ಲೋಕದರ್ಶನ ವರದಿ
ಶಿಗ್ಗಾವಿ 03ಃ ಉತ್ತರ ಕನರ್ಾಟಕದಲ್ಲಿ ಹಲಾವರು ಮಹಾನ್ ನಾಯಕರು ವಿದ್ಯಾವರ್ಧಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರ ಫಲವಾಗಿ ನಾವು ಇಂದು ಶಿಕ್ಷಣವಂತರಾಗಲು ಸಾಧ್ಯವಾಗಿದೆ, ಸಹಕಾರ ಸಕರ್ಾರಗಳನ್ನು ಆಳುವಂತ ವ್ಯವಸ್ಥೆ ಬರಬೇಕಿದೆ, ಸಹಕಾರಿ ಕ್ಷೇತ್ರದಿಂದ ಮಾತ್ರ ಆರ್ಥಿಕ ಕ್ರಾಂತಿಯಾಗಲು ಸಾಧ್ಯ ಎಂದು ಗೃಹ ಹಾಗೂ ಸಹಕಾರಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗ ಕನರ್ಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸೌಹಾರ್ಧ ಪತ್ತಿನ ಸಹಕಾರಿ ನಿಯಮಿತ ಹರಿಹರ ಇದರ ಅಡಿಯಲ್ಲಿ ನೂತನ ಶಿಗ್ಗಾವಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವ ಸಮಾಜ ಶಿಕ್ಷಣ ಮತ್ತು ಆಥರ್ಿಕತೆಯ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆಯೋ ಜೊತೆಗೆ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತದೆಯೋ ಆ ಸಮಾಜ ತಲೆ ಎತ್ತಿ ನಿಲ್ಲುತ್ತದೆ ಖಾಸಗೀಕರಣ, ಉಧಾರಿಕರಣ, ಜಾಗತೀಕರಣದ ಮುಕ್ತ ಮಾರುಕಟ್ಟೆಯಲ್ಲಿ ಬಲ ಇದ್ದವರು ಗಟ್ಟಿಯಾಗಿ ನಿಲ್ಲುತ್ತಾರೆ, ವೈಯಕ್ತಿಕತೆಗಿಂತ ಸಾಮಾಜಿಕವಾಗಿದ್ದಾಗ ಶಕ್ತಿ ಇಮ್ಮಡಿಯಾಗುತ್ತದೆ. ಸಹಕಾರಿ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳ ಅವಶ್ಯಕತೆಯಿದೆ, ಸಹಕಾರಿ ಕ್ಷೇತ್ರದಲ್ಲಿ ಸಂಘಟನೆಯೇ ಒಂದು ದೊಡ್ಡ ಶಕ್ತಿ ಅವರು ಸಹಕಾರಿ ಸಂಘಗಳು ಲಾಭವನ್ನು ಕಳೆದುಕೊಳ್ಳದೆ ಸಮಾಜದ ಸೇವೆಗೆ ಶ್ರಮಿಸಬೇಕು ನಾನು ಸಹಕಾರಿ ಸಚಿವನಾದ ಮೇಲೆ ನನ್ನ ಕ್ಷೇತ್ರದಲ್ಲಿ ಮೊದಲ ಸಹಕಾರಿ ಸಂಘದ ಕಾರ್ಯಕ್ರಮವನ್ನು ಉದ್ಘಾಟಿಸಿರುವದು ಸಂತಸ ತಂದಿದೆೆ ಎಂದರು.
ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಸಹಕಾರದಿಂದ ಮಾತ್ರ ಸಂಘಟನೆಗಳು ಯಶಸ್ವಿಯಾಗುತ್ತವೆ ಎಲ್ಲರ ಸಂಬಂದಗಳು ಒಗ್ಗಟ್ಟಾಗಿದ್ದಾಗ ಮಾತ್ರ ಸಹಕಾರಿ ಸಂಸ್ಥೆಗಳ ಬೆಳವಣಿಗೆ ಅಲ್ಲದೇ ಸಹಭಾಗಿತ್ವ ಮತ್ತು ಸಹಕಾರಿ ಪ್ರಮುಖ ಪಾತ್ರ ವಹಿಸುತ್ತವೆ.
