ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ‌ ಸಾವಯವ ಕೃಷಿಕನ ಸಾಧನೆ

ಬೆಂಗಳೂರು, ಜೂ.12,ಶುದ್ಧ  ಹಾಗೂ ಸಾವಯವ ತೆಂಗಿನ ಪ್ರಾಡಕ್ಟ್‌ಗಳು ಮಾರುಕಟ್ಟೆಯಲ್ಲಿ ಸಿಗುವುದು ಅತಿ ವಿರಳ. ಸಾವಯವ  ಉತ್ಪನ್ನಗಳು ಮಾರುಕಟ್ಟೆ ಸನ್ನಿವೇಶವನ್ನು ಬದಲಾಯಿಸುತ್ತಿರುವ ಸಮಯದಲ್ಲಿ, ತೆಂಗಿನಕಾಯಿ  ಆಧಾರಿತ ಉತ್ಪನ್ನಗಳನ್ನು ಪೂರೈಸುವ "ತೆಂಗಿನ್‌" ಬ್ರಾಂಡ್‌ ಕಂಪನಿಯು ನೇರವಾಗಿ  ರೈತರಿಂದ ಖರೀದಿಸುವ ತೆಂಗಿನ ಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸಾವಯವ  ಮಾರುಕಟ್ಟೆಯಲ್ಲಿ ಒದಗಿಸುತ್ತಿದೆ.ಮಧು  ಕಾರ್ಗುಂಡ್ ಅವರು "ತೆಂಗಿನ್" ಬ್ರಾಂಡ್‌ನ ಸಂಸ್ಥಾಪಕರು. ವೃತ್ತಿಯಲ್ಲಿ ಐಟಿ  ಉದ್ಯಮದಲ್ಲಿ‌ ಇದ್ದರೂ ಭವಿಷ್ಯವನ್ನು ಸಾವಯವದಲ್ಲಿ ಕಟ್ಟಿಕೊಳ್ಳಬೇಕೆಂಬ ಮಹದಾಸೆ  ಹೊಂದಿರುವ ಇವರು "ತೆಂಗಿನ್‌" ಎಂಬ ಬ್ರಾಂಡ್‌ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ  ಮೂಡಿಸುತ್ತಿದ್ದಾರೆ.  ಕೋವಿಡ್‌-19  ಸಂದರ್ಭದಲ್ಲಿ ಉದ್ಯಮಗಳ ಕಡಿತ ಹೆಚ್ಚಾಗುತ್ತಿವೆ. ಇಂಥ ಸಂದರ್ಭದಲ್ಲಿ ಬಹುತೇಕರು  ಕೃಷಿಯತ್ತ ಮರಳಲು ಮನಸ್ಸು ಮಾಡಿದ್ದಾರೆ. ಕೃಷಿಯತ್ತ ತೆರಳಲು ಇದು ಉತ್ತಮ‌ ಸಮಯವಾಗಿದೆ.  ಸಾವಯವ ಪದಾರ್ಥ ಬೆಳೆಗೆ ಈಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದೆ. ಆರೋಗ್ಯದ ಆಹಾರ ಪದಾರ್ಥ  ಸೇವನೆಯಿಂದ ಆರೋಗ್ಯ ವೃದ್ಧಿಯಾಗುವ ಬಗ್ಗೆ ಜನರು ಜಾಗೃತರಾಗಿದ್ದಾರೆ.

