ಪಪುವಾ ನ್ಯೂಗಿನಿಯಾದಲ್ಲಿ ಭೂಕಂಪನ

ನ್ಯೂಯಾರ್ಕ್, ಜೂನ್ 8,  ಪಪುವಾ ನ್ಯೂಗಿನಿಯಾದ ಕೊಕೊಪೊದ ನೈರುತ್ಯ ದಿಕ್ಕಿನಲ್ಲಿ ಭಾನುವಾರ  ಭೂಕಂಪನ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪನದಲ್ಲಿ   5.9 ಎಂದು ಅಮೆರಿಕ  ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.ಇದರ ಕೇಂದ್ರ ಬಿಂದು ಆರಂಭದಲ್ಲಿ 5.3634 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 151.6639 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು  ಎಂದು ನಿರ್ಧರಿಸಲಾಗಿದೆ.