ಹಾವೇರಿ: ಜು.08: ಹಾವೇರಿ ತಾಲೂಕಿನ ಕಬ್ಬೂರ ಗ್ರಾಮದ ಕುವೆಂಪು ಶತಮಾನೋತ್ಸವ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ವಿವಿಧ ಬಗೆಯ ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ ಅವರು ಮಾತನಾಡಿ, ಶಾಲೆಯ ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ಇಟ್ಟುಕೊಂಡು ಅಕ್ಷರ ದಾಸೋಹ ಯೋಜನೆಗೆ ಅನುಕೂಲವಾಗುವ ಬಗೆ ಬಗೆಯ ಸಸಿಗಳನ್ನು ಬೆಳೆಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಅಕ್ಷರದಾಸೋಹಕ್ಕೆ ಅನುಕೂಲವಾಗಲೆಂದು ಶಾಲೆಯ ಶಿಕ್ಷರು ಸೇರಿ ತಮ್ಮ ಸ್ವಂತ ಹಣದಿಂದಲೇ ಖರೀದಿಸಿದ ತೆಂಗು, ಕರಿಬೇವು, ಲಿಂಬೆ ನುಗ್ಗೆ ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.
ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರಶೇಖರ ಭಗವಂತಗೌಡರ, ತಾಲೂಕ ದೈಹಿಕ ಶಿಕ್ಷಣ ನಿದರ್ೆಶಕ ಎನ್.ಐ ಇಚ್ಚಂಗಿ, ಶಾಲೆಯ ಸಿಬ್ಬಂದಿ ವರ್ಗ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಮತ್ತಿತರರು ಭಾಗವಹಿಸಿದ್ದರು.