ವಿವಿಧ ಕಾಮಗಾರಿಗಳಿಗೆ ಚಾಲನೆ

ರಾಯಬಾಗ 01: ಚರಂಡಿಗಳ ನಿಮರ್ಾಣದಿಂದ ಮಲಿನ ನೀರು ಹರಿದು ಹೋಗಿ ಸಾಂಕ್ರಾಮಿಕ ರೋಗಗಳ ನಿಯಂತ್ರಣವಾಗುವದಲ್ಲದೆ ಗ್ರಾಮಗಳು ಸ್ವಚ್ಛವಾಗಿರುತ್ತವೆ ಎಂದು ಜಿ.ಪಂ.ಸದಸ್ಯ ಪ್ರಣಯ ಪಾಟೀಲ ಹೇಳಿದರು.     

ದಿ.30ರಂದು ತಾಲೂಕಿನ ಕಂಚಕಾರವಾಡಿಯ ವಾರ್ಡ ನಂ.2 ರಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರ ಅನುದಾನದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಮಂಜೂರಾದ ಕಾಂಕ್ರೆಟ್ ರಸ್ತೆ, ಚರಂಡಿ ಹಾಗೂ ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುಣ ಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. 

ಗ್ರಾ.ಪಂ.ಅಧ್ಯಕ್ಷ ಮಹಾದೇವ ಕೊಕಾಟೆ, ಕುಮಾರ ಪಾಟೀಲ, ಭೀಮಪ್ಪ ಕೆಸರಗೊಪ್ಪ, ಅಣ್ಣಪ್ಪ ತೋಳೆ, ಮಹಾದೇವ ರಂಗನ್ನವರ, ಸಂತೋಷ ತೋಳೆ, ಅಶೋಕ ಶಿಂಗೆ, ಕೃಷ್ಣಾ ಗಾಡಿವಡ್ಡರ, ವಸಂತ ಗಾಡಿವಡ್ಡರ, ಸದಾಶಿವ ಗಾಡಿವಡ್ಡರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.