ನವದೆಹಲಿ, ಮೇ 24, ಕೊರೋನಾ ವೈರಸ್ ಭೀತಿ ಮತ್ತು ಲಾಕ್ ಡೌನ್ ನಿಯಮಗಳ ನಡುವೆಯೂ ಭಾರತ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಿದೆ ಮತ್ತು ಜನರು ಕೋವಿಡ್ ಮುಕ್ತ ದೇಶಕ್ಕಾಗಿ ಪ್ರಾರ್ಥಿಸಲಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.ಇದೇ ಮೊದಲ ಬಾರಿಗೆ ಜನರು ಮನೆಯಲ್ಲಿ ಈದ್ ಉಲ್ ಫಿತರ್ ಅನ್ನು ಆಚರಿಸುತ್ತಿದ್ದಾರೆ. ಆದರೆ, ಈ ಸಾಂಕ್ರಾಮಿಕ ಜನರ ಹಬ್ಬದ ಉತ್ಸಾಹವನ್ನು ಕಡಿಮೆಗೊಳಿಸಿಲ್ಲ ಎಂದಿದ್ದಾರೆ.ಭಾರತದಲ್ಲಿ ಹಲವೆಡೆ ಇಂದು ರಮ್ಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರಗಳು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿವೆ.