ಗದಗ, ಹುಬ್ಬಳ್ಳಿಯಲ್ಲಿ ತಲಾ ಒಂದೊಂದು ಕೋವಿಡ್‌-19 ಸೋಂಕು ದೃಢ

ಗದಗ/ಹುಬ್ಬಳ್ಳಿ,  ಏಪ್ರಿಲ್ 17, ಗದಗ-ಬೆಟಗೇರಿ ನಗರದ ನಿವಾಸಿ 42 ವರ್ಷದ ಪುರುಷ ವ್ಯಕ್ತಿಗೆ (ಪಿ.370) ಸೋಂಕು ಧೃಡ  ಪಟ್ಟಿದೆ. ಇವರು ಪಿ-304 ಪ್ರಕರಣದ ದ್ವೀತಿಯ ಸಂಪರ್ಕದಲ್ಲಿದ್ದರು. ಇವರಿಗೆ ತಂದೆ-ತಾಯಿ  ಹೆಂಡತಿ ಸೇರಿದಂತೆ ಇಬ್ಬರು ಮಕ್ಕಳು ಇದ್ದು ಇವರೆಲ್ಲರನ್ನು ಮುಂಜಾಗೃತಾ ಕ್ರಮವಾಗಿ  ನಿಗಾದಲ್ಲಿರಿಸಲಾಗಿದೆ. ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ  ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ  ತಿಳಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರದ ಕೋವಿಡ್-19 ನಿರ್ವಹಣೆ ನಿಯಮಗಳನ್ವಯ  ಎಲ್ಲ ಮುನ್ನೆಚ್ಚರಿಕೆ ಕ್ರಮ ಜರುಗಿಸಿ ವ್ಯಕ್ತಿ (ಪಿ370) ಇದ್ದ ಪ್ರದೇಶವನ್ನು  ನಿಯಂತ್ರಿತ ಪ್ರದೇಶವಾಗಿ(ಕಂಟನ್ಮೇಂಟ್‌) ಘೋಷಿಸಿ ಸಾರ್ವಜನಿಕರು ಆ ಪ್ರದೇಶದಿಂದ ಹೊರಗೆ  ಅಥವಾ ಒಳಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಗದಗ  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಇನ್ನು  ಹುಬ್ಬಳ್ಳಿಯಲ್ಲಿ ಇಂದು ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.ರೋಗಿ-236  ರೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಕರಾಡಿ ಓಣಿಯ 63 ವರ್ಷದ  ಪುರುಷರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಇವರನ್ನು ಪಿ-363 ಎಂದು ಗುರುತಿಸಲಾಗಿದೆ  , ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.