ಸಹಯೋಗ ಮತ್ತು ಆವಿಷ್ಕಾರ ಉತ್ತೇಜನಕ್ಕೆ ಸಂಶೋಧಕರ ಸಮುದಾಯಕ್ಕೆ ಚಾಲನೆ

Drive for community of researchers to foster collaboration and innovation

* ರಾಜ್ಯದ 211 ಶಿಕ್ಷಣ ಸಂಸ್ಥೆಗಳ 3.5 ಲಕ್ಷ ವಿದ್ಯಾರ್ಥಿಗಳಿಗೆ ಅಗತ್ಯವಿರುವ 58 ಪುಸ್ತಕಗಳ ಲಭ್ಯತೆ ನೀಡುತ್ತದೆ  

* ಕರ್ನಾಟಕದಲ್ಲಿ ಸ್ಟೆಮ್ ಶಿಕ್ಷಣ ಸದೃಢಗೊಳಿಸಲು ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್ ವಿಟಿಯು ಜೊತೆ ಸಹಯೋಗ  

ಬೆಂಗಳೂರು, ಮಾರ್ಚ್‌ 07, 2025: ಶೈಕ್ಷಣಿಕ ಪ್ರಕಟಣೆಯಲ್ಲಿ ಜಾಗತಿಕ ಮುಂಚೂಣಿಯ ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಜೊತೆಯಲ್ಲಿ ಸಹಯೋಗ ಹೊಂದಿದ್ದು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ವಿಸ್ತಾರ ಶ್ರೇಣಿಯ ಡಿಜಿಟಲ್ ಮೆಟೀರಿಯಲ್ ಮತ್ತು ಪಾಂಡಿತ್ಯಪೂರ್ಣ ಕಂಟೆಂಟ್ ಅನ್ನು ಪೂರೈಸುವ ಮೂಲಕ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರದ ವಿಷಯಗಳಲ್ಲಿ ಆವಿಷ್ಕಾರ ಮತ್ತು ಪ್ರಗತಿಯನ್ನು ಉತ್ತೇಜಿಸಲಿದೆ.   

ಈ ಸಹಯೋಗದಿಂದ ಕರ್ನಾಟಕದ 211 ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ 3.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲಿದ್ದು 58 ಅಗತ್ಯ ಇ-ಪುಸ್ತಕಗಳ ಸಂಗ್ರಹವನ್ನು ಪೂರೈಸುತ್ತದೆ. ಕೇಂಬ್ರಿಡ್ಜ್‌ ಹೊಂದಿರುವ ವಿಸ್ತಾರ ಡೇಟಾಬೇಸ್ ಮತ್ತು ಪರಿಣಿತಿಯಿಂದ ವಿಟಿಯು ತನ್ನ ಶೈಕ್ಷಣಿಕ ಸಮುದಾಯವನ್ನು ಸಬಲೀಕರಿಸುವ ಮತ್ತು ಸಂಶೋಧನೆಯ ಶ್ರೇಷ್ಠತೆಯನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ.   

ಈ ಸಹಯೋಗವು ವಿಶ್ವಮಟ್ಟದ ಅಂತಾರಾಷ್ಟ್ರೀಯ ಶಿಕ್ಷಣ ಮತ್ತು ಸಂಪನ್ಮೂಲಗಳಿಗೆ ಭಾರತದ ವೃದ್ಧಿಸುತ್ತಿರುವ ಬೇಡಿಕೆಯನ್ನು ಪೂರೈಸುವ ಕೇಂಬ್ರಿಡ್ಜ್‌ ಧ್ಯೇಯಕ್ಕೆ ಪೂರಕವಾಗಿದ್ದು ಕಂಪ್ಯೂಟರ್ ಸೈನ್ಸ್‌ ಎಂಜಿನಿಯರಿಂಗ್ (ಸಿ.ಎಸ್‌.ಇ.) ಮತ್ತು ಎಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ (ಇಸಿಇ) ಮುಂತಾದ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಮೆಟೀರಿಯಲ್ ಲಭ್ಯತೆ ನೀಡುತ್ತದೆ. ಇ-ಪುಸ್ತಕ ಸಂಗ್ರಹವು ನಿರಂತರ ಲಭ್ಯತೆಯ ಮಾದರಿಯಲ್ಲಿ ಲಭ್ಯವಿದ್ದು ಅನಿಯಮಿತ ಬಳಕೆದಾರರ ಲಭ್ಯತೆ, ಪೂರ್ಣ ಡೌನ್ ಲೋಡ್ ಮಾಡಬಲ್ಲತೆ ಮತ್ತು ಮುದ್ರಿಸಬಲ್ಲತೆ ಹೊಂದಿದ್ದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅದರ ಗರಿಷ್ಠ ಬಳಕೆ ಸಾಧ್ಯವಾಗಿಸುತ್ತದೆ.   

