ಗೋವಾದಲ್ಲಿ ಮಾದಕ ಪದಾರ್ಥ ವ್ಯವಹಾರ ಹೆಚ್ಚಳ: ಮಾಜಿ ಸಚಿವರ ಕಳವಳ

ಪಣಜಿ, ನ 22 :  ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕವಸ್ತು ವ್ಯಾಪಾರ ಮತ್ತು ರೇವ್ ಪಾಟರ್ಿಗಳ ಬಗ್ಗೆ ಮಾಜಿ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ನಿಭಾಯಿಸಲು ರಾಜ್ಯ ಗೃಹ ಸಚಿವಾಲಯಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ  

ಒಂದು ವೇಳೆ ಮುಖ್ಯಮಂತ್ರಿಯವವರಿಗೆ ಗೃಹಖಾತೆ ನಿರ್ವಹಣೆ ಕಠಿಣವಾದಲ್ಲಿ ಇತರ 'ಸಮರ್ಥ'ರಿಗೆ ಖಾತೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ.  

ನಗರದ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೋವಾ ಫಾರ್ವಡರ್್ ಪಾಟರ್ಿಯ (ಜಿಎಫ್ಪಿ) ಪಾಲೇಕರ್, "ಕಳೆದ ಕೆಲವು ತಿಂಗಳುಗಳಲ್ಲಿ ಗೋವಾದಲ್ಲಿ ಮಾದಕವಸ್ತು ವ್ಯಾಪಾರವು ಮಹತ್ತರವಾಗಿ ಹೆಚ್ಚಾಗಿದೆ. ನಾನು ಪ್ರತಿನಿಧಿಸುವ ಕರಾವಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾದಕ ವಸ್ತು ಮಾರಾಟ ಹಾಗೂ ಅಕ್ರಮ ರೇವ್ ಪಾಟರ್ಿಗಳನ್ನು ಪ್ರತಿದಿನ ನಡೆಸಲಾಗುತ್ತಿದೆ" ಎಂದು ಹೇಳಿದರು. 

   "ಅಕ್ರಮ ರೇವ್ ಪಾಟರ್ಿಗಳು ನಡೆಯುತ್ತಿರುವ ಬಗ್ಗೆ ಮಾಹಿತಿಗಾಗಿ ಮುಖ್ಯಮಂತ್ರಿಯವರು ಜನರನ್ನು ಕೇಳಿದ್ದರು. ನಾನು ಅವರಿಗೆ ಪತ್ರ ಬರೆದು ಮುಂಜಾನೆ ತನಕ ನಡೆಯುವ ಇಂತಹ ಪಾಟರ್ಿಗಳಲ್ಲಿ ಮಾದಕ ಪದಾರ್ಥ ಮಾರಾಟ ವ್ಯವಹಾರದ ಬಗ್ಗೆ ಫ್ಲೈಯರ್ಗಳನ್ನು ನೀಡಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಗೃಹ ಸಚಿವಾಲಯವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ಅದನ್ನು ಸಮರ್ಥ ಸಚಿವರಿಗೆ ನೀಡಲಿ "ಎಂದು ಪಾಲೀಕರ್ ಬೇಸರ ವ್ಯಕ್ತಪಡಿಸಿದ್ದಾರೆ.