ಕೊರೊನಾ ನಿಯಂತ್ರಣಕ್ಕೆ ಅಪಾರ್ಟ್ ಮೆಂಟ್ ನಲ್ಲಿ ನಿಯಮ‌ ಜಾರಿ

ಬೆಂಗಳೂರು,  ಮಾ.30, ಕೊರೊನಾ ಸೋಂಕು ತಡೆಗಟ್ಟಲು ಈಗಾಗಲೇ ಹಲವು ಕಠಿಣ ಕ್ರಮಗಳನ್ನು  ಕೈಗೊಳ್ಳಲಾಗಿದ್ದು, ಈಗ ಕೊರೊನಾ ತಡೆಗೆ ಸಿಲಿಕಾನ್ ಸಿಟಿ ಅಪಾರ್ಟ್ ಮೆಂಟ್ ಗಳಲ್ಲಿ ಕಠಿಣ  ಕ್ರಮ ಜರುಗಿಸಲಾಗಿದೆ.ಬೆಂಗಳೂರಿನ ಅಪಾರ್ಟ್ ಮೆಂಟ್ಸ್ ಅಸೋಸಿಯೇಷನ್ ವತಿಯಿಂದ ಹೊಸ ನಿಯಮವೊಂದು ಜಾರಿ ಮಾಡಲಾಗಿದೆ. ಎಲ್ಲರೂ ಕಡ್ಡಾಯವಾಗಿ ತಮ್ಮ ಫ್ಲ್ಯಾಟ್ ಗಳಲ್ಲಿಯೇ ಇರಬೇಕು. ಒಂದು ವೇಳೆ ಅಪಾರ್ಟ್ ನಿಂದ ಹೊರಗೆ ಹೋದರೆ, ಪುನಃ ಅಪಾರ್ಟ್ ಮೆಂಟ್ ಪ್ರವೇಶಿಸುವಂತಿಲ್ಲ ಎಂಬ ನಿಯಮ ಜಾರಿ ಮಾಡಲಾಗಿದೆ.ಕೇವಲ  ತುರ್ತು ಸಂದರ್ಭವಿದ್ದಾಗ ಮಾತ್ರ ಹೊರಗಡೆ ಹೋಗಬಹುದು. ಆದರೆ, ಹೋಗುವುದಕ್ಕಿಂತ  ಮುಂಚಿತವಾಗಿ, ಎಲ್ಲಿ ಹೋಗುತ್ತಿದ್ದಾರೆ? ಯಾತಕ್ಕಾಗಿ ಎಂಬಿತ್ಯಾದಿ ಮಾಹಿತಿಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ.ಈ ಮೂಲಕ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಿದೆ.