ಇ-ಸಿಗರೇಟ್ ಸೇವನೆ ಕಾಯಿಲೆಯಿಂದ ಅಮೆರಿಕದಲ್ಲಿ ಸಾವನ್ನಪ್ಪಿದವರ ಸಂಖ್ಯೆ 68ಕ್ಕೆ ಏರಿಕೆ

ವಾಷಿಂಗ್ಟನ್, ಫೆ 26, ಇ ಸಿಗರೇಟ್ ಸೇವನೆಯಿಂದ ಕಳೆದ ಸೆಪ್ಟೆಂಬರ್ನಲ್ಲಿ ಉಲ್ಬಣಗೊಂಡ ಕಾಯಿಲೆಯಿಂದ ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ  ಕನಿಷ್ಠ 68 ಜನರು ಸಾವನ್ನಪ್ಪಿದ್ದಾರೆ ಎಂದು  ಕಾಯಿಲೆ ನಿಯಂತ್ರಣಾ ಕೇಂದ್ರ (ಸಿಡಿಸಿ)ದ ಪ್ರಕಟಣೆ ತಿಳಿಸಿದೆ.29 ರಾಜ್ಯಗಳು ಮತ್ತು ವಾಷಿಂಗ್ಟನ್ ನಗರದಲ್ಲಿ 68 ಸಾವುಗಳು ದೃಢಪಟ್ಟಿವೆ ಎಂದು ನಿಯಂತ್ರಣಾ ಕೇಂದ್ರ ಮಂಗಳವಾರ ತಿಳಿಸಿದೆ.ಫೆಬ್ರವರಿ 18 ರ ವೇಳೆಗೆ ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾದ ಇ-ಸಿಗರೆಟ್ ಸೇವನೆಯಿಂದ  ಶ್ವಾಸಕೋಶ ತೊಂದರೆಯ 2,807 ಪ್ರಕರಣಗಳು ವರದಿಯಾಗಿವೆ.ಆದರೂ, 2019ರ ಸೆಪ್ಟೆಂಬರ್ ನಿಂದ ಹೊಸ ಪ್ರಕರಣಗಳಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಕಾಯಿಲೆಗೆ ವಿಟಮಿನ್ ಇ ಅಸಿಟೇಟ್ ಪ್ರಮುಖ ಕಾರಣವೆಂದುಗುರುತಿಸಲಾಗಿದೆ ಎಂದು ಸಿಡಿಸಿ ಹೇಳಿದೆ. ವಿಟಮಿನ್ ಇ ಅಸಿಟೇಟ್ ಸಿಗರೇಟ್ ಗಳ ಕಾಟ್ರಿಡ್ಜ್ ಗಳಿಗೆ ಬಳಸಲಾಗುತ್ತದೆ.