ಬಡ ಕೂಲಿಕಾಮರ್ಿಕರಿಗೆ ದಾಸೋಹಕ್ಕೆ ಶ್ರೀಗಳಿಂದ ಚಾಲನೆ

ತಾಳಿಕೋಟೆ15: ಸಿದ್ದಗಂಗಾ ಮಠದಲ್ಲಿಯ ಶಿಕ್ಷಣದೊಂದಿಗೆ ಅಲ್ಲಿಯ ದಾಸೋಹವನ್ನು ಸ್ವಿಕರಿಸಿ ಬೆಳೆದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಅಲ್ಲಿಯ ದಾಸೋಹ ಕಾರ್ಯ ಇಲ್ಲಿಯೂ ತಮ್ಮ ಕೈಲಾದ ಮಟ್ಟಿಗೆ ಮುಂದುವರೆಸಿಕೊಂಡು ಹೋರಟಿಸುವದು ಶ್ಲಾಘನೀಯವಾಗಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಪಟ್ಟಣಕ್ಕೆ ವಿವಿಧ ರಾಜ್ಯಗಳಿಂದ ಆಗಮಿಸಿ ವಸತಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರೆಂಟೈನ್ನಲ್ಲಿ ಉಳಿದುಕೊಂಡಿರುವವರಿಗೆ ಶ್ರೀ ಘನಮಠೇಶ್ವರ ಕಾಲೇಜ್ ಆವರಣದಲ್ಲಿ ಸಿದ್ದಪಡಿಸಲಾಗುತ್ತಿರುವ ಅಡುಗೆ ತಯಾರಿಕೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಕಡುಬಡತನದಲ್ಲಿ ಹುಟ್ಟಿ ಬೆಳೆದು ಬಂದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಬಡವರ ಕಷ್ಟವನ್ನು ಅರೀತವರಾಗಿದ್ದಾರೆ ಜನರಿಗಾಗಿ ಜನರಿಗೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಟ್ಟು ಕೆಲಸ ಮಾಡುತ್ತಿದ್ದಾರೆ ವಿವಿಧ ರಾಜ್ಯಗಳಿಗೆ ದುಡಿಯಲು ಹೋಗಿದ್ದ ಬಡ ಕೂಲಿಕಾಮರ್ಿಕರು ಕೊರೊನಾ ವೈರಸ್ ಹೆಮ್ಮಾರಿಯಿಂದ ಕೆಲಸವೂ ಇಲ್ಲದೇ ಇತ್ತ ಮರಳಿ ಬರದೇ ಆಗದೇ ಅಲ್ಲಿಯೇ ಉಳಿದು ಊಟಕ್ಕೂ ಗತಿಯಿಲ್ಲದಂತೆ ತೊಂದರೆಪಡುತ್ತಿರುವದನ್ನು ಲಕ್ಷೀಸಿದ ಶಾಸಕ ನಡಹಳ್ಳಿ ಅವರು ಅವರುಗಳ ಎಲ್ಲರನ್ನು ಮರಳಿ ನಮ್ಮ ತಾಲೂಕಿಗೆ ಕರೆತರುವದರೊಂದಿಗೆ ಒಂದು ತಿಂಗಳಿಗಾಗುವಷ್ಟು ಊಟದ ಕಿಟ್ನ್ನು ನೀಡಿ ಅವರಿಗೆ ದೈರ್ಯತುಂಬುವಂತಹ ಕಾರ್ಯ ಮಾಡಿದ್ದಾರೆ ಇಂತಹ ದಾಸೋಹವನ್ನು ಮೈಗೂಡಿಸಿಕೊಂಡು ಸಮಾಜಕ್ಕಾಗಿ ಜನರಿಗಾಗಿ ಮಿಡಿಯುತ್ತಿರುವ ಹೃದಯಕ್ಕೆ ಶ್ರೀ ಖಾಸ್ಗತರ ಹಾಗೂ ಶ್ರೀ ಸಿದ್ದಗಂಗಾಶ್ರೀಗಳ ಆಶಿವರ್ಾದ ಸದಾ ಇರಲಿ ಎಂದು ಆಶಿಸಿದರು.

ಕೊಡೇಕಲ್ಲ ದುರುದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು,  ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಬಡವರ ಬಗ್ಗೆ ಹೊಂದಿರುವ ಕಾಳಜಿ ಕುರಿತು ಶ್ಲಾಘಿಸಿದರಲ್ಲದೇ ಕೊರೊನಾ ಹೆಮ್ಮಾರಿ ದೇಶದಿಂದಲೇ ಆದಷ್ಟು ಬೇಗ ಹೋಗಲಿದೆ ಇದಕ್ಕೆ ಜನರ ಸಹಕಾರ ಅಗತ್ಯ ಸಕರ್ಾರದ ಸೂಚನೆಯಂತೆ ಎಲ್ಲರೂ ಮಾಸ್ಕ್ ಮತ್ತು ಸಾಮಾಜಿಕ ಅಂತರ ಪ್ರಮುಖವಾದುದ್ದಾಗಿದೆ ಇದನ್ನು ಎಲ್ಲರೂ ಪಾಲನೆ ಮಾಡಬೇಕೆಂದರು.

ಈ ಸಮಯದಲ್ಲಿ ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ಎಸ್.ಎಂ.ಸಜ್ಜನ, ರಾಜು ಹಂಚಾಟೆ, ವೇ.ಮುರುಘೇಶ ವಿರಕ್ತಮಠ, ಸಾಗರ ಗುಪ್ತಾ, ಗೌರವ ಹಜೇರಿ, ಕಾಶಿನಾಥ ಗೋಗಿ, ಪ್ರವೀಣ್ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು