ಎಡಾಮೊನ್ -ಕೊಚ್ಚಿ ವಿದ್ಯುತ್ ಪ್ರಸರಣ ಮಾರ್ಗ: ಸಿಎಂ ರಿಂದ ಉದ್ಘಾಟನೆ

ತಿರುವನಂತಪುರಂ, ನವೆಂಬರ್ 19 :       ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಎಡಾಮೊನ್-ಕೊಚ್ಚಿ ವಿದ್ಯುತ್ ಮಾರ್ಗ  ಉದ್ಘಾಟಿಸಿದ್ದು,ಇದರ ಪರಿಣಾಮ  ರಾಜ್ಯವು ತನ್ನ 400 ಕೆವಿ ಪ್ರಸರಣ ಜಾಲದ ಮೂಲಕ ದೇಶದ ಯಾವುದೇ ಭಾಗದಿಂದ ವಿದ್ಯುತ್ ಪಡೆಯಲು ಸಾಧ್ಯವಾಗಲಿದೆ. ನಂತರ  ಮಾತನಾಡಿದ ಮುಖ್ಯಮಂತ್ರಿ, ಪವರ್ಗ್ರಿಡ್ ಕಾರ್ಪೋರೇಶನ್ನಿಂದ ಪೂರ್ಣಗೊಂಡ ಈ ಯೋಜನೆ ಪ್ರಸರಣ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ  ಎಂದು ಹೇಳಿದರು.  400 ಕೆವಿ ವಿದ್ಯುತ್ ಪ್ರಸರಣ ಜಾಲವು ರಾಜ್ಯದ ವಿದ್ಯುತ್ ಆಮದು ಸಾಮಥ್ರ್ಯವನ್ನು 800 ಮೆಗಾವ್ಯಾಟ್ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. 148 ಕಿ.ಮೀ ಎಡಾಮೋನ್-ಕೊಚ್ಚಿ ಮಾರ್ಗವು 447 ಗೋಪುರಗಳನ್ನು ಹೊಂದಿದ್ದು ಕೊಲ್ಲಂ (22 ಕಿ.ಮೀ), ಪಥನಮತ್ತಟ್ಟ (47 ಕಿ.ಮೀ), ಕೊಟ್ಟಾಯಂ (51 ಕಿ.ಮೀ), ಮತ್ತು ಎರ್ನಾಕುಲಂ (28 ಕಿ.ಮೀ) ಮೂಲಕ ಹಾದುಹೋಗುತ್ತದೆ.