ಪುರಸಭೆಗೆ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಆಯ್ಕೆ
ಹೂವಿನಹಡಗಲಿ 20: ತೀವ್ರ ಕೂತಹಲ ಕೆರಳಿಸಿದ ಇಲ್ಲಿನ ಪುರಸಭೆ ಅದ್ಯಕ್ಷರಾಗಿ ಗಂಟಿ ಜಮಾಲ್ ಬಿ ಮತ್ತು ಉಪಾದ್ಯಕ್ಷರಾಗಿ ಸೊಪ್ಪಿನ ಮಂಜುನಾಥ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ಇಲ್ಲಿನ ಪುರಸಭೆ ಕಚೇರಿಯಲ್ಲಿ ಅದ್ಯಕ್ಷ ಮತ್ತು ಉಪಾದ್ಯಕ್ಷರ ಚುನಾವಣೆಯಲ್ಲಿ ಒಂದೊಂದು ನಾಮಪತ್ರ ಸಲ್ಲಿಕೆಯಿಂದ ಅದ್ಯಕ್ಷರಾಗಿ ಗಂಟಿ ಜಮಾಲ್ ಬಿ .ಉಪಾದ್ಯಕ್ಷ ಸೊಪ್ಪಿನ ಮಂಜುನಾಥ ಅವರ ಅವಿರೋಧ ಆಯ್ಕೆಯನ್ನು ತಹಶೀಲ್ದಾರ ಸಂತೋಷ ಕುಮಾರ ಘೋಷಣೆ ಮಾಡಿದರು. ಅದ್ಯಕ್ಷ ಮತ್ತು ಉಪಾದ್ಯಕ್ಷರು ಮತ್ತು ಉಳಿದ ಕೆಲ ಸದಸ್ಯರುಕಾಂಗ್ರೆಸ್ ಪಕ್ಷವನ್ನು ತೊರೆದು ಶಾಸಕ ಕೃಷ್ಣನಾಯ್ಕ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರೆ್ಡಯಾದರು. ಪುರಸಭೆಯ 23 ಸ್ಥಾನಗಳಲ್ಲಿ 16 ಸದಸ್ಯರಿದ್ದರು. ಶಾಸಕ ಕೃಷ್ಣನಾಯ್ಕ ಸೇರಿದಂತೆ 17 ಜನರು ಬಿಜೆಪಿ ಬೆಂಬಲಿಸಿದ್ದರು. ಶಾಸಕ ಕೃಷನಾಯ್ಕ ಮಾತನಾಡಿ ಪುರಸಭೆ ಅಭಿವ್ರದ್ದಿ ಯಿಂದ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಸೇರೆ್ಡಯಾಗಿದ್ದಾರೆ ಎಂದರು.ಬಿಜೆಪಿ ಅದ್ಯಕ್ಷ ಮಲ್ಲಿಕಾರ್ಜುನ. ವಕೀಲ ಎಂ.ಪರಮೇಶ್ವರ್ಪ.ವಾರದಗೌಸ ಮೊಹಿದ್ದೀನ್ ನೂತನ ಅದಕ್ಷ.ಉಪಾದ್ಯಕ್ಷರನ್ನು ಅಭಿನಂದಿಸಿದರು.