ದುಲೀಪ್ ಟ್ರೋಫಿ: ಫೈನಲ್ ಮೇಲೆ ಭಾರತ ಗ್ರೀನ್, ಬ್ಲ್ಯೂ ಕಣ್ಣು

ಬೆಂಗಳೂರು,  ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಗೆ ಅರ್ಹತೆ ಪಡೆಯುವ ಕನಸಿನೊಂದಿಗೆ ಭಾರತ ಗ್ರೀನ್ ಹಾಗೂ ಭಾರತ ಬ್ಲ್ಯೂ ತಂಡಗಳು ಗುರುವಾರ ಮೈದಾನ ಪ್ರವೇಶಿಸಲಿದ್ದು, ರೋಚಕತೆ ಹೆಚ್ಚಿಸಿದೆ.    

ಈಗಾಗಲೇ ಭಾರತ ರೆಡ್ ಆಡಿರುವ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದ್ದು, ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಫೈನಲ್ ನಲ್ಲಿ ಕಾದಾಟ ನಡೆಸಲಿರುವ ಇನ್ನೊಂದು ತಂಡ ಯಾವುದು ಎಂಬ ಪ್ರಶ್ನೆಗೆ ಈ ಪಂದ್ಯದಲ್ಲಿ ಉತ್ತರ ಲಭಿಸಲಿದೆ. ಭಾರತ ಬ್ಲ್ಯೂ 2 ಅಂಕ ಮತ್ತು ಗ್ರೀನ್ 1 ಅಂಕ ಕಲೆ ಹಾಕಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.     

ಫಯಾಜ್ ಫಜಲ್ ನಾಯಕತ್ವದ ಗ್ರೀನ್ ತಂಡದಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರರು ಇದ್ದಾರೆ. ಆಕಶ್ ದೀಪ್ ನಾಥ್, ರಾಹುಲ್ ಚಹಾರ್, ಪ್ರಿಯಂ ಗರ್ಗ, ಸಿದ್ದೇಶ್ ಲಾಡ್, ಇಶಾನ್ ಪೊರೆಲ್, ಧ್ರುವ್ ಶೋರೆ, ಜಯಂತ್ ಯಾದವ್ ಅವರಂತಹ ಆಟಗಾರರು ತಂಡಕ್ಕೆ ನೆರವಾಗ ಬೇಕಿದೆ.    

ರೆಡ್ ತಂಡದ ನಾಯಕತ್ವ ವಹಿಸಿಕೊಂಡ ಪ್ರಿಯಾಂಕ್ ಪಂಚಾಲ್ ತಂಡಕ್ಕೆ ಬ್ಯಾಟಿಂಗ್ ನಿಂದ ನೆರವಾಗ ಬಲ್ಲ ಆಟಗಾರ. ಹರ್ಪಿತ್ ಸಿಂಗ್, ಅಂಕಿತ್ ರಜಪೂತ್, ಇಶಾನ್ ಕಿಶನ್ ಬ್ಯಾಟಿಂಗ್ ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಬೌಲರ್ ಗಳು ಸಹ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲಿಂಗ್ ನಡೆಸಿದರೆ, ಗೆಲುವು ಸಾಧ್ಯ.