ಆರ್ಥಿಕ ಚೇತರಿಕೆ ಹಿನ್ನೆಲೆ: ರೆಪೊ ದರ ಕಡಿತಗೊಳಿಸಿದ ಆರ್ ಬಿ ಐ

 ಮುಂಬೈ, ಅ 4:  ಭಾರತೀಯ ರಿಸರ್ವ್ ಬ್ಯಾಂಕ್,  ದೇಶದ ಆರ್ಥಿಕತೆಗೆ ಚೈತನ್ಯ ತುಂಬಲು ಮತ್ತೊಮ್ಮೆ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತಗೊಳಿಸಿದೆ  

ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ಆರು ಸದಸ್ಯರ  ಹಣಕಾಸು ನೀತಿ ಸಮಿತಿ  ಸಭೆ ನಡೆಸಿ  ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ದ್ವೈಮಾಸಿಕ  ವಿತ್ತೀಯ ನೀತಿಯನ್ನು ಪ್ರಕಟಗೊಳಿಸಿದೆ.  

ಪ್ರಮುಖ ಬಡ್ಡಿದರವನ್ನು 25 ಮೂಲಾಂಶಗಳಷ್ಟು ಕಡಿತಗೊಳಿಸಿದೆ. ಬಡ್ಡಿ ದರ   ಕಡಿತಗೊಳಿಸಲು ಸಮಿತಿ ಸರ್ವಾನುಮತದಿಂದ ನಿರ್ಧರಿಸಿದೆ ಎಂದು  ಸಭೆಯ ನಂತರ ಆರ್ ಬಿಐ ಗೌವರ್ನರ್ ಶಕ್ತಿಕಾಂತ್ ದಾಸ್  ಹೇಳಿದ್ದಾರೆ.  

ಆರ್ ಬಿಐ  ವರ್ಷದಲ್ಲಿ  ಸತತ   ನಾಲ್ಕನೇ   ಬಾರಿ ಬಡ್ಡಿ ದರ ಕಡಿತಗೊಳಿಸಿದೆ. ಇದರಿಂದಾಗಿ   ಬಡ್ಡಿ ದರ  ಶೇ. 5.15ಕ್ಕೆ ಇಳಿಕೆಯಾಗುವ ಮೂಲಕ  2010 ಮಟ್ಟಕ್ಕೆ ತಲುಪದೆ. 

 ರಿವರ್ವ್ ರೆಪೊ ದರವನ್ನು ಶೇಕಡಾ 4.9 ಕ್ಕೆ ನಿಗದಿಪಡಿಸಲಾಗಿದೆ. ಜಿಡಿಪಿ ಬೆಳವಣಿಗೆಯ ದರವನ್ನು 6.9 ರಿಂದ 6.1 ಕ್ಕೆ ತಗ್ಗಿಸಲಾಗಿದೆ.  2020-21ರ ವೇಳೆಗೆ ಜಿಡಿಪಿ  ಬೆಳವಣಿಗೆ ಶೇ. 7.2 ರಷ್ಟಾಗಬಹುದು ಎಂದು  ಆರ್ಬಿಐ ಅಂದಾಜಿಸಿದೆ. 

ಕೇಂದ್ರೀಯ  ಬ್ಯಾಂಕ್  ಈ ವರ್ಷ  ರೆಪೊ ದರವನ್ನು ಸತತವಾಗಿ ನಾಲ್ಕು ಬಾರಿ ಕಡಿತಗೊಳಿಸಿದೆ, ಈವರ್ಷದಲ್ಲಿ, ಒಟ್ಟು 110 ಬೇಸಿಸ್ ಪಾಯಿಂಟ್ಗಳು ಬಡ್ಡಿದರ ಇಳಿಕೆಯಾದಂತಾಗಿದೆ. ಕಳೆದ  ಆಗಸ್ಟ್ನಲ್ಲಿ ನಡೆದ  ಹಣಕಾಸು ನೀತಿ ಸಮತಿ ಸಭೆಯಲ್ಲಿ  ರೆಪೊ 35 ಬೇಸಿಸ್ ಪಾಯಿಂಟ್ಗಳಿಂದ 5.40 ಕ್ಕೆ ಇಳಿಸಿತು.  ಬ್ಯಾಂಕುಗಳಿಗೆ  ಒದಗಿಸುವ ಸಾಲಗಳಿಗೆ   ಆರ್ಬಿಐ   ವಿಧಿಸುವ ಬಡ್ಡಿದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. 

ಜನವರಿಯಿಂದ ಸತತ ನಾಲ್ಕು ತ್ರೈಮಾಸಿಕ ಪರಾಮರ್ಶಿಗಳಲ್ಲಿ  ಆರ್ಬಿಐ ರೆಪೊ ದರವನ್ನು ಶೇಕಡಾ 1.1 ರಷ್ಟು (0.25 + 0.25 + 0.25 + 0.35) ಕಡಿಮೆ ಮಾಡಿದೆ. ಚಿಲ್ಲರೆ ಹಣದುಬ್ಬರ ಮತ್ತು ಆರ್ಥಿಕ ಮಂದಗತಿಯ  ಹಿನ್ನೆಲೆಯಲ್ಲಿ, ಆರ್ಬಿಐ ರೆಪೊ ದರ ಕಡಿತದತ್ತ ಗಮನ ಹರಿಸುತ್ತಿದೆ.