ವಿಸಿಬಿಲಿಟಿ ಮತ್ತು ಲೇಖನಗಳ ಸಲ್ಲಿಕೆಗೆ ಕೇಂಬ್ರಿಡ್ಜ್‌ ಸಂಶೋಧಕರಿಗೆ ಸಮುದಾಯವನ್ನು ಪ್ರಾರಂಭಿಸಿದ್ದು ಅದು ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರಕಾಶಕರನ್ನು ಪ್ರಮುಖ ಜ್ಞಾನ ಪಾಲುದಾರನನ್ನಾಗಿಸುತ್ತದೆ. ಇದರ ಅಡಿಯಲ್ಲಿ ಸಂಶೋಧಕರು ಅವರ ಅಗತ್ಯಗಳನ್ನು ಪಡೆಯಲು ಒಂದೇ ಸೂರಿನಡಿ ಕಂಟೆಂಟ್ ಪಡೆಯಲು ಶಕ್ತರಾಗುತ್ತಾರೆ. ಈ ಉದ್ಘಾಟನಾ ಕಾರ್ಯಕ್ರಮ ಮಾರ್ಚ್‌ 5ರಂದು ಬೆಂಗಳೂರಿನಲ್ಲಿ ನಡೆದಿದ್ದು 100ಕ್ಕೂ ಹೆಚ್ಚು ಸಂಶೋಧಕರು ಸಂಶೋಧನೆಯ ವಿಕಾಸಗೊಳ್ಳುತ್ತಿರುವ ಪಾತ್ರ, ಮುಕ್ತ ಲಭ್ಯತೆಯ ಮಹತ್ವ ಮತ್ತು ಹೇಗೆ ಹೊಸ ಸಂಶೋಧಕ ಸಮುದಾಯವು ನೆಟ್ವರ್ಕಿಂಗ್ ಅವಕಾಶಗಳನ್ನು ಸೃಷ್ಟಿಸುತ್ತಾರೆ ಮತ್ತು ಸಂಪನ್ಮೂಲಗಳ ಲಭ್ಯತೆಗೆ ಅತ್ಯುತ್ತಮ ರೂಢಿಗಳನ್ನು ಬಳಸುತ್ತಾರೆ ಎನ್ನುವುದರ ಕುರಿತು ಚರ್ಚೆ ನಡೆಸಿದರು.   

ಈ ಸಹಯೋಗದ ಕುರಿತು ಕೇಂಬ್ರಿಡ್ಜ್‌ ಯೂನಿರ್ಸಿಟಿ ಪ್ರೆಸ್ ಮ್ಯಾನೇಜಿಂಗ್ ಡೈರೆಕ್ಟರ್ ಆಫ್ ಅಕಾಡೆಮಿಕ್ ಪಬ್ಲಿಷಿಂಗ್ ಮಂಡಿ ಹಿಲ್,”ಕೇಂಬ್ರಿಡ್ಜ್‌ ನಲ್ಲಿ ನಾವು ಉನ್ನತ ಗುಣಮಟ್ಟದ ಕಲಿಕಾ ವಿಷಯಗಳು ಶೈಕ್ಷಣಿಕ ಸಾಧನೆಗೆ ಅಗತ್ಯ ಎಂದು ನಂಬಿದ್ದೇವೆ. ವಿಟಿಯು ಜೊತೆಯಲ್ಲಿ ನಮ್ಮ ಸಹಯೋಗವು ಈ ಪ್ರದೇಶದ ಭಾರತೀಯ ವಿದ್ಯಾರ್ಥಿಗಳಿಗೆ ಅವರು ಆಯ್ಕೆ ಮಾಡಿಕೊಂಡ ಶಿಸ್ತುಗಳಲ್ಲಿ ಅಂತಾರಾಷ್ಟ್ರೀಯ ಸಂಪನ್ಮೂಲಗಳೊಂದಿಗೆ ಬೆಂಬಲಿಸುವ ನಮ್ಮ ಪ್ರಸ್ತುತದ ಬದ್ಧತೆಯ ಭಾಗವಾಗಿದೆ” ಎಂದರು.   

ಮಿಶ್ರಾ, ಮುಖರ್ಜೀ ಮತ್ತು ರಾಯ್ ಅವರ ಅವರ ಇಂಟ್ರೊಡಕ್ಷನ್ ಟು ಐಒಟಿ ಮತ್ತು ತ್ಸೆ ಹಾಗೂ ವಿಶ್ವನಾಥ್ ಅವರ ಫಂಡಮೆಂಟಲ್ಸ್‌ ಆಫ್ ವೈರ್ಲೆಸ್ ಕಮ್ಯನಿಕೇಷನ್ ನಂತಹ ಪಠ್ಯಪುಸ್ತಕಗಳು ನೇರವಾಗಿ ವಿಟಿಯುವಿನ ಪಠ್ಯಕ್ರಮಕ್ಕೆ ಪೂರಕವಾಗಿದ್ದು ಅದು ಪ್ರಸ್ತುತವಾಗಿವೆ ಮತ್ತು ವಿದ್ಯಾರ್ಥಿಗಳ ಸಾಧನೆಗೆ ಬೆಂಬಲಿಸುತ್ತವೆ. ಈ ಉಪಕ್ರಮಗಳು ಡಿಜಿಟಲ್ ಶೈಕ್ಷಣಿಕ ಸಂಪನ್ಮೂಲಗಳಿಗೆ ಹೆಚ್ಚುತ್ತಿರುವ ಬೇಡಿಕೆ, ಲಭ್ಯತೆಗೆ ಒತ್ತು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರಸ್ತುತತೆಯನ್ನು ಬಿಂಬಿಸುತ್ತವೆ.   

ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್ ಅಂಡ್ ಅಸೆಸ್ಮೆಂಟ್ ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಅರುಣ್ ರಾಜಮಣಿ, “ವಿಟಿಯು ಜೊತೆಯಲ್ಲಿ ನಮ್ಮ ಸಹಯೋಗವು ಭಾರತದಾದ್ಯಂತ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳಿಗೆ ಲಭ್ಯತೆ ನೀಡುವ ನಮ್ಮ ಧ್ಯೇಯೋದ್ದೇಶದಲ್ಲಿ ಪ್ರಮುಖ ಮುಂದುವರಿಕೆಯಾಗಿದೆ. ಅಂತಹ ಸಹಯೋಗಗಳ ಮೂಲಕ ನಾವು ಶೈಕ್ಷಣಿಕ ಸಮುದಾಯಕ್ಕೆ ಈ ಪುಸ್ತಕಗಳ ಲಭ್ಯತೆ ಮೂಲಕ ಬೆಂಬಲಿಸುತ್ತಿದ್ದೇವೆ. ಅಂತಹ ಸಹಯೋಗಗಳು ಎಲ್ಲ ಶಿಕ್ಷಣಾರ್ಥಿಗಳಿಗೆ ಅವರ ಹಿನ್ನೆಲೆ ಮತ್ತು ಸ್ಥಳ ಯಾವುದೇ ಇರಲಿ ಗುಣಮಟ್ಟದ ಸಂಪನ್ಮೂಲಗಳು ದೊರೆಯುವಂತೆ  ಮಾಡುವ ನಮ್ಮ ಧ್ಯೇಯಕ್ಕೆ ಪೂರಕವಾಗಿವೆ” ಎಂದರು.   

ಕೇಂಬ್ರಿಡ್ಜ್‌ ಸಹಯೋಗಗಳ ಪಟ್ಟಿಗೆ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಬನಾರಸ್ ಹಿಂದೂ ಯೂನಿವರ್ಸಿಟಿ, ದೆಹಲಿ ವಿಶ್ವವಿದ್ಯಾಲಯ, ಮಾಹೆ ಮತ್ತು ಐಐಟಿಗಳಿದ್ದು ಅವರಿಗೆ ಇಪುಸ್ತಕಗಳು ಮತ್ತು ಜರ್ನಲ್ ಗಳು ಲಭ್ಯವಾಗುವಂತೆ ಮಾಡಲಾಗಿದೆ.   

ಕೇಂಬ್ರಿಡ್ಜ್‌ ಭಾರತದಲ್ಲಿ ಶಿಕ್ಷಣ ಮತ್ತು ಸಂಶೋಧನೆಯ ಕ್ಷೇತ್ರವನ್ನು ಬದಲಾಯಿಸುವ ವಿಸ್ತಾರ ಧ್ಯೇಯಕ್ಕೆ ಪೂರಕವಾಗಿ ಭಾರತ ಸರ್ಕಾರವು ಒಂದು ದೇಶ ಒಂದು ಚಂದಾದಾರಿಕೆ (ಒ.ಎನ್‌.ಒ.ಎಸ್‌.) ಮೂಲಕ ಉತ್ತೇಜನ ನೀಡಿದೆ. ಕೇಂಬ್ರಿಡ್ಜ್‌ ಒ.ಎನ್‌.ಒ.ಎಸ್‌. ಉಪಕ್ರಮದ ಪ್ರಮುಖ ಪ್ರಕಾಶಕನಾಗಿದೆ ಮತ್ತು ಜ್ಞಾನವನ್ನು ಪ್ರಜಾಸತ್ತೀಯಗೊಳಿಸಲು ಹಾಗೂ ಸದೃಢ ರಾಷ್ಟ್ರೀಯ ಸಂಶೋಧನಾ ವ್ಯವಸ್ಥೆ ರೂಪಿಸಲು ಬದ್ಧವಾಗಿದೆ. ಕೇಂಬ್ರಿಡ್ಜ್‌ ನ ಹಲವಾರು ಪ್ರತಿಷ್ಠಿತ ಜರ್ನಲ್ ಗಳಾದ ಜರ್ನಲ್ ಆಫ್ ಫ್ಲೂಯಿಡ್ ಮೆಕ್ಯಾನಿಕ್ಸ್‌, ಇಂಡಸ್ಟ್ರಿಯಲ್ ಅಂಡ್ ಆರ್ಗನೈಸೇಷನಲ್ ಸೈಕಾಲಜಿ ಮತ್ತು ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ಗಳು ಒ.ಎನ್‌.ಒ.ಎಸ್‌. ಮೂಲಕ ಭಾರತದ ವಿಶ್ವವಿದ್ಯಾಲಯಗಳಿಗೆ ಲಭ್ಯವಿರುತ್ತವೆ.