ಗೋಕಾಕ, 9: ಕುಂಭಹೊತ್ತ ಮತ್ತು ಆರತಿಗಳನ್ನು ಹಿಡಿದ ಸುಮಂಗಲಿಯರ ಸಾಲು, ವಿವಿಧ ವಾದ್ಯ ವೃಂದಗಳ ನಿನಾದ, ಭಕ್ತಿಯ ಜಯಘೋಷಗಳೊಂದಿಗೆ ಹಿಂದೂ-ಮುಸ್ಲಿಂ ಭಾವ್ಯೆಕ್ಯತೆಗೆ ಹೆಸರಾಗಿರುವ ಸಾವಳಗಿಯ ಶಿವಲಿಂಗೇಶ್ವರ ಮಠದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಪಲ್ಲಕ್ಕಿ ಮೆರವಣಿಗೆಯೊಂದಿಗೆ ದಸರಾ ಉತ್ಸವದ ಸೀಮೋಲ್ಲಂಘನ ಕಾರ್ಯಕ್ರಮವು ಸಹಸ್ರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಸಂಭ್ರಮದಿಂದ ಜರುಗಿತು.
ಸಂಜೆ ಶ್ರೀಮಠದಿಂದ ಜಗದ್ಗುರು ಶಿವಲಿಂಗೇಶ್ವರ ಸನ್ನಿಧಿಯವರು ಹಿಂದೂ, ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಹಸಿರು ರಾಜಪೋಷಾಕುಗಳೊಂದಿಗೆ ಸಕಲ ರಾಜಮಯರ್ಾದೆ, ಬಿರುದಾವಳಿಗಳಿಂದ ಅಶ್ವಾರೂಢರಾಗಿ ಬನ್ನಿಮಂಟಪಕ್ಕೆ ಆಗಮಿಸಿದರು. ಸಂಪ್ರದಾಯದಂತೆ ಬನ್ನಿಮಂಟಪಕ್ಕೆ ಪೂಜೆಗಳನ್ನು ನೆರವೇರಿಸಿ ಆಯಧಗಳಿಂದ ಬನ್ನಿಯನ್ನು ಕತ್ತರಿಸಿದರು. ಗೋಕಾಕ ತಾಲ್ಲೂಕಿನ ಖಾನಾಪುರ, ನಂದಗಾಂವ ಮತ್ತು ಮುತ್ನಾಳ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಿದರು.
ಸಂಜೆ ದಸರಾ ಉತ್ಸವದ ಮುಖ್ಯ ವೇದಿಕೆಯಲ್ಲಿ ಮಹಾಸಭೆ ಜರುಗಿತು.
ದೇವಿ ಪುರಾಣವನ್ನು ನಿಚ್ಛಣಕಿಯ ಶ್ರೀ ಪಂಚಾಕ್ಷರಿ ಸ್ವಾಮಿಗಳು ಮಂಗಳ ಮಾಡುತ್ತಾ 'ಮನ್ನಸ್ಸಿನಲ್ಲಿರುವ ಅಹಂಕಾರ, ಅಸೆ, ಆಮಿಷಗಳಿಂದ ಮುಕ್ತರಾಗಿ ಶುದ್ಧ ಮನಸ್ಸಿನಿಂದ ಬದುಕು ಸಾಗಿಸಬೆಕು' ಎಂದರು.
ಸಾನ್ನಿಧ್ಯವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಆಶೀರ್ವಚನ ನೀಡಿ 'ಮನುಷ್ಯ ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆ ಹಾಗೂ ಧರ್ಮದಿಂದ ನಡೆದುಕೊಂಡು ಬದುಕನ್ನು ಸಾರ್ಥಕಮಾಡಿಕೊಳ್ಳಬೇಕು' ಎಂದರು.
ಗುಣಕ್ಕೆ ಮಹತ್ವವಿದ್ದು, ಜಾತಿ,ಮತ,ಪಂಥ ಎನ್ನದೆ ಸದ್ಭಾವನೆಯಲ್ಲಿ ಶಾಂತಿ, ನೆಮ್ಮದಿ ಇದ್ದು, ಅಲ್ಲಿ ಪರಮಾತ್ಮನ ಸಾಕ್ಷಾತ್ಕಾರವಾಗುವುದು ಎಂದರು.
ರೋಣದ ಪುಟ್ಟರಾಜರೊಂದಿಗೆ ವಿಜಯ ದೊಡ್ಡಣ್ಣವರ ಅವರ ಸಂಗೀತ ಸುಧೆಯು ಶ್ರೋತೃಗಳು ತಲೆದೂಗುವಂತೆ ಮಾಡಿತು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತವಿಕ ಮಾತನಾಡಿದರು, ಯಶೋಧಾ ಮರಬಸಣ್ಣವರ ನಿರೂಪಿಸಿದರು.