಶ್ಯಾಮಣ್ಣನವರ, ಕುಮಾರ ಶೆಟ್ಟರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.