ಈ ಸಂದರ್ಭದಲ್ಲಿ  ಸಾವಯವ ಬೆಳೆಗೆ ಆದ್ಯತೆ ಕೊಡಬೇಕು. ಸಾವಯವ ತೆಂಗಿನ ಕಾಯಿಯಿಂದ ತರಹೇವಾರಿ ಆಹಾರ  ಪದಾರ್ಥಗಳನ್ನು ತಯಾರಿಸಿ "ತೆಂಗಿನ" ಬ್ರಾಂಡ್‌ ಮೂಲಕ ಎಲ್ಲಾ ಸಾವಯವ ಸ್ಟೋರ್‌ಗಳಲ್ಲೂ  ಲಭ್ಯವಿರುವಂತೆ‌ ನೋಡಿಕೊಳ್ಳಲಾಗುತ್ತಿದೆ.ಹಳ್ಳಿಯಲ್ಲಿನ  ಯುವಕರು ಉದ್ಯೋಗ ಹರಸಿ ಸಿಟಿಗಳತ್ತ ಬರುತ್ತಿದ್ದರು.‌ ಅವರೆಲ್ಲ ಹಳ್ಳಿಯಲ್ಲಿಯೇ  ಕೃಷಿಯಲ್ಲಿ ತೊಡಗಿಕೊಳ್ಳಬೇಕು. ತೆಂಗಿನ ಕಾಯಿ ಬೆಳೆಯುವವರಿಗೆ ನಮ್ಮ ಕಂಪನಿಯು ಹೆಚ್ಚು  ಒತ್ತು ನೀಡಿ ಅವರನ್ನು ಬೆಳೆಸಲಿದೆ. ಮಹಿಳೆಯರು ಈ ಉದ್ಯಮದಲ್ಲಿ ತೊಡಗಿಕೊಂಡರೆ ಮಹಿಳಾ  ಸಬಲೀಕರಣವು ಸಾಧ್ಯವಾಗಲಿದೆ. "ತೆಂಗಿನ್‌" ಪ್ರಾಡಕ್ಟ್‌ಗಳು: ತೆಂಗಿನಕಾಯಿ  ಸಕ್ಕರೆ,  ತೆಂಗಿನಕಾಯಿ ಚಿಪ್ಸ್, ತೆಂಗಿನ ಚಿಪ್ಪು ಬಟ್ಟಲುಗಳು, ತೆಂಗಿನ ಚಿಪ್ಪಿನಲ್ಲಿ  ಸಸ್ಯಾಹಾರಿ ಮೇಣದಬತ್ತಿ, ತೆಂಗಿನಕಾಯಿ ಸಾಬೂನುಗಳು, ಕಾಯಿರ್ ಡಿಶ್ ಸ್ಕ್ರಬ್ಬರ್‌ಗಳು,  ಬಾಟಲ್ ಮತ್ತು ತರಕಾರಿ ಕ್ಲೀನರ್‌ ಸೇರಿದಂತೆ ತೆಂಗಿನ ಮರದಿಂದ ಅನೇಕ‌ ಉತ್ಪನ್ನಗಳನ್ನು  ತಯಾರಿಸಲಾಗುತ್ತಿದೆ. ಈ ಪದಾರ್ಥಗಳು ಎಲ್ಲಾ ಸಾವಯವ ಸ್ಟೋರ್‌ಗಳಲ್ಲೂ ಲಭ್ಯವಿರಲಿದೆ. ತೆಂಗಿನ್‌ ಬ್ರಾಂಡ್‌ ಉತ್ಪನ್ನಗಳ ಪ್ಯಾಕೇಜಿಂಗ್ ಪರಿಸರ ಸ್ನೇಹಿಯಾಗಿದೆ ರಾಸಾಯನಿಕ ರಹಿತವಾಗಿದ್ದು ಗಾಜಿನ ಜಾಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ.ಮಹಿಳೆಯರು  ಮತ್ತು ಗ್ರಾಮೀಣ ರೈತರನ್ನು ಸಬಲೀಕರಣಗೊಳಿಸುವ ಸುಸ್ಥಿರತೆಯನ್ನು ಉತ್ತೇಜಿಸುವ ಸಾವಯವ  ತೆಂಗಿನಕಾಯಿ ಉತ್ಪನ್ನಗಳನ್ನು ತಯಾರಿಸುವುದರಿಂದ, ಕೃಷಿ ಪರಿಸರ ವ್ಯವಸ್ಥೆಯನ್ನು  ಸುಧಾರಿಸಲು ಮತ್ತು ರಾಸಾಯನಿಕ ಮುಕ್ತ, ನೈಸರ್ಗಿಕ ಮತ್ತು ಆರೋಗ್ಯಕರ ತೆಂಗಿನಕಾಯಿ  ಆಧಾರಿತ ಉತ್ಪನ್ನಗಳನ್ನು ಒದಗಿಸಲು ತೆಂಗಿನ್ ಸಿದ್ಧವಿದೆ ಎಂದು ಪ್ರಕಟಣೆ ತಿಳಿಸಿದೆ.