ರಾಜ್ಯ ಘಟಕದ ಗೌರವಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ ರಾಜ್ಯದಲ್ಲಿ ನಮ್ಮ ಸಮುದಾಯವನ್ನು ಒಡೆಯುವಂತ ಪ್ರಯತ್ನಗಳು ನಡೆಯುತ್ತಿವೆ ಒಡೆಯಲು ಪ್ರಯತ್ನಿಸುವವರು ಎಚ್ಚರಿಕೆಯಿಂದ ಇರಬೇಕು, ಪಟ್ಟಣದಲ್ಲಿ ಸಮುದಾಯ ಭವನ, ನೂತನ ಬ್ಯಾಂಕಿಗೆ ಕಟ್ಟಡ ನಿಮರ್ಾಣ ಮಾಡುಕೊಡಲು ಸಚಿವರಲ್ಲಿ ವಿನಂತಿಸಿದರು.
ಗಂಜಿಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಾಹಾಸ್ವಾಮಿಗಳು ಹಾಗೂ ವಿರಕ್ತ ಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶೀರ್ವಚಿಸಿದರು, ಹರಿಹರ ಲಿಂಗಾಯತ ಪಂಚಮಸಾಲಿ ನೌಕರರ ಸಹಕಾರಿ ಪತ್ತಿನ ಅಧ್ಯಕ್ಷ ಎ ವೀರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ವಿ ಪ ಸದಸ್ಯ ಸೋಮಣ್ಣ ಬೇವಿನಮರದ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಸಿ ಡಿ ಯತ್ನಳ್ಳಿ ಮಾತನಾಡಿದರು.
ಪಂಚಮಸಾಲಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗದೀಶಗೌಡ ಪಾಟೀಲ್, ಜಿಲ್ಲಾಧ್ಯಕ್ಷ ಎಸ್ ಬಿ ಕಿನ್ನಾಳ, ರಾಜ್ಯ ಘಟಕದ ಉಪಾಧ್ಯಕ್ಷ ಶರಣಬಸವನಗೌಡ ಪಾಟೀಲ್, ಮಹೇಶ ಚನ್ನಂಗಿ, ಮುಖಂಡರಾದ ಗಂಗಣ್ಣ ಸಾತಣ್ಣವರ, ನೌಕರರ ಸಂಘದ ತಾಲೂಕ ಅದ್ಯಕ್ಷ ಅರುಣ ಹುಡೇದಗೌಡ್ರ, ನಿಂಗಣ್ಣ ಅತ್ತಿಗೇರಿ, ಬಸನಗೌಡ ಮೆಲಿನಮಲಿ, ಪ್ರೇಮಾ ಪಾಟೀಲ್, ಡಾ. ಪಿ ಆರ್ ಪಾಟೀಲ್, ಶ್ರೀಕಾಂತ ಪೂಜಾರ, ವಿಶ್ವನಾಥ ಹರವಿ, ತಿಪ್ಪಣ್ಣ ಸಾತಣ್ಣವರ, ಸಿದ್ದಾರ್ಥಗೌಡ ಪಾಟೀಲ್, ದೇವಣ್ಣ ಚಾಕಲಬ್ಬಿ, ಶಿವಾನಂದ ಮಾಗೇರಿ, ವಿರೇಶ ಆಜೂರ, ಶಿವಾನಂದ ಬಾಗೂರ, ಶಶಿಧರ ಯಲಿಗಾರ, ವೀರಣ್ಣ ನವಲಗುಂದ, ತಾಲೂಕಾ ಅಧ್ಯಕ್ಷ ಜಿ ಎನ್ ಯಲಿಗಾರ, ಶಾಖಾ ವ್ಯವಸ್ಥಾಪಕ ಮಲ್ಲನಗೌಡ ಇಂಗಳಗಿ ಸೇರಿದಂತೆ ಪಂಚಮಸಾಲಿ ಸಹಕಾರಿ ಪತ್ತಿನ ದಾನಿಗಳು, ಸಲಹಾ ಮಂಡಳದ ಸದಸ್ಯರು, ತಾಲೂಕಾ ಘಟಕದ ಪದಾಧಿಕಾರಿಗಳು ಸಮಾಜ ಮುಖಂಡರು ಇದ್ದರು, ಶಿಕ್ಷಕ ಎಮ್ ಬಿ ಹಳೆಮನಿ ಕಾರ್ಯಕ್ರಮ ನಿರ್ವಹಿಸಿದರು.