ಜ್ಞಾನಗಂಗಾ ಸಂಗೀತ ಪಾಠಶಾಲೆಗೆ ಚಾಲನೆ

ಲೋಕದರ್ಶನ ವರದಿ

ಯಲಬುರ್ಗಾ  11: ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ ಕಲಿಕೆ ಜತಗೆ ಸಂಗೀತ ಶಿಕ್ಷಣವನ್ನು ಕಲಿಯುವ ಆಸಕ್ತಿ ಹೊಂದಬೇಕು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

ಸಮೀಪದ ಮಂಗಳೂರು ಗ್ರಾಮದಲ್ಲಿ ಶಾಂತಿಕೇತನ ಶಾಲೆಯಲ್ಲಿ ಮಂಗಳೇಶ್ವರ ಶಿಕ್ಷಣ ಸಾಂಸ್ಕೃತಿಕ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಜ್ಞಾನಗಂಗಾ ಸಂಗೀತ ಪಾಠ ಶಾಲೆ ಪ್ರಾರಂಭೋತ್ಸವ ಚಾಲನೆ ನೀಡಿ ಬುಧವಾರ ಮಾತನಾಡಿದರು.

ಪ್ರತಿಯೊಬ್ಬರೂ ಆರೋಗ್ಯ ವೃದ್ಧಿ ಹಾಗೂ ನೆಮ್ಮದಿ ಜೀವನಕ್ಕೆ ಸಂಗೀತ ಸ್ಪೂತರ್ಿಯಾಗಿದೆ. ಹೀಗಾಗಿ ನಿತ್ಯವೂ ಬದುಕಿನಲ್ಲಿ ಸಾಹಿತ್ಯ ಸಂಗೀತದ ಕಡೆಗೆ ಎಲ್ಲೂರು ಕಾಳಜಿ ತೋರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು.ಸಂಗೀತ ಶಿಕ್ಷಣ ಪಡೆದಾಗ ಆಚಾರ ವಿಚಾರವನ್ನು ಅರಿಯಲು ಸಾಧ್ಯ. ಪ್ರತಿಯೊಂದು ಕಾರ್ಯಕ್ರಮ ಪ್ರಾರಂಭದಿಂದ ಮುಕ್ತಾಯವರಗೆ ಯಶಸ್ವಿ ಕಾಣಬೇಕಾದರೆ ಸಂಗೀತ ಪ್ರಾರ್ಥನೆ ಎನ್ನುವುದನ್ನು  ಮರೆಬಾರದು. ಗ್ರಾಮೀಣ ಮಟ್ಟದಲ್ಲಿ ಸಂಗೀತ ಪಾಠಶಾಲೆ ತೆರೆಯುವ ಮೂಲಕ ಮಕ್ಕಳಲ್ಲಿ ಸಂಗೀತ ಅಭಿರುಚಿಗೆ ಮುಂದಾಗಿರುವ ಕೋಟ್ರಪ್ಪ ತೋಟದ್ ಕಾರ್ಯ ಶ್ಲಾಘನೀಯವಾಗಿದ್ದು, ಇಂತಹ ಸಮಾಜ ಮುಖಿ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಿದಾಗ ಯಶಸ್ವಿ ಸಾಧ್ಯ ಎಂದರು.

ಮುಖಂಡ ಎಂ.ಜಿ.ಕುಲಕಣರ್ಿ ಮಾತನಾಡಿ, ಸಂಗೀತ ಎನ್ನುವುದು ಕೇವಲ ಕೆಲವರ ಸ್ವತ್ತಲ್ಲ. ಅದು ಕಲಾ ಆರಾಧನೆ ಸಂಕೇತ. ಗದುಗಿನ ಪುಟ್ಟರಾಜ ಗವಾಯಿಗಳು, ಡಾ.ಗಂಗೂಬಾಯಿ ಹಾನಗಲ್ ಸೇರಿದಂತೆ ನಾಡಿನ ಅನೇಕ ಸಂಗೀತ ಕಲಾವಿದರು.ದೇಶಕ್ಕೆ ತಮ್ಮದೇಯಾದ ಸಂಗೀತ ಕೊಡುಗೆ ನೀಡಿದ್ದನ್ನು ಸ್ಮರಿಸಬೇಕು. ಪ್ರಾಶ್ಚಿಮಾತ್ಯ ಸಂಸ್ಕೃತಿಯನ್ನು ದೂರುವಿಟ್ಟು, ದೇಶಿಯ ಪುರಾತನ ಸಂಸ್ಕೃತ, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಉಳಿಸಿ ಬೆಳೆಸುವಲ್ಲಿ  ಮುಂದಾಗಬೇಕು ಎಂದರು.

ತಾ.ಪಂ.ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ಸಂಸ್ಥೆಯ ಅಧ್ಯಕ್ಷ ಕೋಟ್ರಪ್ಪ ತೋಟದ್, ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿದರು. ವಿಜಯ ಮಹಾಂತ ಸ್ವಾಮೀಜಿ, ಮೈಸೂರು ಸಂಸ್ಥಾನ ಮಠ, ಕುದರಿಮೋತಿ. ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ, ಅರಳೆಲೆ ಹಿರೇಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ಮುಖಂಡರಾದ ಈರಪ್ಪ ಕುಡಗುಂಟಿ, ಎಂ.ಬಿ.ಅಳವಂಡಿ, ಶಂಕ್ರಪ್ಪ ನಿಂಗಾಪೂರ, ದೊಡ್ಡಯ್ಯ ಗವಾಯಿ, ಅನ್ನಪೂರ್ಣಮ್ಮ ಮನ್ನಾಪೂರ, ಸಾಧಿಕಅಲಿ, ರುದ್ರಪ್ಪ ಭಂಡಾರಿ, ಶಿವರಾಜ ನಗಡೋಣಿ, ರವೀಂದ್ರ ತೋಟದ್, ಪವಿತ್ರ ದೇಸಾಯಿ, ಷಂಷಾದ್ಧೀನ್ ಸಾಬ್,ವೀರಣ್ಣ ನಿಂಗೋಜಿ ಇನ್ನಿತರರು ಇದ್ದರು.