ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ
ರಾಣಿಬೆನ್ನೂರ 31: ತಾಲೂಕಿನ ಕಜ್ಜರಿ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ರವಿವಾರ ನಡೆದ ಚುನಾವಣೆಯಲ್ಲಿ 12 ಅಭ್ಯಥಿಗಳು ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಎಸ್.ವಿ. ಮಾಡಳ್ಳಿ ಘೋಷಿಸಿದರು.
ಆಡಳಿತ ಮಂಡಳಿಯ ನಿರ್ದೇಶಕರಾದ ಮಂಜಪ್ಪ ಮಾರ್ತಾಂಡಪ್ಪ ಕುರುಬಶಾನಭೋಗರ, ಪರಮೇಶ ಪಾಂಡಪ್ಪ ನೀಲಗುಂದ, ಸುರೇಶ ಹನುಮಂತಪ್ಪ ಗಂಗಮ್ಮನವರ, ಗುರುಮೂರ್ತೆಯ್ಯ ಚನ್ನವೀರಯ್ಯ ಹಿರೇಮಠ, ಅನ್ವರಸಾಬ್ ಗಫಾರಸಾಬ ಶೇಖಸನದಿ, ವಸಂತಾ ಗುಡ್ಡಪ್ಪ ಕರೇಮಲ್ಲಣ್ಣನವರ, ರತ್ನವ್ವ ಹನುಮಂತಪ್ಪ ನಿಂಬಣ್ಣನವರ, ಕರೆಯಪ್ಪ ನಾಗಪ್ಪ ಶಿಡಗನಾಳ, ಮಾಲತೇಶ ರುದ್ರ್ಪ ನೆಲೋಗಲ್, ಗುಡ್ಡಪ್ಪ ರಾಮಪ್ಪ ಕಾಗಿನಿಂಗಣ್ಣನವರ, ಧರ್ಮಪ್ಪ ಪೀರ್ಪ ಲಮಾಣಿ, ಬಸವರಾಜ ರಾಯಪ್ಪ ಕೋಟಿಹಾಳ ಆಯ್ಕೆಯಾದವರು.
ಆಯ್ಕೆಯಾದನಿರ್ದೇಶಕರನ್ನು ಗ್ರಾಮಸ್ಥರು ಅಭಿನಂದಿಸಿದರು.