ದೈಹಿಕ ಮಾನಸಿಕ ಸದೃಢತೆಗೆ ಸದಾ ಸಾತ್ವಿಕ ಆಹಾರ ಸೇವನೆ ಮಾಡಿ: ಕರಿಬಸವರಾಜು
ಲೋಕದರ್ಶನ ವರದಿ
ಮೂಡಲಗಿ 28: ದೈಹಿಕವಾಗಿ ಮಾನಸಿಕ ಸದೃಢರಾಗಲು ಸದಾ ಸಾತ್ವಿಕ ಆಹಾರ ಸೇವನೆ ಮಾಡಬೇಕು ಅದರ ಜೊತೆಯಲ್ಲಿ ದೃಢಕಾರ ಶರೀರ ಹೊಂದಲು ರಾಗಿ ಅಂತಹ ದ್ರವ ರೂಪದ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ಮುಕ್ತಿ ಕಾಣಲು ಸಾಧ್ಯ ಎಂದು ಮೂಡಲಗಿ ಬಿ.ಇ.ಒ ಕಛೇರಿಯ ಇ.ಸಿ.ಒ ಟಿ ಕರಿಬಸವರಾಜು ಅಭಿಪ್ರಾಯಪಟ್ಟರು.
ಅವರು ಗುರುವಾರದಂದು ನಗರದ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಸಾಯಿ ಸೇವಾ ಸಮಿತಿ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಕ್ಕಳಿಗೆ ಉಚಿತ ಸಾಯಿ ಪ್ರೋಟಿನ್ ರಾಗಿ ಅಂಬಲಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆರೋಗ್ಯವಂತ ಶರೀರ ಹೊಂದಲು ಸಸ್ಯಹಾರ ಜೊತೆಯಲ್ಲಿ ಅತೀ ಹೆಚ್ಚು ಪ್ರೋಟಿನ್ ಅಂಶಗಳುಳ್ಳ ಆಹಾರ ಸೇವನೆ ಮಾಡಬೇಕು. ವಿದ್ಯಾಥರ್ಿಗಳಿಗೆ ಆಹಾರದ ಕ್ರಮ ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ವಿವರಸ ಬೇಕು. ಮೂಡಲಗಿ ವಲಯ ವ್ಯಾಪ್ತಿಯ ಸದ್ಯ 7 ಸಿ ಆರ್ ಸಿ ಗಳಿಗೆ ಒಟ್ಟು 150 ಕೆ.ಜಿಯಷ್ಟು ರಾಗಿಯ ಸಾಯಿ ಪ್ರೋಟಿನ್ ಕೊಟ್ಟಿದ್ದು ಸಮಿತಿ ಹಾಗೂ ಪರಿಷತ್ ಕೈಗೊಂಡಿರುವ ಕಾರ್ಯ ಮೆಚ್ಚುವಂತಹದಾಗಿದೆ ಎಂದು ಹೇಳಿದರು.
ಸಿ.ಎಮ್ ಹಂಜಿ ಮಾತನಾಡಿ, ಸಾಯಿ ಸೇವಾ ಸಮಿತಿ ಮೂಡಲಗಿಯಲ್ಲಿ ತನ್ನದೆಯಾದ ಧಾಮರ್ಿಕವಾಗಿ ಅಭ್ಯುದಯ ಹೊಂದುತ್ತಿರುವ ಸಂಸ್ಥೆಯಾಗಿದೆ. ಯಾವುದೇ ಸಾಮಾಜಿಕ ಕಟ್ಟಳೆಗಳಿರದೆ ಸೇವಾ ಮನೊಬಾವದಿಂದ ಎಲ್ಲರೂ ಸೇರಿ ಮಾಡುವಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರಲ್ಲಿ ಎಲ್ಲರೂ ಪಾಲ್ಗೊಂಡು ತನು ಮನ ದನ ಸಹಾಯದೊಂದಿಗೆ ಸಹಕರಿಸಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪರೀಷತ್ ಅಧ್ಯಕ್ಷ ಎಸ್ ವಾಯ್ ದ್ಯಾಗಾನಟ್ಟಿ, ಸಾಯಿ ಸಮಿತಿಯ ಕೆ.ಆರ್ ಕೊತ್ತಲ, ಆರ್.ಎಮ್ ಮಹಾಲಿಂಗಪೂರ,ಎಸ್ಸಿ ಎಸ್ಟಿ ನೌಕರ ಸಂಘದ ಅಧ್ಯಕ್ಷ ಎ.ಪಿ ಪರಸನ್ನವರ, ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಬಿ.ಎಮ್ ನಂದಿ, ಐ.ಎ ಪಾಟೀಲ್, ಹನಮಂತ ಸೊರಗಾವಿ, ಭೀಮಶಿ ನಾಯಿಕ, ಎಸ್ ಜಿ ಮಿಲಾನಟ್ಟಿ, ರವಿ ನಂದಗಾವಿ, ವೀಣಾ ಗಾಡವಿ, ನಿರ್ಮಲಾ ವಲರ್ಿ, ಪ್ರಧಾನ ಗುರುಗಳಾದ ಮಹಾದೇವಿ ಕೊಣ್ಣೂರ, ಎಸ್.ವಿ ಕೋಪಡರ್ೆ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ವಿದ್ಯಾಥರ್ಿಗಳು ಹಾಜರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 