ವಿದ್ಯುತ್ ಆಘಾತ ರೈತ ಸಾವು

ನಾಸಿಕ್, ಮೇ ೨೬,  ತನ್ನ ಹೊಲಗಳಿಗೆ ನೀರು ಹರಿಸಲು ವಿದ್ಯುತ್ ಪಂಪ್ ಗೆ ಚಾಲನೆ ನೀಡುತ್ತಿದ್ದಾಗ   ೩೨ ವರ್ಷದ ರೈತನೊಬ್ಬ  ವಿದ್ಯುತ್  ಸ್ಪರ್ಶಕ್ಕೆ ಒಳಗಾಗಿ  ಮೃತ ಪಟ್ಟಿರುವ ದುರ್ಘಟನೆ  ದೇವಲಾ ತಾಲೊಕಿನ ವಸೊಲಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು  ಮಂಗಳವಾರ ತಿಳಿಸಿದ್ದಾರೆಮೃತ ರೈತನನ್ನು  ದೇವಲಾ ತಾಲೊಕಿನ ವಸೊಲಾ ಗ್ರಾಮದ ವಾಸಿ ಮಹೇಂದ್ರ ಅಲಿಯಾಸ್ ಬಾರ್ಕು ಶಂಕರ್ ವಾಘಾ ಎಂದು ಗುರುತಿಸಲಾಗಿದೆ.ಸೋಮವಾರ ಬೆಳಗ್ಗೆ  ರೈತ ಮಹೇಂದ್ರ  ಎಂದಿನಂತೆ  ತನ್ನ  ಕೃಷಿ ಬೆಳೆಗಳಿಗೆ  ವಿದ್ಯುತ್  ಪಂಪ್ ನಿಂದ   ನೀರು ಹರಿಸಲು ಜಮೀನಿಗೆ ತೆರಳಿದ್ದ,  ವಿದ್ಯುತ್ ಪಂಪ್ ನ ಗುಂಡಿಯನ್ನು ಒತ್ತುತ್ತಿದ್ದಂತೆಯೇ  ವಿದ್ಯುತ್  ಸ್ಪರ್ಶಕ್ಕೆ   ಒಳಗಾಗಿ ಸ್ಥಳದಲ್ಲೇ ಕುಸಿದುಬಿದ್ದು ತೀವ್ರ ಅಸ್ವಸ್ಥಗೊಂಡಿದ್ದು,   ಈ ಘಟನೆಯನ್ನು ಗಮನಿಸಿದ ಸಮೀಪದಲ್ಲಿಯೇ ಇದ್ದ ರೈತರೊಬ್ಬರು  ತಕ್ಷಣವೇ ದೇವಲಾ ಗ್ರಾಮೀಣ ಆಸ್ಪತ್ರೆಗೆ ಸಾಗಿಸಿದರು. ಆದರೆ,   ಆಸ್ಪತ್ರೆಗೆ  ತರುವ  ಮುನ್ನವೇ  ರೈತ ಮೃತಪಟ್ಟಿದ್ದಾನೆ  ಎಂದು  ವೈದ್ಯಾಧಿಕಾರಿ ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಮೃತ ರೈತನ  ದೇಹವನ್ನು  ಆತನ  ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ ಈನಡುವೆ ದೇವಲಾ ಪೊಲೀಸರು ಅಪಘಾತದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು  ತನಿಖೆ ಮುಂದುವರಿಸಿದ್ದಾರೆ.