ಗುರಿ ಸಾಧಿಸಲು ಶ್ರಮ ಅಗತ್ಯ: ಮಹೇಂದರ್

ಲೋಕದರ್ಶನ ವರದಿ

ಗಜೇಂದ್ರಗಡ 02: ಜೀವನಕ್ಕೆ ಗುರಿಮುಖ್ಯ "ಗುರಿ ಇಲ್ಲದ ಜೀವನ ಚುಕ್ಕಾಣೆ ಇಲ್ಲದ ಹಡಗಿನಂತೆ" ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದಿ ಅದರ ಸಾಧನೆಗಾಗಿ ಸತತವಾಗಿ ಪರಿಶ್ರಮಪಟ್ಟು ಗುರಿ ಮುಟ್ಟಿದರೆ ಜೀವನ ಸಾರ್ಥಕ ಎಂದು ಹೇಳಿದರು.

ಪ್ರತಿಯೊಬ್ಬ ವಿದ್ಯಾಥರ್ಿ ತರಗತಿಯ ಪಾಠಗಳಿಗೆ ಒತ್ತು ನೀಡುವಂತೆ ಕ್ರೀಡೆಗಳಲ್ಲೂ ಆಸಕ್ತಿಯಿಂದ ಭಾಗವಹಿಸಿ ಉತ್ತಮ ಕ್ರೀಡಾ ಪಟುಗಳಾಗಬೇಕು ಮತ್ತು ಎನ್ ಎಸ್ ಎಸ್ ನಲ್ಲಿ ಪಾಲ್ಗೊಂಡು ಸಮರ್ಥ ಸಾಮಾಜಿಕ ಸೇವೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿಧ್ಯಾರ್ಥಿ ಗಳಿಗೆ ಸ್ವಾಗತ ಸಮಾರಂಭ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸೇವಾದಳ. ಎಸ್.ಎಸ್ ಘಟಕ ಸ್ವಾಗತ ಸಮಾರಂಭವನ್ನ ಉದ್ಘಾಟಿಸಿ ಮಾತನಾಡಿದರು.

ಆಂಗ್ಲ ಮಾಧ್ಯಮ ಉಪನ್ಯಾಸಕರಾದ ರಮೇಶ ಮಾರಾಠಿ ಮಾತನಾಡುತ್ತಾ ವಿದ್ಯಾಥರ್ಿ ಜೀವನ ಬಂಗಾರದ ಜೀವನವಲ್ಲ ಪರಿಶ್ರಮ ಪಟ್ಟು ಸಾಧನೆಗೈದಾಗ ಮಾತ್ರ ಜೀವನ ರೂಪಿತವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾಲೇಜಿನ ಪ್ರಾಚಾರ್ಯರಾದ ಬಿ.ಬಿ. ಗುರಿಕಾರ ಅವರು ವಹಿಸಿ ವಿದ್ಯಾಥರ್ಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆ ಮಾಡುವ ನಿಟ್ಟಿನಲ್ಲಿ ಅಭ್ಯಾಸವನ್ನು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸರಸ್ವತಿ ದೊಡ್ಡಮನಿ, ಹೇಮಲತಾ ಹುನಗುಂದ, ರಮೇಶ ರಾಯ್ಕರ್, ಎಸ್ ವ್ಹಿ ಮುಲ್ಕಿಗೌಡ್ರು, ಮಂಜುನಾಥ ಯರಗೇರಿ, ಜಗದೀಶ್ ಹುದ್ದಾರ, ಕಳಕೇಶ ರಾಠೋಡ, ಸಂತೋಷ ತಿರಕೋಜಿ, ಮದನ್ ಜಂತ್ಲಿ, ರವಿ ಹಾದಿಮನಿ, ವಿರಾಜ್ ಮಾಗಿ, ಶ್ಯಾಮೀದ್ ಬಳ್ಳಾರಿ, ಕಾವ್ಯಾ ಪರಿಮಾಳ, ರೂಪಾ ಹಡಪದ, ಸಲ್ಮಾ ಸೂರಪುರ್, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು .