ಕೊಪ್ಪಳ: ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಸಂದರ್ಭದಲ್ಲಿ ಆ ಸ್ಥಳದ ಮೂಲ ಸಂಸ್ಕೃತಿ, ಸಂಪ್ರದಾಯ ಹಾಗೂ ವಾಸ್ತುಶಿಲ್ಪಗಳಿಗೆ ಧಕ್ಕೆಯಾಗದಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಐತಿಹಾಸಿಕ ತಾಣದ ಸ್ವಂತಿಕೆಯನ್ನು ಉಳಿಸಿ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ. ಟಿ. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐತಿಹಾಸಿಕ ತಾಣಗಳಿಗೆ ಅದರದೇ ಆದ ಮಹತ್ವವಿರುತ್ತದೆ. ಆ ಮಹತ್ವವನ್ನು ಜನರಿಗೆ ತಿಳಿಸುವುದು ಹಾಗೂ ಆ ತಾಣದತ್ತ ಜನರನ್ನು ಆಕಷರ್ಿಸಲು ಪ್ರವಾಸಿ ತಾಣಗಳ ಅಭಿವೃದ್ಧಿ ಮುಖ್ಯವಾಗಿರುತ್ತದೆ. ಆದರೆ ಅಭಿವೃದ್ಧಿ ಸಂದರ್ಭ ಯಾವುದೇ ಪ್ರವಾಸಿ ತಾಣದ ಮೂಲ ಇತಿಹಾಸಕ್ಕೆ ಧಕ್ಕೆ ಉಂಟಾಗಬಾರದು. ಅಭಿವೃದ್ಧಿ ಕಾರ್ಯಗಳು ಜನರನ್ನು ಹೆಚ್ಚು ಹೆಚ್ಚು ಆಕರ್ಷಿಸಬೇಕು. ಆಥರ್ಿಕವಾಗಿಯೂ ಜಿಲ್ಲೆಗೆ ಲಾಭದಾಯಕವಾಗಿರಬೇಕು. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಜನರು ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳತ್ತ ತಿರುಗಿ ನೋಡುವಂತಾಗಬೇಕು ಎಂದು ಅವರು ಹೇಳಿದರು.
ಕೊಪ್ಪಳದ ಕೋಟೆಯು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ್ದು ಅದರ ಪುನರುಜ್ಜೀವನ ಮತ್ತು ರಕ್ಷಣೆಗೆ ರಾಜ್ಯ ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿ ಯೋಜನಾಬದ್ಧ ಕ್ರಮ ಕೈಗೊಳ್ಳಬೇಕು. ಮಾತ್ರವಲ್ಲದೇ ಜಿಲ್ಲೆಯಲ್ಲಿರುವ ಹೆಚ್ಚಿನ ಜನರಿಗೆ ತಿಳಿದಿರದ ಪ್ರಾವಾಸಿ ತಾಣಗಳನ್ನು ಪ್ರಾವಸಿ ತಾಣಗಳ ಪಟ್ಟಿಯಲ್ಲಿ ಸೇರಿಸಬೇಕು. ಸೇರ್ಪಡೆಯಾದ ಪಟ್ಟಿಯನ್ನು ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ ಅಧಿಕೃತ ಪ್ರವಾಸಿ ತಾಣಗಳನ್ನಾಗಿ ಗುರುತಿಸಬೇಕು ಹಾಗೂ ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಪ್ರದೇಶವು ವಿಜಯ ನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ. ಆನೆಗುಂದಿಗೆ ಹತ್ತಿರದ ಅಂಜನಾದ್ರಿ ಬೆಟ್ಟವು ರಾಮಾಯಣದ ಐತಿಹ್ಯವುಳ್ಳ ಸ್ಥಳವಾಗಿದ್ದು, ದೇಶ ಮಾತ್ರವಲ್ಲದೆ ವಿದೇಶಿಗರನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಕಷರ್ಿಸಿದೆ. ಈ ಸ್ಥಳಗಳಿಗೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಪ್ರವಾಸಿಗರಿಗೆ ತಂಗಲು ಅನುಕೂಲವಾಗುವಂತೆ ಯಾತ್ರಿ ನಿವಾಸಗಳನ್ನು ನಿಮರ್ಿಸಬೇಕು. ಜಿಲ್ಲೆಯ ಬಹು ದೊಡ್ಡ ಉತ್ಸವವಾದ ಆನೆಗುಂದಿ ಉತ್ಸವದ ಕುರಿತು ಹೆಚ್ಚಿನ ರೀತಿಯಲ್ಲಿ ಪ್ರಚಾರವಾಗಬೇಕು. ಕೊಪ್ಪಳದಲ್ಲಿ ಪ್ರತಿ ವರ್ಷ ನಿದರ್ಿಷ್ಟ ದಿನದಂದು ನಡೆಯುವ ಗವಿಸಿದ್ದೇಶ್ವರ ಜಾತ್ರೆಯಂತೆ ಆನೆಗುಂದಿ ಉತ್ಸವಕ್ಕೂ ವರ್ಷದ ಒಂದು ದಿನವನ್ನು ನಿಗದಿ ಪಡಿಸಬೇಕು. ಭೀಕರ ಪ್ರಾಕೃತಿಕ ವಿಕೋಪದ ಹೊರತಾಗಿ ಯಾವುದೇ ಕಾರಣಕ್ಕೂ ಉತ್ಸವ ನಿಲ್ಲಬಾರದು. ಪ್ರತಿವರ್ಷ ತಪ್ಪದೇ ಉತ್ಸವವನ್ನು ಆಚರಿಸುತ್ತಾ ಪ್ರವಾಸಿಗರನ್ನು ಆಕಷರ್ಿಸುವುದರ ಜೊತೆಗೆ ಜಿಲ್ಲೆಯ ಇತಿಹಾಸವನ್ನು ಜಗತ್ತಿನಾದ್ಯಂತ ಪಸರಿಸಬಹುದು ಎಂದು ಅವರು ಹೇಳಿದರು.
ಜಿಲ್ಲೆಯ ಪ್ರಮುಖ ಧಾಮರ್ಿಕ ಸ್ಥಳವಾದ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರದೇಶದಲ್ಲಿ ಯಾತ್ರಿ ನಿವಾಸ ನಿಮರ್ಾಣ, ಸುಸುಜ್ಜಿತ ರಸ್ತೆಗಳು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿಮರ್ಿಸಲು ಕ್ರಮ ಕೈಗೊಳ್ಳಬೇಕು. ಕೊಪ್ಪಳ ನಗರದ ಹುಲಿಕೆರೆಯನ್ನು ಪ್ರವಾಸಿ ತಾಣವಾಗಿ ಉತ್ತೇಜಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸಿ. ಜಿಲ್ಲೆಯ ಯಾವುದೇ ಐತಿಹಾಸಿಕ ತಾಣಗಳು, ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡುವುದು ಮಾತ್ರವಲ್ಲ ಅವುಗಳ ನಿರ್ವಹಣೆಯೂ ಅಷ್ಟೇ ಮುಖ್ಯ. ಅಭಿವೃದ್ಧಿ ಕಾಮಗಾರಿಗಳಿಗೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಅವುಗಳ ವ್ಯವಸ್ಥಿತ ನಿರ್ವಹಣೆ ಮಾಡದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಯಾವುದೇ ಪ್ರವಾಸಿ ತಾಣದ ಅಭಿವೃದ್ಧಿ ಪೂರ್ಣಗೊಂಡ ನಂತರ ಅವುಗಳ ನಿರ್ವಹಣೆಗೆ ಹೆಚ್ಚು ಗಮನ ನೀಡಿ ಎಂದು ಸಚಿವರು ಹೇಳಿದರು.
ಕೊಪ್ಪಳದ ಕೋಟೆ, ಪಂಪಾ ಸರೋವರ, ಆನೆಗುಂದಿಯ ಚಿಂತಾಮಣಿ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ, ನವಬೃಂದಾವನ, ಕೃಷ್ಣ ದೇವರಾಯನ ಸಮಾಧಿ, ಅಂಜನಾದ್ರಿ ಪರ್ವತ, ಇಟಗಿಯ ಮಹದೇವ ದೇವಾಲಯ, ಕನಕಗಿರಿಯ ಕನಕಾಚಲಪತಿ ದೇವಾಲಯ, ಕಿನ್ನಾಳ ಗ್ರಾಮದ ಕರಕುಶಲ ತರಬೇತಿ ಕೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಒಂದಿಲ್ಲೊಂದು ಪ್ರಮುಖ ಐತಿಹಾಸಿಕ ತಾಣಗಳಿವೆ. ಅವುಗಳ ಕುರಿತು ಜಿಲ್ಲಾ ವೆಬ್ಸೈಟ್ನಲ್ಲಿ ಸೇರ್ಪಡೆ ಮಾಡಬೇಕು. ಬೆಂಗಳೂರಿನಲ್ಲಿರುವ ಓಲಾ, ಉಬರ್ ಟ್ಯಾಕ್ಸಿಗಳಂತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸಹಾಯಧನ ನೀಡಲಾಗುವ ಪ್ರವಾಸಿ ಟ್ಯಾಕ್ಸಿಗಳನ್ನು ಅಪ್ಲಿಕೇಷನ್ ಮೂಲಕ ನಿರ್ವಹಿಸಬೇಕು. ಇದರಿಂದ ಪ್ರವಾಸಿ ಟ್ಯಾಕ್ಸಿಗಳ ಸಮರ್ಪಕ ಬಳಕೆ ಸೇರಿದಂತೆ ಪ್ರವಾಸಿಗರಿಗೆ ನಿರ್ಧಿಷ್ಟ ಪ್ರದೇಶದ ಅಂತರ, ಅದರ ವೆಚ್ಚ ಹಾಗೂ ಇತರ ವಿವರಣೆಗಳು ಸುಲಭವಾಗಿ ದೊರೆಯುವಂತೆ ಮಾಡಬಹುದು. ಈ ಕುರಿತು ಪ್ರವಾಸೋದ್ಯಮ ಇಲಾಖೆಯಿಂದಲೇ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆಗೂಡಿ ಜಿಲ್ಲೆಯಲ್ಲಿ ಪ್ರತಿವರ್ಷ ನಿರ್ದೇಷ್ಟವಾಗಿ ನಡೆಯುವ ಉತ್ಸವ, ಪ್ರಮುಖ ಕಾರ್ಯಕ್ರಮಗಳ ಕುರಿತು ಕ್ಯಾಲೆಂಡರ್ ತಯಾರಿಸಬೇಕು. ಪ್ರವಾಸಿಗರಿಗೆ ಇಲ್ಲಿನ ಕಾರ್ಯಕ್ರಮಗಳ ಕುರಿತು ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲೆಯ ಭಾನಾಪುರ ಗ್ರಾಮಕ್ಕೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ ಸ್ಮರಣಾರ್ಥವಾಗಿ ಅಲ್ಲಿ ಒಂದು ಸ್ಮಾರಕವನ್ನು ನಿಮರ್ಿಸಿ. ಅಲ್ಲಿ ಗಾಂಧೀಜಿಯವರ ಜೀವನದ ಪ್ರಮುಖ ಘಟನೆಗಳು, ಅವರ ಆದರ್ಶಗಳ ಕುರಿತು ವಿವರಗಳನ್ನು ನೀಡಿ. ಶಾಲಾ ಮಕ್ಕಳು ಆ ಸ್ಥಳಕ್ಕೆ ಭೇಟಿ ನೀಡಿ ಗಾಂಧೀಜಿಯವರ ತತ್ವಗಳನ್ನು ಅರಿತು ಅವುಗಳಲ್ಲಿ ಕೆಲವನ್ನಾದರು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿ ಎಂದು ಅವರು ಹೇಳಿದರು.
ಕಂದಾಯ ಗ್ರಾಮಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅವರ ಹತ್ತಿರದ ಗ್ರಾಮಗಳಿಗೆ ಭೇಟಿ ನೀಡಿ ಆ ಗ್ರಾಮದ ಇತಿಹಾಸ, ಸಂಸ್ಕೃತಿ, ಪ್ರಮುಖ ಆಚರಣೆಗಳು, ಭಾಷಾ ವೈವಿಧ್ಯತೆ, ಮುಂತಾದವುಗಳ ಕುರಿತು ವಿವರಗಳನ್ನು ಸಂಗ್ರಹಿಸಲು ತಿಳಿಸಿ. ಆ ವಿವರಗಳನ್ನು ಕ್ರೋಢೀಕೃತಗೊಳಿಸಿ ವಿಕಿಪಿಡೀಯಾಗೆ ಸೇರ್ಪಡೆಗೊಳಿಸಿ. ಇತರರು ಜಿಲ್ಲೆಯ ಎಲ್ಲಾ ಗ್ರಾಮಗಳ ಕುರಿತು ಸಮಗ್ರವಾಗಿ ಅರಿಯಲು ವ್ಯವಸ್ಥೆ ಮಾಡಿ. ಇದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರವನ್ನೂ ಪಡೆಯಬಹುದು. ಕಾಲೇಜು ಪ್ರಿನ್ಸಿಪಾಲರೊಂದಿಗೆ ಈ ಕುರಿತು ಸಭೆ ನಡೆಸಿ, ವಾರದಲ್ಲಿ ಎರಡು ದಿನ ವಿದ್ಯಾರ್ಥಿಗಳು ಗ್ರಾಮಗಳಿಗೆ ಭೇಟಿ ನೀಡುವುದರ ಮೂಲಕ ತಮ್ಮ ಸುತ್ತಲಿನ ಪ್ರದೇಶದ ವಿವರಗಳನ್ನು ತಿಳಿಯಬಹುದು ಎಂದು ಅವರು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 23 ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕೆ ಸಕರ್ಾರದ ಅನುಮೋದನೆ ದೊರೆತು ಅನುದಾನವೂ ಬಿಡುಗಡೆಯಾಗಿದೆ. ಅವುಗಳಲ್ಲಿ 16 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳನ್ನು ಅನುಷ್ಠಾನ ಏಜೆನ್ಸಿಗಳು ಶೀಘ್ರ ಪೂರ್ಣಗೊಳಿಸಬೇಕು. ಜಿಲ್ಲಾ ರಂಗಮಂದಿರ ನಿರ್ಮಾಣ ಕಾಮಗಾರಿಯು ಮಂದಗತಿಯಲ್ಲಿ ಸಾಗಿದ್ದು ಈ ಕುರಿತು ಜಿಲ್ಲಾಧಿಕಾರಿಗಳು ವೆಚ್ಚ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಶಾಸಕಾರಾದ ಕೆ. ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು ಬಲವಂತರಾಯ ಪಾಟೀಲ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಕೆ.ಎನ್ ರಮೇಶ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.