ರಾಷ್ಟ್ರೀಯ ಏಕತಾ ಓಟಕ್ಕೆ ಚಾಲನೆ

ಗದಗ: ರಾಷ್ಟ್ರೀ ಏಕತಾ ದಿವಸದ ಪ್ರಯುಕ್ತ ನಗರದ ಗಾಂಧೀ ವೃತ್ತದಲ್ಲಿಂದು ಗದಗ ಜಿಲ್ಲಾ ಪೋಲಿಸ ಹಾಗೂ ಗದಗ-ಬೆಟಗೇರಿ ನಾಗರಿಕರ ಸಹಯೋಗದಲ್ಲಿ ಜರುಗಿದ ರಾಷ್ಟ್ರೀಯ ಏಕತಾ ಓಟಕ್ಕೆ ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ ಚಾಲನೆ ನೀಡಿದರು. ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಗಣ್ಯರು, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಏಕತಾ ಓಟವು ಗಾಂಧೀ ವೃತ್ತದಿಂದ ಆರಂಭವಾಗಿ ಭೀಷ್ಮ ಕೆರೆಗೆ ಆಗಮಿಸಿ ಮುಕ್ತಾಯಗೊಂಡಿತು. ತದನಂತರ ಬಸವೇಶ್ವರ ಪುತ್ಥಳಿ ಹತ್ತಿರ ರಾಷ್ಟ್ರೀಯ ಏಕತಾ ದಿವಸ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳಲಾಯಿತು.