ಡಿವೈಡರ್ನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನವರದಿ

ಬ್ಯಾಡಗಿ೧೪: ಪ್ರತಿಯೊಬ್ಬರೂ ತಮ್ಮ ಮನೆ ಅಂಗಳದಲ್ಲಿ ಒಂದೊಂದು ಸಸಿಗಳನ್ನು ನೆಡುವ ಮೂಲಕ ಹಸಿರು ನಾಡನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. 

ಸ್ಥಳೀಯ ಪುರಸಭೆಯ ವತಿಯಿಂದ ಹಂಸಬಾವಿ ರಸ್ತೆಯಲ್ಲಿರುವ ಡಿವೈಡರ್ನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇತ್ತೀಚಿಗಿನ ದಿನಗಳಲ್ಲಿ ಕಾಂಕ್ರಿಟೀಕರಣದ ನೆಪದಲ್ಲಿ ಗಿಡಗಳನ್ನು ಕಡಿದು ಹಸಿರಿಕರಣವನ್ನು ನಾಶ ಮಾಡುತ್ತಿರುವುದು ವಿಪಯರ್ಾಸ, ಭೂಮಿಯು ತಂಪಾಗಿ ಇರಬೇಕೆಂದರೆ ಗಿಡಗಳನ್ನು ನೆಡುವ ಮೂಲಕ ಹಸಿರು ಬಣ್ಣದ ನಾಡನ್ನು ನಿಮರ್ಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಹಸಿರನ್ನು ಬೆಳೆಸಬೇಕೆಂದು ಮನವಿ ಮಾಡಿದರು. 

       ಪುರಸಭೆ ಆಡಳಿತಾಧಿಕಾರಿ ಡಾ. ದಿಲೀಷ್ ಸೇಶಿ ಮಾತನಾಡಿ, ಹಸಿರು ಎಂಬುದು ಪ್ರತಿಯೊಬ್ಬರಿಗೂ ಉಸಿರು ಇದ್ದಂತೆ, ಅಂತಹ ಉಸಿರಾಗಿರುವ ಹಸಿರನ್ನು ನೆಟ್ಟು ಬೆಳೆಸಿ ಉಳಿಸಲು ಮುಂದಾಗಬೇಕಾಗಿರುವುದು ತಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. 

     ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಸದಸ್ಯರಾದ ಬಸವರಾಜ ಛತ್ರದ, ಚಂದ್ರಪ್ಪ ಶೆಟ್ಟರ, ವಿನಾಯಕ ಹಿರೇಮಠ, ರಾಮಣ್ಣ ಕೋಡಿಹಳ್ಳಿ, ಶಿವರಾಜ ಅಂಗಡಿ, ಫಕ್ಕೀರಮ್ಮ ಚಲುವಾದಿ, ಕಲಾವತಿ ಬಡಿಗೇರ, ಮಂಜಪ್ಪ ಬಾಕರ್ಿ, ಮೆಹಬೂಬಸಾಬ್ ಅಗಸನಹಳ್ಳಿ ಮುಖಂಡರಾದ ಸುರೇಶ ಆಸಾದಿ, ವೀರೇಂದ್ರ ಶೆಟ್ಟರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.