ಜಂಬಗಿ: ಚರಂಡಿಗೆ ಬಿದ್ದ ಎಮ್ಮೆ ರಕ್ಷಣೆ

ಸಂಬರಗಿ 19: ಜಂಬಗಿ ಗ್ರಾಮದ ದಾನಪ್ಪ ಬಡಿಗೇರ ಇವರ ಎಮ್ಮೆ ಮೇವು ಮೇಯುವಾಗ ಚರಂಡಿಯಲ್ಲಿ ಬಿದ್ದಿದ್ದು ರಸ್ತೆಯಲ್ಲಿ ಜನರಿಂದ ಮಾಹಿತಿ ಪಡೆದ ತಕ್ಷಣ ಮಾಲೀಕರು ಈ ಎಮ್ಮೆಯ ಜೀವ ಉಳಿಸಿದ್ದಾರೆ. 

 ಮಾಲೀಕ ಬಡಗೀರ್ ತನ್ನ ಎಮ್ಮೆಯನ್ನು ಮೇಯಲು ರಸ್ತೆಯ ಮೇಲೆ ಬಿಟ್ಟಿದ್ದ ಆದರೆ ರಸ್ತೆ ಬದಿಯಲ್ಲಿ ಚರಂಡಿ ಇದ್ದ ಕಾರಣ ಕಾಲು ಜಾರಿ ಚರಂಡಿಗೆ ಬಿದ್ದಿತ್ತು ಎಮ್ಮೆ. ಮಾಲೀಕರ ಬಡಿಗೇರ ಇವರು ತಕ್ಷಣ ಜೆಸಿಬಿ ಕರೆಸಿಕೊಂಡು ಅದಕ್ಕೆ ಹಗ್ಗ ಕಟ್ಟಿಕೊಂಡು ಎಮ್ಮೆಯ ಪ್ರಾಣ ಉಳಿಸಿದ್ದಾರೆ.  ಒಳಚರಂಡಿ ಐದು ಅಡಿ ಆಳದಲ್ಲಿದೆ, ಚರಂಡಿಯ ಮೇಲೆ ಯಾವ ರೀತಿಯ ಹೊದಿಕೆ ಇಲ್ಲದೆ ಅಪಾಯಕಾರಿಯಾಗಿದೆ. ಯಾವುದೇ ಪ್ರಾಣಿಯಾಗಲಿ ಪುಟ್ಟ ಮಕ್ಕಳಾಗಲಿ ಬಿದ್ದು ಅನಾಹುತ  ಸಂಭವಿಸುವ ಮುನ್ನ ಗ್ರಾಮ ಪಂಚಾಯಿತಿ ಜಾಗೃತರಾಗಿ ಕಟ್ಟೆಚ್ಚರ ವಹಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಆಗುವ ಸಾಧ್ಯತೆ ಇದೆ.