ಬೆಂಗಳೂರು, ಫೆ.11, ಒಂಭತ್ತು ಜಿಲ್ಲೆಗಳ ವಿವಿಧ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ನಗರ ಸಂಸ್ಥೆಗಳಿಗೆ ಇದೇ ತಿಂಗಳ 9ರಂದು ನಡೆದ ಸಾರ್ವತ್ರಿಕ ಚುನಾವಣೆ ಮತ್ತು ಉಪಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ.ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರ ಸಭೆ ಬಿಜೆಪಿ ಪಾಲಾಗಿದೆ. ಇಲ್ಲಿ 31 ಸ್ಥಾನಗಳ ಪೈಕಿ ಬಿಜೆಪಿ 22, ಎಸ್‌ಡಿಪಿಐ 1, 1ಪಕ್ಷೇತರರು ಹಾಗೂ 7 ವಾರ್ಡ್‌ಗಳಲ್ಲಿ ಶರತ್ ಬೆಂಬಲಿಗರ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್ ಒಂದು ಸ್ಥಾನವನ್ನೂ ಪಡೆದಿಲ್ಲ.
31 ಸದಸ್ಯ ಬಲದ ಹುಣಸೂರು ನಗರ ಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 14, ಬಿಜೆಪಿ 3, ಜೆಡಿಎಸ್ 7, ಎಸ್‌ಡಿಪಿಐ 2 ಹಾಗೂ 5 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.ವಿಜಯಪುರ ಜಿಲ್ಲೆಯ ಸಿಂಧಗಿ ಪುರಸಭೆಗೆ ನಡೆದ ಚುನಾವಣೆಯಲ್ಲಿ 23 ವಾರ್ಡ್‌ಗಳ ಪೈಕಿ 11 ಕಾಂಗ್ರೆಸ್, 6 ಜೆಡಿಎಸ್, 3 ಬಿಜೆಪಿ, ಮೂವರು ಪಕ್ಷೇತರರು ಜಯಗಳಿಸಿದ್ದಾರೆ.ಸಿರುಗುಪ್ಪ ನಗರಸಭೆಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 31 ಸ್ಥಾನಗಳ ಪೈಕಿ 19 ಕಾಂಗ್ರೆಸ್, 11 ಬಿಜೆಪಿ, ಓರ್ವ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಕ್ಷೇತ್ರ ಬಿಜೆಪಿ ಶಾಸಕ ಸೋಮಲಿಂಗಪ್ಪ ಅವರಿಗೆ ಫಲಿತಾಂಶದಿಂದ ಮುಖಭಂಗವಾಗಿದೆ. ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣ ಪಂಚಾಯತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. 20 ವಾರ್ಡ್‌ಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆಲುವು ಪಡೆದಿದೆ.