ವಾಷಿಂಗ್ಟನ್, ಜುಲೈ 13: ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲೋನ್ ಮಸ್ಕ್ ವಿಶ್ವದ 7ನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯವು ಶುಕ್ರವಾರ 6.1 ಬಿಲಿಯನ್ ಡಾಲರ್ ಏರಿಕೆಯಾದ ನಂತರ, ಟೆಸ್ಲಾ ಸಂಸ್ಥಾಪಕರು ವಿಶ್ವದ 7 ನೇ ಸಿರಿವಂತ ವ್ಯಕ್ತಿ ಎನಿಸಿಕೊಂಡಿದ್ದಾರೆ .
ಇತ್ತಿಚಿನ ಮಾಹಿತಿಯ ಪ್ರಕಾರ, ಮಸ್ಕ್ ಒಂದು ಕಾಲದ ನಂಬರ್ ಒನ್ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ರನ್ನೇ ಮೀರಿಸಿದ ಉದ್ಯಮಿಯಾಗಿದ್ದಾರೆ ಎಂದೂ ಹೇಳಲಾಗಿದೆ.