ಲೋಕದರ್ಶನ ವರದಿ
ಬೆಳಗಾವಿ 27: "ಹಲವಾರು ವರ್ಷಗಳಿಂದ ಕೆಲವೇ ಜನರ ಸ್ವತ್ತಾಗಿದ್ದ ಶಿಕ್ಷಣವನ್ನು ಸ್ವಾಮಿ ವಿವೇಕಾನಂದರು, ರಾಜಾರಾಮ ಮೋಹನರಾಯರು, ಜ್ಯೋತಿಬಾ-ಸಾವಿತ್ರಿಬಾಯಿ ಫುಲೆಯವರಂಥಹ ಮಹನೀಯರ ಇಚ್ಛಾಶಕ್ತಿಯಿಂದ ಎಲ್ಲ ಸಮುದಾಯದೆಡೆಗೆ ಬರುವಂತಾಯಿತು. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಂತೂ ಶಿಕ್ಷಣ ಸಮಾಜದ ಬಹು ಸಮುದಾಯವನ್ನು ತಲುಪುವಂತಾಯಿತು. ಸ್ವಾತಂತ್ರ್ಯ್ರಾ ನಂತರ ನಮ್ಮ ದೇಶದ ಸಾಕ್ಷರತಾ ಪ್ರಮಾಣ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಾ ಬಂದಿದೆ. ಆದರೆ ಜಾಗತೀಕರಣದ ಪ್ರಭಾವದಿಂದ ಇಂದು ಶಿಕ್ಷಣವೂ ವ್ಯಾಪಾರೀಕರಣಗೊಳ್ಳುತ್ತಿರುವುದು ಕಳವಳಕಾರಿ ಸಂಗತಿ" ಎಂದು ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಂಕರ ಬಾಗೇವಾಡಿ ಹೇಳಿದರು.
ನಗರದ ಹೊರವಲಯದ ಕಣಬರಗಿಯ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯಲ್ಲಿ ಜರುಗಿದ ಸಂಸ್ಥೆಯ ಹದಿನೇಳನೇ ಸಂಸ್ಥಾಪಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಶಿಕ್ಷಣ ಪ್ರಸಾರ ಕೇವಲ ಸರಕಾರದ ಜವಾಬ್ದಾರಿಯಲ್ಲ ; ಸಾರ್ವಜನಿಕರ ಸಹಭಾಗಿತ್ವವೂ ಅವಶ್ಯಕವಾಗಿದೆ. ಶಿಕ್ಷಣ ಖಾಸಗೀಕರಣವಾದರೂ ಅದು ವ್ಯಾಪಾರೀಕರಣವಾಗಿ ಮಾರುಕಟ್ಟೆಯ ಸರಕಾಗಬಾರದು. ನಮ್ಮ ದೇಶದಲ್ಲಿ ಅನೇಕ ಮಠ-ಮಾನ್ಯಗಳು, ಸರಕಾರೇತರ ಸಂಸ್ಥೆಗಳು ಹಲವಾರು ವರ್ಷಗಳಿಂದ ಆ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿವೆ. ಅಂಥ ಸಂಸ್ಥೆಗಳ ಹಾಗೂ ಅನೇಕ ಶಿಕ್ಷಣ ಪ್ರೇಮಿಗಳ ಪೇರಣೆಯಿಂದ ಬೆಳಗಾವಿಯ ಸುತ್ತಮುತ್ತಲಿನ ಅದರಲ್ಲೂ ಗಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಧಾರೆಯೆರೆಯುವ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಪೂರ್ವ ಪ್ರಾಥಮಿಕ ಹಂತದಿಂದ ಎಸ್.ಎಸ್.ಎಲ್.ಸಿ.ವರೆಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಪ್ರಸ್ತುತ ವರ್ಷ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿರುವ ಸಂಸ್ಥೆಯು ಮುಂಬರುವ ದಿನಗಳಲ್ಲಿ ಕಾಲೇಜು ಶಿಕ್ಷಣ ಪ್ರಾರಂಭಿಸುವ ಉದ್ದೇಶ ಹೊಂದಿದೆ. ಸಮಾಜದ ಎಲ್ಲ ಜಾತಿ- ಜನಾಂಗದ ಬಡ ಪ್ರತಿಭಾವಂತ ಮಕ್ಕಳಿಗೆ, ವಿಶೇಷವಾಗಿ ವಿಧವಾ ಮಕ್ಕಳಿಗೆ 'ಶೈಕ್ಷಣಿಕ ದತ್ತು ಯೋಜನೆ'ಯ ಮೂಲಕ ಕಳೆದ ಹದಿನಾರು ವರ್ಷಗಳಿಂದ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಇದಕ್ಕೆ ಸಂಸ್ಥೆಗೆ ಬೆನ್ನೆಲುಬಾಗಿ ನಿಂತ ಅದೆಷ್ಟೋ ಮಹನೀಯರು ಅಭಿನಂದನಾರ್ಹರು" ಎಂದು ಹೇಳಿದರು.
