ರಸ್ತೆ ಕಾಮಗಾರಿಗೆ ಚಾಲನೆ

Drive for road work

ರಸ್ತೆ ಕಾಮಗಾರಿಗೆ ಚಾಲನೆ 

ಯಮಕನಮರಡಿ 24: ಸ್ಥಳೀಯ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಹಳೆ ಗುಡಗನಹಟ್ಟಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ ನಂ 4  ದಡ್ಡಿಕ್ರಾಸದ ವರೆಗೆ 1 ಕೋಟಿ 80 ಲಕ್ಷ ರೂಗಳ ಕಾಮಗಾರಿಗೆ ದಿ.24 ರಂದು ಯುವನಾಯಕರಾದ ರಾಹುಲ ಅಣ್ಣಾ ಜಾರಕಿಹೋಳಿರವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನಿಡಿದರು. ಈ ಸಂದರ್ಬದಲ್ಲಿ ಹಳೆ ಗುಡಗನಹಟ್ಟಿ ಗ್ರಾಮದ ಮುಖಂಡರಾದ ರಾಯಗೌಡ ಪಾಟೀಲ, ಬಾಳಪ್ಪಾ ಮಾಳೆದ, ಗುರುಸಿದ್ದ ಹಂಜಿ, ಮಾರುತಿ ಕಮತಿ, ಪಾಂಡುರಂಗ ಹುದ್ದಾರ, ಮಾರುತಿ ಶಿರಗನ್ನವರ, ಪ್ರವೀಣ ಮಾಡ್ಯಾಳ ಸಹಾಯಕ ಕಾರ್ಯ ನಿರ್ವಾಹಕ ಅಬಿಯಂತರ, ಹಾಗೂ ಬಸವರಾಜ ಶಿರೇಪ್ಪಗೋಳ ಸಹಾಯಕ ಅಭಿಯಂತರ, ಕಿರಣಸಿಂಗ ರಜಪೂತ, ವೀರಣ್ಣಾ ಬಿಸಿರೊಟ್ಟಿ, ರವೀಂದ್ರ ಜಿಂಡ್ರಾಳೀ, ಪ್ರವೀಣ ಮಾರ್ಯಾಳ ಹಾಗೂ ಗ್ರಾಮದ ಸಮಸ್ತ ನಾಗರಿಕರು ಸ್ಥಳಿಯ ಗ್ರಾ ಪಂ ಅದ್ಯಕ್ಷರು ಉಪಸ್ಥಿತರಿದ್ದರು.