ವಿಜಯಪುರ, ಅ 19 : ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಳ್ಳದ ನೀರು ನುಗ್ಗಿ ರಸ್ತೆ ಜಲಾವೃತಗೊಂಡ ಪರಿಣಾಮ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ-ಕೆಂಗನಾಳ ಮಧ್ಯೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.
ಮರಿಹಳ್ಳದ ನೀರು ನುಗ್ಗಿ ರಸ್ತೆ ಮಾರ್ಗ ಜಲಾವೃತವಾಗಿರುವುದರಿಂದ ತಾಂಬಾದಿಂದ ಕೆಂಗನಾಳ, ಶಿರಕನಳ್ಳಿ, ಹೊನ್ನಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಸಕರ್ಾರಿ ಬಸ್ಸುಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಹಳ್ಳದ ನೀರು ಬಂದಾಗಲೊಮ್ಮೆ ತಗ್ಗು ಪ್ರದೇಶದಲ್ಲಿರುವ ರಸ್ತೆ ಮುಳುಗಡೆ ಆಗುತ್ತದೆ. ಇಂದು ಸಂಜೆಯವರೆಗೆ ನೀರು ಕಡಿಮೆ ಆಗುವ ಸಾಧ್ಯತೆ ಇದೆ.
ಭಾರಿ ಮಳೆಯಾದಾಗ ಹಳ್ಳದ ನೀರು ರಸ್ತೆಗೆ ನುಗ್ಗುವ ಪರಿಣಾಮ ಸೇತುವೆ ನಿಮರ್ಿಸಬೇಕು ಎಂದು ಈ ಭಾಗದ ಜನರು ಸಕರ್ಾರಕ್ಕೆ ಆಗ್ರಹಿಸಿದ್ದಾರೆ.