ಲಂಡನ್, ಅ 16: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ಜೆನ್ನಿ ಗನ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
ಇಂಗ್ಲೆಂಡ್ ಪರ ಅತಿ ಹೆಚ್ಚು ಟಿ-20 ಪಂದ್ಯಗಳಾಡಿರುವ ಆಟಗಾರ್ತಿ ಎಂಬ ಗೌರವ ಜೆನ್ನಿ ಗನ್ ಅವರಿಗಿದೆ. ದೇಶದ ಪರ 259 ಪಂದ್ಯಗಳಾಡಿದ್ದಾರೆ. ಮೂರು ಬಾರಿ ವಿಶ್ವಕಪ್ ಜಯ ಹಾಗೂ ಐದು ಆಷಸ್ ಸರಣಿ ಗೆದ್ದ ಇಂಗ್ಲೆಂಡ್ ತಂಡದಲ್ಲಿ ಗನ್ ಇದ್ದರು.
ಚಾಲರ್ೊಟ್ ಎಡ್ವಾಡ್ರ್ಸ (309) ಇಂಗ್ಲೆಂಡ್ ಪರ ಅತಿ ಹೆಚ್ಚು ಪಂದ್ಯಗಳಾಡಿದ್ದು. ಇವರ ಬಳಿಕ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಜೆನ್ನಿ ಗನ್ ಎರಡನೇ ಸ್ಥಾನದಲ್ಲಿದ್ದಾರೆ.
2009ರಲ್ಲಿ ಉದ್ಘಾಟನಾ ಐಸಿಸಿ ಮಹಿಳೆಯರ ಟಿ-20 ಗೆದ್ದ ಇಂಗ್ಲೆಂಡ್ ತಂಡದಲ್ಲಿ ಗನ್ ಇದ್ದರು. ಅದೇ ವರ್ಷ ಮತ್ತೊಂದು ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಲ್ಲಿಯೂ ಗನ್ ಇದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಜೀವನದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಕ್ರಿಕೆಟ್ಗೆ ವಿದಾಯ ಹೇಳಲು ಇದು ಸಕಾಲ ಎಂದು ಭಾವಿಸಿದ್ದೇನೆ. ಚಿಕ್ಕ ಬಾಲಕಿಯಿದ್ದಾಗ ಕ್ರಿಕೆಟ್ ಆಟವನ್ನು ಆಡಿ ಆನಂದಿಸುತ್ತಿದ್ದೆ. ಅಂದೇ, ವೃತ್ತಿಪರ ಕ್ರಿಕೆಟ್ ಆಟಗಾರ್ತಿ ಆಗಬೇಕೆಂದು ಕನಸು ಕಂಡಿದ್ದೆ. ಅದರಂತೆ ಇಂಗ್ಲೆಂಡ್ ಪರ ಆಡುವ ಮೂಲಕ ಬಾಲ್ಯದಲ್ಲಿ ಅಂದುಕೊಂಡಿದ್ದ ಕನಸು ನನಸು ಮಾಡಿದ್ದೇನೆ ಎಂದು ಜೆನ್ನಿ ಗನ್ ಹೇಳಿದರು.