ಬೆಳಗಾವಿ 11 ಮಾರ್ಚ: ಬಸವ ಜಯಂತಿಯ ಪೂರ್ವಭಾವಿ ಸಭೆಯು ಶಿವಬಸವ ನಗರದ ವೀರಶೈವ ಲಿಂಗಾಯತ ಮಹಾಸಭೆಯ ಲಿಂಗಾಯತ ಭವನದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ರತ್ನಪ್ರಭಾ ಬೆಲ್ಲದ ವಹಿಸಿದ್ದರು. ವೇದಿಕೆಯ ಮೇಲೆ ಹಿರಿಯ ನ್ಯಾಯವಾದಿ ಎಂ.ಬಿ.ಝಿರಲಿ, ಗುರುದೇವ ಪಾಟೀಲ, ವೀಣಾ ನಾಗಮೋತಿ ಉಪಸ್ಥಿತರಿದ್ದರು. ಬಸವ ಜಯಂತಿ ಉತ್ಸವದ ಅಧ್ಯಕ್ಷರಾಗಿ ಬಾಲಚಂದ್ರ ಬಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಂಕರ ಬಿ.ಪಟ್ಟೇದ, ಅರುಣಾ ಖಡಬಡೆ, ಸರೋಜನಿ ನಿಶಾನದಾರ, ಪ್ರಧಾನ ಕಾರ್ಯದರ್ಶಿಯಾಗಿ ಸೋಮಲಿಂಗ ಮಾವಿನಕಟ್ಟಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ಜೀರಲಿಯವರು ಬಸವಣ್ಣನವರ ಸಂದೇಶ ಕುರಿತು ಒಂದುದಿನ ವಿಚಾರ ಸಂಕಿರಣವನ್ನು ಆಯೋಜಿಸಬೇಕು. ಅವರ ಕೊಡುಗೆ ಜಗತ್ತಿನ ಅದ್ವಿತೀಯವಾದುದು, ಇಂದಿನ ಯುವಜನಾಂಗಕ್ಕೆ ಅವರ ಸಂದೇಶ ಮುಟ್ಟಿಸುವ ಗುರುತರ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಯೋಜಿಸುವ ನಿಟ್ಟಿನಲ್ಲಿ ಎಲ್ಲ ಸಹಾಯ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು. ರಮೇಶ ಕಳಸಣ್ಣನವರ, ಡಾ.ಎಫ್.ವ್ಹಿ.ಮಾನ್ವಿ, ವ್ಹಿ.ಕೆ.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಡಾ.ಮಹೇಶ ಗುರುನಗೌಡರ ಸ್ವಾಗತಿಸಿದರು.