ಚಾಮರಾಜನಗರ, ಮಾರ್ಚ್ 12,ಬಂಡೀಪುರ ಟೈಗರ್ ರಿಸರ್ವ್ನ ಓಂಕಾರ ಶ್ರೇಣಿಯಲ್ಲಿ ರೈಲು ಹಳಿಯ ಬೇಲಿ ದಾಟಲು ಯತ್ನಿಸುತ್ತಿದ್ದ ಆನೆಗೆ ಸಿಬ್ಬಂದಿ ಗುಂಡು ಹಾರಿಸಿದರೂ ಅದು ಅಚ್ಚರಿಯ ರೀತಿಯಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾಗಿದೆ .ಸಿಬ್ಬಂದಿ ಹಾರಿಸಿದ ಗುಂಡು ರೈಲ್ವೆ ಟ್ರ್ಯಾಕ್ ಬೇಲಿಗೆ ಬಡಿದು, ಆನೆ ಅಚ್ಚರಿ ರೀತಿಯಲ್ಲಿ ಪಾರಾಗಿ ಯಾವುದೇ ಆಪಾಯವಿಲ್ಲದೆ ತಪ್ಪಿಸಿಕೊಂಡಿದೆ.ಈ ಘಟನೆ ಸುಮಾರು ಒಂದು ವಾರದ ಹಿಂದೆ ನಡೆದಿದೆ ಎಂದು ಹೇಳಲಾಗಿದೆ ಆದರೆ ಅದರ ವಿಡಿಯೋ ಬುಧವಾರ ಹೊರಬಂತ್ತು ನಂತರ ಇದು ವೈರಲ್ ಆಗಿ ವನ್ಯಜೀವಿ ಕಾರ್ಯಕರ್ತರು ಮತ್ತು ಸಂರಕ್ಷಣಾಕಾರರ ಆಕ್ರೋಶಕ್ಕೂಕಾರಣವಾಗಿದೆ. ಕಳೆದ ವಾರ ಆನೆಯನ್ನು ಮರಳಿ ಕಾಡಿಗೆ ತಳ್ಳುವ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು, ಬಂಡೀಪುರ ಟೈಗರ್ ರಿಸರ್ವ್ ನಿರ್ದೇಶಕ ಟಿ ಬಾಲಚಂದ್ರ ಅವರು ಒಪ್ಪಿಕೊಂಡಿದ್ದಾರೆ . ಆನೆಗಳನ್ನು ಕಾಡಿನ ಕಡೆಗೆ ಕಡೆಗೆ ಓಡಿಡುವ ಸಮಯದಲಿ ಈ ಘಟನೆ ಜರುಗಿದೆ ಎನ್ನಲಾಗಿದೆ. ಗಾಳಿಯಲ್ಲಿ ಗುಂಡು ಹಾರಿಸುವುದು ಸಿಬ್ಬಂದಿಯ ಉದ್ದೇಶವಾಗಿದ್ದರೂ ಸಿಬ್ಬಂದಿಯ ವರ್ತನೆಯ ಬಗ್ಗೆಯೂ ಪ್ರಶ್ನೆಗಳನ್ನು ಎದ್ದಿವೆ ಎಂದು ಅವರು ಹೇಳಿದರು.