ಸಂಸ್ಥೆಯ ಕುರಿತು ವಿದ್ಯಾಥರ್ಿಗಳು ಅಭಿಪ್ರಾಯ ಹಂಚಿಕೊಂಡರು. ಶಿಕ್ಷಕರಾದ ಸುನೀತಾ ಸೋನಗೋಜೆ ತಮ್ಮ ಅನುಭವ ಹಂಚಿಕೊಳ್ಳುತ್ತಾ, 'ಶಿಕ್ಷಣದ ಗಂಧ-ಗಾಳಿ ಗೊತ್ತಿಲ್ಲದ ವ್ಯಾಪಾರಿ ಮನೋಭಾವ ಹೊಂದಿರುವ ಜನರೇ ಹೆಚ್ಚಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿರುವ ಇಂದಿನ ಸಂದರ್ಭದಲ್ಲಿ ಆಥರ್ಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೂ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನಮ್ಮ ಸಂಸ್ಥೆ ನೀಡುತ್ತಿದೆ. ಇಂಥ ಸಂಸ್ಥೆಯಲ್ಲಿ ನಾವು ಶಿಕ್ಷಕರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದೇ ನಮ್ಮ ಭಾಗ್ಯ. ನಮ್ಮ ಸಂಸ್ಥೆಯ ಅಂಥ:ಶಕ್ತಿಯಾಗಿರುವ ಸಂಸ್ಥಾಪಕರಾದ ಶಂಕರ ಬಾಗೇವಾಡಿಯವರು ನಮ್ಮೆಲ್ಲರನ್ನು ಸಮತಾ ಪರಿವಾರದವರಂತೆ ಪರಿಗಣಿಸಿರುವುದೇ ಇದಕ್ಕೆ ಸಾಕ್ಷಿ. ಇಂಥ ಸಂಸ್ಥೆಯ ಭವಿಷ್ಯ ಬಂಗಾರವಾಗ ಲೆಂದು ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಸಂಸ್ಕೃತಿ ಚಿಂತಕರಾದ ಡಾ. ಚೆನ್ನಣ್ಣ ವಾಲಿಕಾರ ಅವರಿಗೆ ಶ್ರದ್ಧಾಂಜಲಿ ಅಪರ್ಿಸಿ ಒಂದಿ ನಿಮಿಷದ ಮೌನ ಆವರಿಸಲಾಯಿತು. ಕಾರ್ಯದಶರ್ಿ ರೇಣುಕಾ ಮಜಲಟ್ಟಿ, ಮುಖ್ಯೋಪಾಧ್ಯಾರಾದ ತೇಜಸ್ವಿನಿ ಬಾಗೇವಾಡಿ, ಸುನಂದಾ ಪಟ್ಟಣಶೆಟ್ಟಿ, ಸುನಿತಾ ಸೋನಗೋಜೆ, ಪ್ರಭುಲಿಂಗ ಹೊಸೂರ, ಮಲಿಕಜಾನ ಗದಗಿನ, ವಿಶ್ವನಾಥ ಕವಲೆ, ಬಿ. ಕೆ. ಕಾಂಬಳೆ, ಅಪಣರ್ಾ ಗೌಡರ, ಶ್ರೀದೇವಿ ಕುಂಬಾರ, ಶಾಂತಾ ಮೋದಿ, ಸವಿತಾ ಪೂಜೇರಿ ಶಾಲೆಯ ಮಕ್ಕಳು, ಪಾಲಕರು, ಸಂಸ್ಥೆಯ ಹಿತೈಸಿಗಳು ಪಾಲ್ಗೊಂಡು ಶುಭ ಹಾರೈಸಿದರು.
ಹತ್ತನೇ ವರ್ಗದ ವಿದ್ಯಾಥರ್ಿಗಳ ಸ್ವಾಗತ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜಯಶ್ರೀ ನಾಯಕ ಸ್ವಾಗತಿಸಿದರು. ಶ್ರೀದೇವಿ ಕುಂಬಾರ ನಿರೂಪಿಸಿದರು. ಭುವನೇಶ್ವರಿ ನಂದಿಹಳ್ಳಿ ವಂದಿಸಿದರು.