ಲೋಕದರ್ಶನವರದಿ
ರಾಣೆಬೆನ್ನೂರ, ಜೂ 28: ಗ್ರಾಮೀಣ ಪ್ರದೇಶದಲ್ಲಿರುವ ಉದ್ಯೋಗಸ್ಥರ ಕೂಲಿ ಕಾಮರ್ಿಕರಿಗೆ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕರೋನಾ ವೈರಸ್ (ಕೋವಿಡ್-19) ಸೋಂಕು ಪ್ರಕರಣದ ಇಂತಹ ಸಂದರ್ಭದಲ್ಲಿ ಈ ಯೋಜನೆ ಆರ್ಥಿಕ ಚೇತರಿಕೆ ಮತ್ತು ಜೀವನ ಬದುಕನ್ನು ಸಾಗಿಸಲು ಅತ್ಯಂತ ಸಹಕಾರಿಯಾಗಿದೆ. ಕಾಯಕವೇ ಕೈಲಾಸವೆಂದು ಸಾರಿರುವ ಅಣ್ಣ ಬಸವಣ್ಣನವರ ವಚನವಾಣಿಯಂತೆ ಕಾಮರ್ಿಕರು ನಿರ್ಲಕ್ಷ್ಯ ಭಾವನೆ ತಾಳದೇ, ಉದ್ಯೋಗ ನೊಂದಣಿ ಮಾಡಿಸಿಕೊಂಡು ಕಾಯಕವನ್ನು ಮಾಡಲು ಮುಂದಾಗಬೇಕು ಎಂದು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶ್ರೀ ಶರಣ ಬಸವೇಶ್ವರ ಮಹಾ ಸಂಸ್ಥಾನಮಠದ ಡಾ|| ಪ್ರಣವಾನಂದರಾಮ ಮಹಾಸ್ವಾಮಿಗಳು ನುಡಿದರು.
ಅವರು ತಾಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯತ್, ಹಾವೇರಿ ಜಿಲ್ಲಾ ಪಂಚಾಯತ್ ಆಯೋಜಿಸಿದ್ದ, ಎನ್.ಆರ್.ಜಿ. ಜಾಗೃತಿ ಅಭಿಯಾನ ಉದ್ಯೋಗ ನೊಂದಣಿ ಅಭಿಯಾನ ಜಾಗೃತಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ಭಾರತ ದೇಶ ಬಹುಪಾಲು ಹಳ್ಳಿಗಳಿಂದ ಕೂಡಿದ ದೇಶ. ಹಳ್ಳಿಯಿಂದ ದಿಲ್ಲಿಯವರೆಗೆ ಎನ್ನುವ ಮಾತು ಕೇವಲ ಮಾತಲ್ಲ. ಅದು ವಾಸ್ತವಿಕ ನಿಜಸಂಗತಿ. ಹಳ್ಳಿಗಳು ಅಭಿವೃದ್ಧಿ ಕಂಡರೇ ಮಾತ್ರ ಸಮಗ್ರ ದೇಶವು ಅಭಿವೃದ್ಧಿ ಕಂಡಂತೆ. ಭಾರತದ ಆಥರ್ಿಕ ಭದ್ರತೆಗೆ ಮತ್ತು ಅಭಿವೃದ್ಧಿಗೆ ಗ್ರಾಮೀಣ ನಾಗರೀಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಶ್ರೀಗಳು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾಪಂಚಾಯತ್ ಸಹಕಾರ್ಯನಿವರ್ಾಹಕ ಅಧಿಕಾರಿ ಅಶೋಕ ನಾರಜ್ಜಿ ಅವರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದಲ್ಲಿರುವ ಕೂಲಿ ಕಾಮರ್ಿಕರ ಬದುಕಿಗೆ ಆಸರೆಯಾಗಿದೆ.
ಈ ಯೋಜನೆಯಲ್ಲಿ ಕೆಲಸ ನಿರ್ವಹಿಸಲು ಯಾವುದೇ ಶಿಕ್ಷಣ ಬೇಕಾಗಿಲ್ಲ. ಇಲ್ಲಿ ಅವರ ಕೆಲಸವೇ ಶಿಕ್ಷಣವಾಗಿರುತ್ತದೆ. ಪ್ರತಿಯೊಬ್ಬರೂ ಹೆಸರನ್ನು ನೊಂದಾಯಿಸಿಕೊಂಡು ಸಕರ್ಾರ ನಿಗದಿಪಡಿಸಿದ ವೇತನದಲ್ಲಿ ತಮ್ಮ ಕೆಲಸ ನಿರ್ವಹಿಸಬಹುದಾಗಿದೆ ಎಂದ ಅವರು ವೇತನ ನೇರವಾಗಿ ತಮ್ಮ ಉಳಿತಾಯ ಖಾತೆಗೆ ಜಮೆಯಾಗಲಿದೆ ಎಲ್ಲರೂ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ಅಧಿಕಾರಿಗಳು, ಸಿಬ್ಬಂಧಿ, ಗ್ರಾಮದ ಮುಖಂಡರು ಸೇರಿದಂತೆ ಊರ ನಾಗರೀಕರು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಾದಯಾತ್ರೆಯ ಮೂಲಕ ಅಭಿಯಾನ ನಡೆಸಿದರು.
ಎನ್.ಆರ್.ಜಿ. ಜಿಲ್ಲಾಧಿಕಾರಿ ನವೀನ ಹಿರೇಮಠ, ಪಿಡಿಓ ಡಿ.ಬಿ.ಹರಿಜನ, ಕರಿಯಪ್ಪ ಶ್ಯಾಮಣ್ಣನವರ, ಯಲ್ಲಪ್ಪ ಸುವರ್ೆ, ನಿಂಗಪ್ಪ ಹಲವಾಗಲ, ಗಾಳೆಪ್ಪ ಮರಿಯಮ್ಮನವರ, ಫಕ್ಕೀರಪ್ಪ ನಾಗರಜ್ಜಿ, ಮಂಜುನಾಥ ವಡ್ಡರ, ಪ್ರಭುಗೌಡ ಮುದಿಗೌಡ್ರ, ಶಿವು ವಡ್ಡರ, ಶಶಿಧರಯ್ಯ ಮಠದ, ಮಾಲತೇಶ ಸುವರ್ೆ, ಕೃಷ್ಣಮೂತರ್ಿ ಗುಂಗೇರ, ಪ್ರಕಾಶ್ ಸುವರ್ೆ, ಸೇರಿದಂತೆ ಮತ್ತಿತರ ಗಣ್ಯರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.