ಧರ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಆರ್ಥಿಕ ಸಮಾನತೆ ಸಾಧ್ಯ - ನಿತ್ಯಾನಂದ

ರಾಣೇಬೆನ್ನೂರು 19: ಇಂದಿನ ಸಮಾಜದ ವ್ಯವಸ್ಥೆಯಲ್ಲಿ ಮನೆ, ಮಕ್ಕಳು,ಗಂಡ ಮತ್ತು ಕುಟುಂಬ ಇವುಗಳ ನಿರ್ವಹಣೆಗೆ ಆರ್ಥಿಕ ಸಹಾಯ ಮತ್ತು ಸಹಕಾರಗಳ ಅಗತ್ಯತೆ ತುಂಬಾ ಇದೆ. ಇಂತಹ ಸಂದರ್ಭದಲ್ಲಿ ಎಸ್ ಕೆ ಡಿ ಆರ್ ಡಿ ಪಿ, ಬಿಸಿ ಟ್ರಸ್ಟ್‌, ಅತ್ಯಂತ  ಸರಳ ಮತ್ತು ಕಡಿಮೆ ಬಡ್ಡಿಯಲ್ಲಿ ಹಣ ನೀಡುವುದರ ಮೂಲಕ, ಉಳಿತಾಯದ ಜೊತೆಗೆ ಮಹಿಳೆಯರ ಆರ್ಥಿಕ  ಸಬಲೀಕರಣ ಮಾಡಲು ಮುಂದಾಗಿದೆ  ಎಂದು ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಹೇಳಿದರು.ಅವರು, ಶನಿವಾರ  ಇಲ್ಲಿನ ಸಿದ್ದೇಶ್ವರ ನಗರದ ಕಾಕಿ ಜನ ಸೇವಾ ಗಣೇಶೋತ್ಸವ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಆಯೋಜಿಸಿದ್ದ, ಒಕ್ಕೂಟ ತಾಲೂಕ  ಮಟ್ಟದ   ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.         ಧರ್ಮ ಮತ್ತು ಸಂಸ್ಕೃತಿ ಭಾರತೀಯರ ಪರಂಪರೆ ಧರ್ಮದ ನೆಲೆಗಟ್ಟಿನಲ್ಲಿ, ನಾಡಿನ ಮನುಕುಲದ  ಉದ್ಧಾರಕ್ಕಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು  ತಮ್ಮ ದೂರ ದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಿ ಮಹಿಳೆಯರ ಆರ್ಥಿಕ ಸಮಾನತೆಗೆ ಕಾರಣರಾಗಿದ್ದಾರೆ ಎಂದರು     

ಸಂಘದ ಸದಸ್ಯರು, ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು ಸಾಂಘಿಕ ಬೆಳವಣಿಗೆಗೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ, ತಮ್ಮೆಲ್ಲರ ಅಭಿವೃದ್ಧಿ,ಮತ್ತು ಆರ್ಥಿಕ ಸಮಾನತೆ ಸಾಧಿಸಲು ಸಾಧ್ಯವಾಗುವುದು ಎಂದು ಕರೆ ನೀಡಿದರು.              ಅತಿಥಿಯಾಗಿ ಪಾಲ್ಗೊಂಡಿದ್ದ, "ಅಭಿರುಚಿ " ಸೇವಾ ಸಂಸ್ಥೆಯ ಕಾರ್ಯದರ್ಶಿ, ಕೆ.ಎಸ್‌. ನಾಗರಾಜ್ ಅವರು,ಪುರುಷ ಪ್ರಧಾನ ಸಮಾಜದಲ್ಲಿ ಬದುಕು ಸಾಗಿಸುತ್ತಿರುವ ಇಂದಿನ ಆಧುನಿಕ ಮಹಿಳೆ, ಹತ್ತು ರೂಪಾಯಿಗೂ ಕೈಯೂಡ್ಡುವ ಕಾಲಾ ಒಂದಿತ್ತು, ಈ ಯೋಜನೆ ಪ್ರಾರಂಭವಾದಾಗಿನಿಂದ, ಮಹಿಳೆ ಪರಿಪೂರ್ಣವಾಗಿ ಆರ್ಥಿಕ ಸಮಾನತೆ ಸಾಧಿಸಿ, ತಮ್ಮ ಕುಟುಂಬದವರಿಗೂ ಸಹ ಸಹಾಯ ಹಸ್ತ  ನೀಡುವ ಚೈತನ್ಯ ಮತ್ತು ಶಕ್ತಿ ಬಂದಿದ್ದು, ದೇಶದ ಆರ್ಥಿಕ  ಅಭಿವೃದ್ಧಿಗೆ ಕಾರಣವಾದಂತಾಗಿದೆ ಎಂದರು.   

ಜಿಲ್ಲಾ ಯೋಜನಾ ನಿರ್ದೇಶಕ ಶಿವರಾಯ ಪ್ರಭು ಅವರು ಮಾತನಾಡಿ,ಸ್ವಸಹಾಯ ಸಂಘಟನೆಗಳು,ಮಾಡುವ ವ್ಯವಹಾರ ಪ್ರತಿಯೊಬ್ಬರಿಗೂ ತಿಳಿದಿರಬೇಕು. ಯೋಜನೆ ಬಗ್ಗೆ  ಮತ್ತು ಅದರ ನಿರ್ವಹಣೆ ಕುರಿತಂತೆ ಯಾರೇ ವಿಚಾರಿಸಿದರೂ, ಅದರ ಬಗ್ಗೆ ಪರಿಪೂರ್ಣ ಮಾಹಿತಿ ಹೊಂದಿರಬೇಕು ಎನ್ನುವ, ಉದ್ದೇಶದಿಂದ ಒಕ್ಕೂಟವನ್ನು ರಚಿಸಲಾಗಿದ್ದು, ಸಮಾವೇಶದ ಕಾರ್ಯಾಗಾರದಲ್ಲಿ  ಪ್ರತಿಯೊಂದು ಮಾಹಿತಿ ಅರಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಐಡಿಬಿಐ ಬ್ಯಾಂಕಿನ ಶಾಖಾ ಪ್ರಬಂಧಕ ಎಂ.ಪ್ರಸನ್ನ ಕುಮಾರ, ಅವರು ಬ್ಯಾಂಕಿನ ಸಾಲ ಸೌಲಭ್ಯಗಳು ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಎಂಐಎಸ್ ಯೋಜನಾಧಿಕಾರಿ ತೀರ್ಥಪ್ರಸಾದ್, ಹಣಕಾಸು ಪ್ರಬಂಧಕ ಕೇದಾರ ಸ್ವಾಮಿ, ಮತ್ತು ಯೋಜನೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ತಾಲೂಕ ಮಟ್ಟದ  ಒಕ್ಕೂಟ ಪದಾಧಿಕಾರಿಗಳ ಸಮಾವೇಶದಲ್ಲಿ ಸ್ವಸಹಾಯ ಸಂಘಟನೆಗಳ 300ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಕವಿತಾ ಸಂಗಡಿಗರು ಪ್ರಾರ್ಥಿಸಿದರು. ತಾಲೂಕ ಯೋಜನಾಧಿಕಾರಿ ಮಂಜುನಾಥಗೌಡ ಎಂ, ಸ್ವಾಗತಿಸಿ, ಕೃಷಿ ಮೇಲ್ವಿಚಾರಕ ರಮೇಶ್ ನಿರೂಪಿಸಿ, ಇನ್ನೂರ್ವಮೇಲ್ವಿಚಾಕಿ ಲಕ್ಷ್ಮಿ ವಂದಿಸಿದರು.